ಮಲೆನಾಡಿನಲ್ಲಿ ಜನರ ನಿದ್ದೆಗೆಡಿಸಿದ ಜೀರುಂಡೆ ಸದ್ದು: ಜನರು ಹೈರಾಣು

By Govindaraj S  |  First Published Aug 25, 2023, 12:24 PM IST

ಮಲೆನಾಡಿನಲ್ಲಿ ಮಳೆ ಕಡಿಮೆ ಆಗಿದೆ. ಆದ್ರೆ ಮಳೆ ದಿಕ್ಸೂಚಿ ಎನ್ನುವಂತೆ ಮಲೆನಾಡಿನಲ್ಲಿ ಕೇಳಿಬರುವ ಜೀರುಂಡೆಗಳ ಸದ್ದು ವಿಪರೀತವಾಗಿದ್ದು  ಅವುಗಳ ಚೀತ್ಕರಿಸುವ ವಿಪರೀತ ಸದ್ದು ಕೆಲವರಿಗೆ ವಿಸ್ಮಯವನ್ನುಂಟು ಮಾಡಿದ್ರೆ ಮತ್ತೆ ಕೆಲವರಿಗೆ ಕಿರಿಕಿರಿ ಉಂಟುಮಾಡುತ್ತಿದೆ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ, ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಆ.25): ಮಲೆನಾಡಿನಲ್ಲಿ ಮಳೆ ಕಡಿಮೆ ಆಗಿದೆ. ಆದ್ರೆ ಮಳೆ ದಿಕ್ಸೂಚಿ ಎನ್ನುವಂತೆ ಮಲೆನಾಡಿನಲ್ಲಿ ಕೇಳಿಬರುವ ಜೀರುಂಡೆಗಳ ಸದ್ದು ವಿಪರೀತವಾಗಿದ್ದು  ಅವುಗಳ ಚೀತ್ಕರಿಸುವ ವಿಪರೀತ ಸದ್ದು ಕೆಲವರಿಗೆ ವಿಸ್ಮಯವನ್ನುಂಟು ಮಾಡಿದ್ರೆ ಮತ್ತೆ ಕೆಲವರಿಗೆ ಕಿರಿಕಿರಿ ಉಂಟುಮಾಡುತ್ತಿದೆ. ಈ ವರ್ಷ ಮಳೆಗಾಲ ಆರಂಭವಾದ ನಂತರ ಮಲೆನಾಡು ಭಾಗದಲ್ಲಿ ಸಿಕಾಡ(ಜೀರುಂಡೆ) ಕೀಟಗಳ ಸಂತಾನ ಗಣನೀಯವಾಗಿ ಹೆಚ್ಚಾಗಿದೆ. ಅದರ ಜೊತೆಗೆ ಅವು ಚೀತ್ಕರಿಸುವ ವಿಪರೀತ ಸದ್ದು ವಿಸ್ಮಯವನ್ನುಂಟುಮಾಡುತ್ತಿದೆ.

Tap to resize

Latest Videos

undefined

ಸಿಕಾಡ(ಜೀರುಂಡೆ) ಕೀಟಗಳ ಸಂತಾನ ಗಣನೀಯವಾಗಿ ಹೆಚ್ಚು: ಸಿಕಾಡಗಳ ಕೂಗು ಮಲೆನಾಡಿಗರಿಗೆ ಸಾಮಾನ್ಯದ ಸಂಗತಿ, ಮಳೆಗಾಲ ಆರಂಭವಾಯಿತೆಂದರೆ ಹವಾಮಾನದ ದಿಕ್ಸೂಚಿ ಎನ್ನುವಂತೆ ಕೇಳಿಬರುವ ಝೇಂಕಾರ ಸಾಂಪ್ರದಾಯಿಕ ಸದ್ದಾಗಿ ವಾತಾವರಣದಲ್ಲಿ ಹಾಸುಹೊಕ್ಕಾಗಿದೆ. ಆದರೆ ಈ ವರ್ಷದ ಸಿಕಾಡಗಳ ಕೂಗಿನಲ್ಲಿ ಯಾವುದೋ ಹಪಹಪಿ ಇದೆಯೇನೋ ಎನ್ನುವಷ್ಟರ ಮಟ್ಟಿಗೆ ಹೆಚ್ಚಿದೆ. ಸಿಕಾಡಗಳು ಹವಾಮಾನದ ನಿಖರ ಮುನ್ಸೂಚನೆ ನೀಡುವ ಸಾಧಕಗಳಂತೆ ಕೆಲಸ ಮಾಡುತ್ತವೆ. ಅವುಗಳ ಕೂಗು ಆರಂಭವಾಯಿತೆಂದರೆ ಮಳೆ ಬರುವುದು ನಿಶ್ಚಿತವಾಗಿರುತ್ತಿತ್ತು. ಹವಾಮಾನ ತಜ್ಞರ ಅಂದಾಜು ಸುಳ್ಳಾದರೂ ಸಿಕಾಡಗಳ ಮುನ್ಸೂಚನೆ ಸುಳ್ಳಾಗುವುದಿಲ್ಲ. ಆದರೆ ಈ ವರ್ಷ ಅವುಗಳು ಹಗಲು ರಾತ್ರಿ ಎಡಬಿಡದೆ ಚೀತ್ಕರಿಸಿದರೂ ಮಳೆ ಸುರಿಯುವುದಿರಲಿ, ಮಳೆಯ ಮುನ್ಸೂಚನೆಯೂ ಕಾಣುತ್ತಿಲ್ಲ.

