ಜಂಬೂಸವಾರಿಯಲ್ಲಿ ಆನೆಗಳಿಗೆ ಕುಸುರೆ ಆಹಾರ

By Kannadaprabha NewsFirst Published Oct 7, 2019, 9:50 AM IST
Highlights

ಆನೆಗಳ ದೇಹದಷ್ಟೇ ಹೊಟ್ಟೆಸಹ ದೊಡ್ಡದಾಗಿದ್ದು, ಅವುಗಳ ಹಸಿವು ನೀಗಿಸುವುದು ಕಷ್ಟಕರ. ಆದರೂ, ಆನೆಗಳ ಪೂರ್ತಿ ಹೊಟ್ಟೆಸಂಪೂರ್ಣ ತುಂಬಿಸಲು ಸಾಧ್ಯವಾಗದಿದ್ದರೂ ಹಸಿವು ನೀಗಿಸುವ ಪ್ರಯತ್ನವನ್ನು ಅರಣ್ಯ ಇಲಾಖೆಯವರು ಪ್ರತಿ ವರ್ಷ ಜಂಬೂಸವಾರಿ ಮಾಡಿಕೊಂಡು ಬರುತ್ತಿದ್ದಾರೆ.

ಮೈಸೂರು(ಅ.07): ದಸರಾ ವಿಜಯದಶಮಿ ಮೆರವಣಿಗೆಯಲ್ಲಿ ಸಾಗುವ ಆನೆಗಳಿಗೆ ರಾಜಮಾರ್ಗ ಮಧ್ಯೆ ಆಹಾರ ನೀಡುವ ಸಾಹಸವನ್ನು ಪ್ರತಿ ವರ್ಷ ಅರಣ್ಯ ಇಲಾಖೆಯ ಸಿಬ್ಬಂದಿ ಮಾಡುತ್ತಿದ್ದಾರೆ.

ಆನೆಗಳ ದೇಹದಷ್ಟೇ ಹೊಟ್ಟೆಸಹ ದೊಡ್ಡದಾಗಿದ್ದು, ಅವುಗಳ ಹಸಿವು ನೀಗಿಸುವುದು ಕಷ್ಟಕರ. ಆದರೂ, ಆನೆಗಳ ಪೂರ್ತಿ ಹೊಟ್ಟೆಸಂಪೂರ್ಣ ತುಂಬಿಸಲು ಸಾಧ್ಯವಾಗದಿದ್ದರೂ ಹಸಿವು ನೀಗಿಸುವ ಪ್ರಯತ್ನವನ್ನು ಅರಣ್ಯ ಇಲಾಖೆಯವರು ಪ್ರತಿ ವರ್ಷ ಜಂಬೂಸವಾರಿ ಮಾಡಿಕೊಂಡು ಬರುತ್ತಿದ್ದಾರೆ.

ಸತತ 8ನೇ ಬಾರಿ ಅರ್ಜುನ ಮೇಲೆ ಚಿನ್ನದ ಅಂಬಾರಿ

ಸೊಪ್ಪು ಸೇರಿದಂತೆ ಇನ್ನಿತರ ಮಾಮೂಲಿ ಆಹಾರವನ್ನು ಮಾರ್ಗ ಮಧ್ಯೆ ಆನೆಗಳಿಗೆ ನೀಡಲು ಸಾಧ್ಯವಿಲ್ಲ. ಹೀಗಾಗಿ, ಅರಣ್ಯ ಇಲಾಖೆಯವರು ಕುಸುರೆ ಎಂಬ ವಿಶೇಷ ಆಹಾರವನ್ನು ತಯಾರಿಸಿ, ಮಾರ್ಗ ಮಧ್ಯೆ ಅಲ್ಲಲ್ಲಿ ಆನೆಗಳಿಗೆ ನೀಡುವ ವ್ಯವಸ್ಥೆ ಮಾಡುತ್ತಾರೆ.

ಆನೆಗಳಿಗಾಗಿ ಅರಣ್ಯ ಇಲಾಖೆಯ ಸಿಬ್ಬಂದಿ, ಆನೆ ಮಾವುತರು ಮತ್ತು ಕಾವಾಡಿಗಳು ಸೇರಿ ಮೈಸೂರು ಅರಮನೆ ಆವರಣದ ಆನೆ ಬಿಡಾರದಲ್ಲಿ ಕುಸುರೆ ತಯಾರಿಸುತ್ತಾರೆ.

