ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬಿಡುವು ಕೊಟ್ಟ ಮಳೆ

By Kannadaprabha News  |  First Published Aug 16, 2019, 12:26 PM IST

ಚಿಕ್ಕಮಗಳೂರಿನಲ್ಲಿ ಕಳೆದ ವಾರ ಬಿಡುವಿಲ್ಲದೇ ಸುರಿದ ಭಾರಿ ಮಳೆಗೆ ಜನ ಬೇಸತ್ತಿದ್ದರು. ಅತಿ ಹೆಚ್ಚು ಮಳೆಯಾಗಿರುವ ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್‌.ಆರ್‌.ಪುರ, ಚಿಕ್ಕಮಗಳೂರು ತಾಲೂಕುಗಳಲ್ಲಿ ಮಳೆ ಇಳಿಮುಖವಾಗಿದೆ. ತರೀಕೆರೆ ಮತ್ತು ಕಡೂರು ತಾಲೂಕುಗಳಲ್ಲೂ ಮಳೆ ಕ್ಷೀಣಿಸಿದೆ.


ಚಿಕ್ಕಮಗಳೂರು(ಆ.16): ಜಿಲ್ಲೆಯಲ್ಲಿ ಅಪಾರ ಪ್ರಮಾಣದಲ್ಲಿ ನಷ್ಟಉಂಟುಮಾಡಿರುವ ಮಳೆ ಕಳೆದ 3 ದಿನಗಳಿಂದ ಬಿಡುವು ನೀಡಿದೆ. ಗುರುವಾರ ಜಿಲ್ಲೆಯ ಮಲೆನಾಡಿನ ಪ್ರದೇಶದಲ್ಲಿ ಬಿಸಿಲಿನ ವಾತಾವರಣ ಮುಂದುವರಿದಿತ್ತು.

ಕಳೆದ ವಾರ ಬಿಡುವಿಲ್ಲದೇ ಸುರಿದ ಭಾರಿ ಮಳೆಗೆ ಜನ ಬೇಸತ್ತಿದ್ದರು. ಅತಿ ಹೆಚ್ಚು ಮಳೆಯಾಗಿರುವ ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್‌.ಆರ್‌.ಪುರ, ಚಿಕ್ಕಮಗಳೂರು ತಾಲೂಕುಗಳಲ್ಲಿ ಮಳೆ ಇಳಿಮುಖವಾಗಿದೆ. ತರೀಕೆರೆ ಮತ್ತು ಕಡೂರು ತಾಲೂಕುಗಳಲ್ಲೂ ಮಳೆ ಕ್ಷೀಣಿಸಿದೆ.

Latest Videos

ಚಿಕ್ಕಮಗಳೂರು: ನೆರೆ ಸಂತ್ರಸ್ತರಿಗೆ 7 ಸಾವಿರ ಚಪಾತಿ, ಅಗತ್ಯ ವಸ್ತುಗಳ ರವಾನೆ

ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳ ನೀರಿನ ಮಟ್ಟಇಳಿಮುಖವಾಗಿದೆ. ಮಳೆ ಬಿಡುವು ನೀಡಿದ್ದರಿಂದ ಅತಿವೃಷ್ಟಿಪೀಡಿತ ಪ್ರದೇಶದಲ್ಲಿ ನಷ್ಟದ ಅಂದಾಜು ಮಾಡಲು ಅನುಕೂಲವಾಗಿದೆ. ಧರೆ ಕುಸಿತದಿಂದ ಹಾಳಾಗಿರುವ ರಸ್ತೆಗಳ ದುರಸ್ತಿ ಕೆಲಸ ನಡೆಯುತ್ತಿದೆ.

ನೆರೆ ಸಂತ್ರಸ್ತರಿಗೆ ಕೊಲ್ಲೂರು ದೇವಳದಿಂದ 1 ಕೋಟಿ ರು. ನೆರವು

click me!