ಲೋಕಸಭೆಗೆ ಸ್ಪರ್ಧಿಸುವ ಹುಚ್ಚಿಲ್ಲ: ಶಾಸಕ ಎಸ್‌.ಟಿ.ಸೋಮಶೇಖರ್‌

ಮನೆಯ ತಾರಸಿನಲ್ಲೂ  ಕಾಣಿಸಿಕೊಂಡಿರುವ ಸಿಕಾಡ ಕೀಟಗಳು: ಜಮೀನು, ತೋಟಗಳಲ್ಲಿ ಮಾತ್ರ ಕಾಣಸಿಕೊಳ್ಳುವ ಸಿಕಾಡ ಕೀಟಗಳು ಮಲೆನಾಡಿನ ಶಾಲೆಗಳು, ಮನೆಗಳ ಗೋಡೆ, ತಾರಸಿಗಳ ಮೇಲೆ ಕಾಣಿಸಿಕೊಳ್ಳುತ್ತಿರುವುದು ಸಹ ವಿಚಿತ್ರವಾಗಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.ಈ ಬದಲಾವಣೆಯನ್ನು ಗಮನಸಿರುವ ಪರಿಸರಾಸಕ್ತರುಗಳಾದ ಧನಂಜಯ ಜೀವಾಳ, ಪೂರ್ಣೇಶ್ ಮತ್ತಾವರ, ಇಪ್ಟಾ ಮಂಜುನಾಥ ಸ್ವಾಮಿ, ನಾಗರಾಜ್ ಕೂವೆ, ಪಾರ್ಥ, ವಿಷನ್ ಚಿಕ್ಕಮಗಳೂರು ಸಂಘಟನೆಯ ಪ್ರದೀಪ್ ಇತರರರು ಸಾಮಾಜಿಕ ಜಾಲತಾಣದಲ್ಲಿ ಈ ವಿಸ್ಮಯಕಾರಿ ವಿಚಾರವನ್ನು ಹಂಚಿಕೊಂಡು ಚಿಂತನೆಗೆ ಹಚ್ಚಿದ್ದಾರೆ.

ನಾವು ‘ಆಪರೇಷನ್‌ ಹಸ್ತ’ ಮಾಡುತ್ತಿಲ್ಲ, ಅವರೇ ಬರ್ತಿದ್ದಾರೆ: ಸಚಿವ ಎಂ.ಬಿ.ಪಾಟೀಲ್‌

ಅಧ್ಯಯನ ನಡೆಸಿ ಕಾರಣ ಹುಡುಕುವ ಕೆಲಸಕ್ಕೆ ಒತ್ತಾಯ: ಕಳೆದ ಮೂರ್ನಾಲ್ಕು ವಾರಗಳಿಂದ ಈ ಕೀಟಗಳು ಕಿವಿಗಡಚಿಕ್ಕುವಂತೆ ಚೀರುತ್ತಿವೆ. ಬಯಲು ಪ್ರದೇಶಕ್ಕೂ ಇವುಗಳ ಹಾವಳಿ ವಿಸ್ತರಿಸುತ್ತಿದೆ. ಕಳೆದ ಎರಡು ವರ್ಷಗಳ ಹಿಂದೆ ಮಿಡತೆಗಳು ದಾಳಿ ಇಟ್ಟಂತೆ ಅನಾಹುತವೇನಾದರೂ ಇರಬಹುದೇ ಎನ್ನುವ ಆತಂಕವನ್ನೂ ಕೆಲವರು ವ್ಯಕ್ತಪಡಿಸಿದ್ದಾರೆ. ಕೀಟ ಹಾಗೂ ಪರಿಸರ ತಜ್ಞರು ಈ ರೀತಿಯ ಬೆಳವಣಿಗೆ ಬಗ್ಗೆ ಅಧ್ಯಯನ ನಡೆಸಿ ಕಾರಣ ಹುಡುಕುವ ಕೆಲಸ ಆಗಬೇಕಿದೆ ಎನ್ನುವ ಅಭಿಪ್ರಾಯ ಕೇಳಿಬಂದಿದೆ. ಪರಿಸರಾಸಕ್ತರಾದ ಡಿ.ಎಂ.ಮಂಜುನಾಥ್, ಇಪ್ಟಾ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿ ಮುಂಗಾರಿನ ಸಂದರ್ಭದಲ್ಲಿ ಮಲೆನಾಡಿನ ಕಾಡು, ಕಣಿವೆ, ಬೆಟ್ಟ, ಗುಡ್ಡ, ಹೊಲ ಗದ್ದೆ, ತೋಟ, ಬಯಲುಗಳ ನಡುವೆ ಒಂದು ರೀತಿಯ ರಿಂಗ್ಟೋನ್ನಂತೆ ಸಿಕಾಡಗಳು ಝೇಂಕರಿಸುತ್ತವೆ. ಆದರೆ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಹಗಲು ರಾತ್ರಿ ಎನ್ನದೆ ಒಂದೇ ಸಮನೆ ವರಾತ ಮಾಡುತ್ತಿರುವುದರ ಹಿಂದೆ ಪ್ರಕೃತಿಯ ಮೇಲೆ ಬೇರೇನೋ ಪರಿಣಾಮ ಉಂಟು ಮಾಡುವ ಸಂಕೇತವೇ ಎನ್ನುವ ಆತಂಕಕ್ಕೆ ತಳ್ಳುವಂತಾಗಿದೆ ಎನ್ನುವ ಅಭಿಪ್ರಾಯವನ್ನು ಹೊರಹಾಕಿದ್ದಾರೆ.

click me!