ಆದಿವಾಸಿ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

By Kannadaprabha News  |  First Published Jun 28, 2021, 10:12 AM IST
  • ಕೊರೋನಾ ಲಾಕ್‌ಡೌನ್‌ ಹಿನ್ನೆಲೆ ಕಾಡಂಚಿನಲ್ಲಿರುವ ಆದಿವಾಸಿ ಕುಟುಂಬಗಳಿಗೆ ಫುಡ್ ಕಿಟ್
  • ಡೀಡ್‌ ಸ್ವಯಂ ಸೇವಾ ಸಂಸ್ಥೆಯ ಸಹಯೋಗದಲ್ಲಿ ಆಹಾರ ಪದಾರ್ಥ
  • 200 ಆದಿವಾಸಿ ಕುಟುಂಬಗಳಿಗೆ  ಆಹಾರ ಪದಾರ್ಥ ವಿತರಣೆ

  ಹುಣಸೂರು (ಜೂ.28):  ಕೊರೋನಾ ಲಾಕ್‌ಡೌನ್‌ ಹಿನ್ನೆಲೆ ಕಾಡಂಚಿನಲ್ಲಿರುವ ಆದಿವಾಸಿ ಕುಟುಂಬಗಳಿಗೆ ಡೀಡ್‌ ಸ್ವಯಂ ಸೇವಾ ಸಂಸ್ಥೆಯ ಸಹಯೋಗದಲ್ಲಿ ಆಹಾರ ಪದಾರ್ಥಗಳ ಕಿಟ್‌ಗಳನ್ನು ಇತ್ತೀಚೆಗೆ ವಿತರಿಸಲಾಯಿತು.

ತಾಲೂಕಿನ ಹನಗೋಡು ಹೋಬಳಿಯ ಶೆಟ್ಟಹಳ್ಳಿ, ಬಿಲ್ಲೇನಹೊಸಹಳ್ಳಿ, ಲಕ್ಷ್ಮಣಪುರ, ಕರ್ಣಕುಪ್ಪೆ ಗಿರಿಜನ ಹಾಡಿ ಸೇರಿದಂತೆ ಒಟ್ಟು 200 ಆದಿವಾಸಿ ಕುಟುಂಬಗಳಿಗೆ ಹಸಿವು ನೀಗಿಸೋಣ ಚಳುವಳಿ ಬೆಂಗಳೂರು, (ಲೆಟ್ಸ್‌ ಫೀಡ್‌ ಹಂಗ್ರಿ ಸ್ಟಮಕ್ಸ್‌) ಬಾಲ್ಯ ಟ್ರಸ್ಟ್‌ ಮೈಸೂರು, ಬುಡಕಟ್ಟು ಕೃಷಿಕರ ಸಂಘ ಹುಣಸೂರು ಮತ್ತು ಡೀಡ್‌ ಸ್ವಯಂ ಸೇವಾ ಸಂಸ್ಥೆ ಸಹಯೋಗದಲ್ಲಿ 200 ಆದಿವಾಸಿ ಕುಟುಂಬಗಳಿಗೆ ಅಕ್ಕಿ, ರಾಗಿ ಮತ್ತು ಗೋಧಿ ಹಿಟ್ಟು, ಬೇಳೆ, ಅಡಿಗೆಎಣ್ಣೆ, ಉಪ್ಪು, ಸಾಂಬಾರ್‌ ಪುಡಿ, ಸೋಪು, ಸ್ಯಾನಿಟೈಜರ್‌, ಮಾಸ್ಕ್‌, ಸೇರಿದಂತೆ ಇತರೆ ಪದಾರ್ಥಗಳನ್ನೊಳಗೊಂಡ ಪಡಿತರ ಕಿಟ್‌ಗಳನ್ನು ವಿತರಿಸಿತು.

Latest Videos

undefined

ಮೈಸೂರು : ವ್ಯಾಪಾರ, ವಹಿವಾಟಿಗೆ ಅವಕಾಶ

ಬೆಂಗಳೂರಿನ ಹಸಿವು ನೀಗಿಸೋಣ ಆಂದೋಲನದ ಮುಖ್ಯಸ್ಥ ಹರೀಶ್‌ ಮಾತನಾಡಿ, ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಹಾಡಿ ಸಮುದಾಯದವರ ಕುಟುಂಬಗಳು ಕೊರೋನಾ ಲಾಕ್‌ಡೌನ್‌ದಿಂದಾಗಿ ಸಂಕಷ್ಟಕ್ಕೀಡಾಗಿವೆ, ನಮ್ಮ ಆಂದೋಲನದ ವತಿಯಿಂದ ಹಾಡಿಯ ಒಂದು ಸಾವಿರ ಕುಟುಂಬಗಳಿಗೆ ಪಡಿತರ ಸಹಾಯವನ್ನು ಮಾಡುವ ಪ್ರಯತ್ನ ಮಾಡುತ್ತೇವೆಂದು ತಿಳಿಸಿದರು.

ಕೊರೋನಾ ಕಾರಣ ಕೆಲಸ ಇಲ್ಲ, ಸರ್ಕಾರದ ಸೌಲಭ್ಯ ಸಿಗುತ್ತಿಲ್ಲ, ನೆರವಿನ ನಿರೀಕ್ಷೆಯಲ್ಲಿ 45 ಮೇದಾರ ಕುಟುಂಬ! .

ಡೀಡ್‌ ಸಂಸ್ಥೆಯ ಮುಖ್ಯಸ್ಥ ಡಾ. ಶ್ರೀಕಾಂತ್‌ ಮಾತನಾಡಿ, ಹಾಡಿ ಜನರಿಗೆ ಕೊರೋನಾದಿಂದಾಗುವ ಸಮಸ್ಯೆಗಳು ಮತ್ತು ಮುನ್ನೆಚ್ಚರಿಕಾ ಕ್ರಮಗಳ ಕುರಿತು ಜಾಗೃತಿ ಮೂಡಿಸಿದಲ್ಲದೇ, ಕೆಲವು ಮುಖ್ಯ ಗಿಡ ಮೂಲಿಕೆಗಳಿಂದ ಕಷಾಯ ಮಾಡಿ ಕುಡಿಯುವುದಿಂದ ಕರೋನದಿಂದ ರಕ್ಷಿಸಿಕೊಳ್ಳುವುದರ ಬಗ್ಗೆ ಮಾಹಿತಿ ನೀಡಿದರು.

click me!