'ಚಂದನ್ ಶೆಟ್ಟಿಯಿಂದ ನನ್ನ ಬಿಪಿ, ಶುಗರ್ ಹೆಚ್ಚಾಗಿದೆ'

ಇದರಲ್ಲಿ ವಿಶೇಷ ಕುಸುರೆ ಮತ್ತು ಸಾಮಾನ್ಯ ಎಂಬ ಎರಡು ವಿಧಗಳಿವೆ. ಅಂಬಾರಿ ಮತ್ತು ಅದರ ಅಕ್ಕಪಕ್ಕದಲ್ಲಿ ಸಾಗುವ ಕುಮ್ಕಿ ಆನೆಗಳಿಗೆ ವಿಶೇಷ ಕುಸುರೆ ಹಾಗೂ ಉಳಿದ ಆನೆಗಳಿಗೆ ಸಾಮಾನ್ಯ ಕುಸುರೆ ನೀಡಲಾಗುತ್ತದೆ. ದಸರಾ ಗಜಪಡೆ ಹೊಟ್ಟೆತುಂಬಿಸಲು ಒಂದು ದಿನ ಮುಂಚಿತವಾಗಿಯೇ ಅರಮನೆ ಆವರಣದಲ್ಲಿ ಮಾವುತರು, ಕಾವಾಡಿಗಳು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸೇರಿ ಕುಸುರೆ ಸಿದ್ಧ ಮಾಡಿಕೊಳ್ಳುತ್ತಾರೆ.

ಏನಿದು ಕುಸುರೆ?

750 ಕೆ.ಜಿ ಚಿನ್ನದ ಅಂಬಾರಿ ಹೊತ್ತು ಸಾಗುವ ಅರ್ಜುನ ಆನೆ, ಅದರ ಅಕ್ಕಪಕ್ಕದಲ್ಲಿ ಸಾಗುವ ಕುಮ್ಕಿ ಆನೆಗಳಾದ ಕಾವೇರಿ ಮತ್ತು ವಿಜಯಗೆ ವಿಶೇಷ ಕುಸುರೆ ನೀಡಲಾಗುತ್ತದೆ. ಈ ಮೂರು ಆನೆಗಳಿಗಾಗಿ ಮಾತ್ರ ಗರಿಕೆ ಹುಲ್ಲಿನಲ್ಲಿ ಗ್ಲೂಕೋಸ್‌ ಪೌಡರ್‌, ಅವಲಕ್ಕಿ, ಬೆಲ್ಲ, ತೆಂಗಿನಕಾಯಿಯನ್ನು ಕಟ್ಟಿಉಂಡೆ ಆಕಾರದಲ್ಲಿ ಸಿದ್ಧಪಡಿಸಲಾಗುತ್ತದೆ. ಈ ವಿಶೇಷ ಕುಸುರೆಯನ್ನು ಸುಮಾರು 10 ಚೀಲಗಳಲ್ಲಿ ತುಂಬಿ ಅಂಬಾರಿ ಹಿಂದೆ ಸಾಗುವ ಜೀಪ್‌ನಲ್ಲಿ ಇರಿಸಲಾಗುತ್ತದೆ. ಮಾರ್ಗ ಮಧ್ಯೆ ಆನೆಗಳಿಗೆ ಈ ವಿಶೇಷ ಕುಸುರೆ ನೀಡಲಾಗುತ್ತದೆ.

ವಿಶ್ವವಿಖ್ಯಾತ ಜಂಬೂಸವಾರಿಗೆ ಮೈಸೂರು ಸಜ್ಜು

ಅದೇ ರೀತಿ ನಿಶಾನೆ, ನೌಫತ್‌ ಹಾಗೂ ಸಾಲಾನೆಗಳಿಗಾಗಿ ಬತ್ತದ ಹುಲ್ಲಿನಲ್ಲಿ ಬತ್ತ, ತೆಂಗಿನಕಾಯಿ, ಬೆಲ್ಲ, ಕಬ್ಬು ಸೇರಿಸಿ ಉಂಡೆ ಆಕಾರದಲ್ಲಿ ಕಟ್ಟಿಕುಸುರೆ ತಯಾರಿಸಲಾಗುತ್ತದೆ. ಈ ಕುಸುರೆಯನ್ನು ಸುಮಾರು 30 ಚೀಲಗಳಲ್ಲಿ ತುಂಬಿಡಲಾಗುತ್ತದೆ. ಜಂಬೂಸವಾರಿ ದಿನ ಕುಸುರೆ ಮೂಟೆಯನ್ನು ವಾಹನವೊಂದರಲ್ಲಿ ಇರಿಸಿ ರಾಜಮಾರ್ಗದಲ್ಲಿ ಸಾಗಿಸಿ, ನಿಗದಿತ ಸ್ಥಳಗಳಲ್ಲಿ ಆನೆಗಳಿಗೆ ಕುಸುರೆ ನೀಡಲಾಗುತ್ತದೆ.

ಇಂದು ಗಜಪಡೆಗೆ ಪೂಜೆ

ಆಯುಧ ಪೂಜೆ ಹಿನ್ನೆಲೆಯಲ್ಲಿ ದಸರಾ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಮಾವುತರು, ಕಾವಾಡಿಗಳು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಅಲ್ಲಿಂದ ವಾಪಸ್‌ ಅರಮನೆಗೆ ಬಂದ ಮೇಲೆ ಆನೆಗಳಿಗಾಗಿ ಕುಸುರೆ ತಯಾರಿಸುಕೊಳ್ಳುತ್ತಾರೆ ಎನ್ನುತ್ತಾರೆ ದಸರಾ ಆನೆ ವೈದ್ಯ ಡಾ.ಡಿ.ಎನ್‌. ನಾಗರಾಜು.

-ಬಿ. ಶೇಖರ್‌ ಗೋಪಿನಾಥಂ

click me!