ಹಾಸನ : ಒಂದು ವರ್ಷ ಸಂಚಾರ ನಿಷೇಧಿಸಿ ಡಿಸಿ ಆದೇಶ

By Kannadaprabha NewsFirst Published Jan 14, 2020, 10:57 AM IST
Highlights

ಈ ರಸ್ತೆಯಲ್ಲಿ ಒಂದು ವರ್ಷಗಳ ಸಂಚಾರ ನಿಷೇಧಿಸಿ ಹಾಸನ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಕಾಮಗಾರಿ ನಿಟ್ಟಿನಲ್ಲಿ ಸಂಚಾರಕ್ಕೆ ನಿಷೇಧ ಹೇರಲಾಗಿದೆ. 

ಹಾಸನ [ಜ.14]:  ರೈಲ್ವೇ ಮೇಲ್ಸುತುವೆ ಕಾಮಗಾರಿ ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ಹಾಸನ ನಗರದ ಎನ್‌. ಆರ್‌.ವೃತ್ತದಿಂದ ಹೊಸ ಬಸ್‌ ನಿಲ್ದಾಣ ಕಡೆಗೆ ಹೋಗುವ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಒಂದು ವರ್ಷದವರೆಗೆ ನಿಷೇಧಿಸಲಾಗಿದೆ.

ಈ ಬಗ್ಗೆ ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಆದೇಶ ಹೊರಡಿಸಿದ್ದು, ಹೊಸ ಬಸ್‌ ನಿಲ್ದಾಣದ ಕಡೆ ಹೋಗುವ ರೈಲ್ವೇ ಗೇಟ್‌ ಬಳಿ 280 ಮೀಟರ್‌ ರೈಲ್ವೇ ಮೇಲ್ಸುತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಪರ್ಯಾಯ ರಸ್ತೆಗಳು ಯಾವು?

ಹಾಸನ ತಾಲೂಕು ಕಚೇರಿ ಪಕ್ಕದಲ್ಲಿ ಇರುವ ಕಾಂಕ್ರೀಟ್‌ ರಸ್ತೆಯನ್ನು ದ್ವಿಮುಖ ಸಂಚಾರ ರಸ್ತೆಯನ್ನಾಗಿ ಪರಿವರ್ತಿಸಲಾಗಿದೆ.

ಎನ್‌ಡಿಆರ್‌ಕೆ ಕಾಲೇಜು ಹತ್ತಿರ ಇರುವ ರೇಲ್ವೆ ಕೆಳ ಸೇತುವೆಯಿಂದ ಹಾಸನ ಬಸ್‌ ನಿಲ್ದಾಣ ಸಂಪರ್ಕಿಸುವ ರಸ್ತೆಯನ್ನು ಏಕಮುಖ ಸಂಚಾರ ರಸ್ತೆಯನ್ನಾಗಿ ಮತ್ತು ರೈಲ್ವೇ ಗೇಟ್‌ನ ಸಮಾನಾಂತರ ರಸ್ತೆಯಿಂದ ಸರ್ಕಾರಿ ನರ್ಸಿಂಗ್‌ ಕಾಲೇಜು ಸಂಪರ್ಕಿಸುವ ರಸ್ತೆಯನು ಏಕಮುಖ ಸಂಚಾರ ರಸ್ತೆಯನ್ನಾಗಿ ಪರಿವರ್ತಿಸಲಾಗಿದೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಮತ್ತು ಇತರೆ ಭಾರಿ ವಾಹನಗಳು ಹೊಸ ಬಸ್‌ ನಿಲ್ದಾಣದಿಂದ ಬೈಪಾಸ್‌ ಮುಖಾಂತರ ಸಂಚರಿಸಿ, ಬೆಂಗಳೂರು ರಸ್ತೆ, ಅರಸೀಕೆರೆ ರಸ್ತೆ, ಗೊರೂರು ರಸ್ತೆ, ಬೇಲೂರು ರಸ್ತೆ ಮತ್ತು ಸಕಲೇಶಪುರ ರಸ್ತೆಗೆ ಸಂಪರ್ಕ ಕಲ್ಪಿಸಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಿ.ಎಂ.ರಸ್ತೆಯಿಂದ ಹೊಸ ಬಸ್‌ ನಿಲ್ದಾಣ ಕಡೆಗೆ ಸಂಚರಿಸುವ ಲಘು ವಾಹನಗಳು ಬಿ.ಎಂ. ರಸ್ತೆಯಿಂದ ಎನ್‌ಡಿಆರ್‌ಕೆ ಕಾಲೇಜು ಹತ್ತಿರದ ರೇಲ್ವೆ ಕೆಳ ಸೇತುವೆ ಯಿಂದ ಸಮಾನಾಂತರ ರಸ್ತೆಯಲ್ಲಿ ಹಾದು ಹೊಸ ಬಸ್‌ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಾಗಿದೆ.

12 ಸ್ಥಾನದಲ್ಲಿ 12ರಲ್ಲೂ ಜೆಡಿಎಸ್‌ಗೆ ಜಯ : ದಳ ತೆಕ್ಕೆಗೆ ಆಡಳಿತ...

ಹೊಸ ಬಸ್‌ ನಿಲ್ದಾಣದಿಂದ ಬಿ.ಎಂ.ರಸ್ತೆ ಕಡೆಗೆ ಸಂಚರಿಸುವ ಲಘು ವಾಹನಗಳು ಹೊಸ ಬಸ್‌ ನಿಲ್ದಾಣ- ರೈಲ್ವೇ ಗೇಟ್‌ ಕಡೆ ಆಗಮಿಸಿ (ರೈಲ್ವೇ ಹಳಿ ಸಮಾನಾಂತರ ರಸ್ತೆಯಿಂದ) ಏಕಮುಖ ರಸ್ತೆಯಲ್ಲಿ ಸರ್ಕಾರಿ ಕಾಲೇಜು ಕಡೆ ಆಗಮಿಸಿ ಹಾಸನ ತಾಲೂಕು ಕಚೇರಿ ಕಾಂಕ್ರೀಟ್‌ ರಸ್ತೆಯಿಂದ ಬಿ.ಎಂ.ರಸ್ತೆಗೆ ಸಂಪರ್ಕ ಕಲ್ಪಿಸಲಾಗಿದೆ.

click me!