ಕೊರೋನಾ ಭೀತಿ: ಕುವೈಟ್ ವಿಮಾನ ಸಂಚಾರ ಸ್ಥಗಿತ

By Suvarna NewsFirst Published Mar 13, 2020, 2:10 PM IST
Highlights

ಕೊರೋನಾ ಪರಿಣಾಮದಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದೆ. ಸುಮಾರು 60 ಶೇಕಡ ಪ್ರಯಾಣಿಕರ ಸಂಖ್ಯೆ ಕುಸಿದಿದ್ದು, ಕೊರೋನಾ ಭೀತಿ ಆವರಿಸಿದೆ.

ಮಂಗಳೂರು[ಮಾ.13]: ಕೊರೋನಾ ಪರಿಣಾಮದಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದೆ. ಸುಮಾರು 60 ಶೇಕಡ ಪ್ರಯಾಣಿಕರ ಸಂಖ್ಯೆ ಕುಸಿದಿದ್ದು, ಕೊರೋನಾ ಭೀತಿ ಆವರಿಸಿದೆ.

ಕೊರೋನಾ ಎಫೆಕ್ಟ್‌ನಿಂದ ವಿದೇಶಿ ವಿಮಾನ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದ್ದು, ಮಂಗಳೂರು ವಿಮಾನ ನಿಲ್ದಾಣದಲ್ಲಿ ಶೇ.60 ರಷ್ಟು ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದೆ.

ಕಲಬುರಗಿ ವೃದ್ಧ ಕೊರೋನಾಗೆ ಬಲಿ : ಹಾಸನಕ್ಕೆ ಇದೆ ನಂಟು..!

ಮಂಗಳೂರು ಏರ್ ಪೋರ್ಟ್ ಮೂಲಗಳ ಮಾಹಿತಿ ಲಭ್ಯವಾಗಿದ್ದು, ದುಬೈ, ಅಬುದಾಬಿ, ಮಸ್ಕತ್, ಕುವೈಟ್ ಗೆ ಪ್ರಯಾಣಿಕರ ಸಂಖ್ಯೆ ಭಾರೀ ಕುಸಿತವಾಗಿದೆ. ಸದ್ಯ ಕೊರೋನಾ ಹಿನ್ನೆಲೆ ಕುವೈಟ್ ವಿಮಾನ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.

ದುಬೈ, ಮಸ್ಕತ್, ಅಬುಧಾಬಿ ಮತ್ತು ದಮಾಮ್‌ಗೆ ಎಂದಿನಂತೆ ವಿಮಾನ ಸಂಚಾರ ನಡೆಯುತ್ತಿದ್ದು, ದುಬೈಗೆ ಪ್ರತಿನಿತ್ಯ ಮಂಗಳೂರಿನಿಂದ ಮೂರು ವಿಮಾನ ಸಂಚಾರವಾಗುತ್ತಿದೆ. ಮಸ್ಕತ್, ಅಬುಧಾಬಿ ಮತ್ತು ದಮಾಮ್ ಗೆ ಎರಡು ದಿನಕ್ಕೆ ಒಂದು ವಿಮಾನ ಸಂಚಾರ ನಡೆಸುತ್ತಿದ್ದು, ಎಂದಿನಂತೆ ವಿಮಾನ ಸಂಚಾರ ಇದ್ದರೂ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದೆ. 100 ಮಂದಿ ಪ್ರಯಾಣಿಕರಿದ್ದ ವಿಮಾನಗಳಲ್ಲಿ 40 ಮಂದಿ ಪ್ರಯಾಣಿಸುತ್ತಿದ್ದಾರೆ.

click me!