ನಿಮಿಷಾಂಬ ದೇಗುಲದ 18 ಹುಂಡಿಗಳಲ್ಲಿ 31 ರೂಪಾಯಿ ಲಕ್ಷ ಸಂಗ್ರಹ..!

By Kannadaprabha NewsFirst Published Jan 14, 2020, 10:37 AM IST
Highlights

ನಿಮಿಷಾಂಬ ದೇವಾಲಯದ ಒಟ್ಟು 18 ಹುಂಡಿಗಳನ್ನು ಎಣಿಕೆ ಮಾಡಲಾಗಿದೆ. ಒಟ್ಟು ಹುಂಡಿಯಲ್ಲಿ 31,72,441 ರು. ಸಂಗ್ರವಾಗಿದೆ. 121. ಗ್ರಾಂ ಚಿನ್ನ, ಹಾಗೂ 256 ಗ್ರಾಂ. ಬೆಳ್ಳಿ ದೊರೆತಿದೆ.

ಮಂಡ್ಯ(ಜ.14): ಶ್ರೀರಂಗಪಟ್ಟಣ ಪ್ರಸಿದ್ಧ ನಿಮಿಷಾಂಬ ದೇವಾಲಯದಲ್ಲಿನ ಭಕ್ತರ ಕಾಣಿಕೆ ಹುಂಡಿಯ ಎಣಿಕೆ ಕಾರ್ಯ ಸೋಮವಾರ ನಡೆಯಿತು. ದೇವಾಲಯದ ಒಟ್ಟು 18 ಹುಂಡಿಗಳನ್ನು ಎಣಿಕೆ ಮಾಡಲಾಗಿದೆ. ಒಟ್ಟು ಹುಂಡಿಯಲ್ಲಿ 31,72,441 ರು. ಸಂಗ್ರವಾಗಿದೆ. 121. ಗ್ರಾಂ ಚಿನ್ನ, ಹಾಗೂ 256 ಗ್ರಾಂ. ಬೆಳ್ಳಿ ದೊರೆತಿದೆ.

ಮಲೇಶಿಯಾದ 21, ಅಮೇರಿಕಾದ 2 ಡಾಲರ್, ಶ್ರೀಲಂಕಾ 10 ರು. ಹುಂಡಿಯಲ್ಲಿ ಸಂಗ್ರಹವಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಅಮಾನ್ಯಗೊಂಡಿದ್ದ 500 ಮುಖಬೆಲೆಯ 2 ನೋಟು ಹಾಗೂ 1 ಸಾವಿರ ರು. ಮುಖ ಬೆಲೆಯ 1 ನೋಟು ಎಣಿಕೆ ವೇಳೆ ಹುಂಡಿಯಲ್ಲಿ ಪತ್ತೆಯಾಗಿದೆ.

ಚುಕುಬುಕು ರೈಲಿನಲ್ಲೇ ಕುಳಿತು ಪಾಠ ಕೇಳಲಿದ್ದಾರೆ ಸರ್ಕಾರಿ ಶಾಲೆ ಮಕ್ಕಳು..!

ಕಳೆದ ಮೂರು ತಿಂಗಳ ಹಿಂದೆಯಷ್ಟೇ ದೇವಾಲಯದ ಹುಂಡಿ ಎಣಿಕೆ ಮಾಡಲಾಗಿತ್ತು. ಸಂಗ್ರಹವಾದ ಹಣವನ್ನು ಎಸ್‌ಬಿಐ ಬ್ಯಾಂಕ್‌ನಲ್ಲಿ ಜಮಾ ಮಾಡಲಾಗಿದೆ ಎಂದು ದೇವಾಲಯದ ಇ.ಒ ಗಂಗಯ್ಯ ತಿಳಿಸಿದ್ದಾರೆ.

ಮುಜರಾಯಿ ತಹಶೀಲ್ದಾರ್ ಕೃಷ್ಣ ಎಣಿಕೆ ವೇಳೆ ಭೇಟಿ ನೀಡಿದ್ದರು. ಶ್ರೀರಂಗಪಟ್ಟಣ ಎಸ್‌ಬಿಐ ಬ್ಯಾಂಕ್ ಸಿಬ್ಬಂದಿ, ಸ್ತ್ರೀಶಕ್ತಿ ಮಹಿಳೆಯರು ಹಾಗೂ ದೇವಾಲಯದ ಸಿಬ್ಬಂದಿ ಎಣಿಕೆಯಲ್ಲಿ ಭಾಗಿಯಾಗಿದ್ದರು. ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಿ.ಎಸ್ ಶಿವು, ಸದಸ್ಯ ಗಂಜಾಂ ಮಂಜು ಸೇರಿದಂತೆ ಇತರ ಸದಸ್ಯರು ಇದ್ದರು. ದೇವಾಲಯದ ಅಧೀಕ್ಷಕ ದಿನೇಶ್, ಮೇಲ್ವಿಚಾರಕ ಸೂರ್ಯನಾರಾಯಣ ಭಟ್ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು.

ರಾಜ್ಯದ ಶ್ರೀಮಂತ ದೇಗುಲದಲ್ಲಿನ್ನು ವಸ್ತ್ರ ಸಂಹಿತೆ..!

click me!