ಕಲಬುರಗಿ ವೃದ್ಧ ಕೊರೋನಾಗೆ ಬಲಿ : ಹಾಸನಕ್ಕೆ ಇದೆ ನಂಟು..!

Kannadaprabha News   | Asianet News
Published : Mar 13, 2020, 01:30 PM IST
ಕಲಬುರಗಿ ವೃದ್ಧ ಕೊರೋನಾಗೆ ಬಲಿ : ಹಾಸನಕ್ಕೆ ಇದೆ ನಂಟು..!

ಸಾರಾಂಶ

ವಿಶ್ವದಲ್ಲಿ ಸಾವಿರಾರು ಜನರನ್ನು ಬಲಿ ಪಡೆದಿರುವ ಕೊರೋನಾ ಕರ್ನಾಟಕದಲ್ಲಿಯೂ ವೃದ್ಧರೋರ್ವರನ್ನು ಬಲಿ ಪಡೆದಿದೆ. ಈ ಕೊರೋನಾ ಸಾವಿಗೂ ಹಾಸನಕ್ಕು ಇದೆ ನಂಟು.

ಹಾಸನ [ಮಾ.13]:  ಕಲಬುರಗಿಯಲ್ಲಿ ಕೊರೋನಾ ಸೋಂಕು ಪೀಡಿತ ವ್ಯಕ್ತಿ ಮೃತಪಟ್ಟ ಬೆನ್ನಲ್ಲೇ ಹಾಸನದಲ್ಲಿ ಆತಂಕ ಎದುರಾಗಿದೆ. 

ಮೆಕ್ಕಾ ಯಾತ್ರೆಗೆ ತೆರಳಿ ಮರಳಿದ ಬಳಿಕ ಸೋಂಕು ತಗುಲಿದ ವ್ಯಕ್ತಿ ಕಲಬುರಗಿಯಲ್ಲಿ ಮೃತಪಟ್ಟಿದ್ದು, ಅವರೊಂದಿಗೆ ಯಾತ್ರೆಗೆ ತೆರಳಿದ್ದವರ ತಪಾಸಣೆಗೆ ಆರೋಗ್ಯ ಇಲಾಖೆ ಮುಂದಾಗಿದೆ. 

ಹಾಸನದ ಇಬ್ಬರು ಮೆಕ್ಕಾ ಯಾತ್ರೆಗೆ ಕಲಬುರಗಿ ವೃದ್ಧನೊಂದಿಗೆ ತೆರಳಿದ್ದು, ಶಂಕೆ ಮೇರೆಗೆ  ತಪಾಸಣೆ ನಡೆಸಲು ಮುಂದಾಗಿದೆ. ದಂಪತಿಯನ್ನು ಜಿಲ್ಲಾ ವೖದ್ಯಕೀಯ ಬೋದಕ ಆಸ್ಪತ್ರೆಗೆ ದಾಖಲಿಸಲಾಗಿದೆ

ಮೆಕ್ಕಾಗೆ ತೆರಳಿದ್ದ ಹಾಸನದ ಈ ಕುಟುಂಬವನ್ನು ಶಂಕೆ ಆದರಿಸಿ ಪರಿಶೀಲನೆಯಲ್ಲಿಡಲು ಜಿಲ್ಲಾಡಳಿತ ಮುಂದಾಗಿದೆ. 

ಬೆಂಗಳೂರಲ್ಲಿ 5ನೇ ಕೊರೋನಾ ಕೇಸ್ : ಗೂಗಲ್ ಉದ್ಯೋಗಿಗೆ ಸೋಂಕು...

ಈಗಾಗಲೇ ವಿದೇಶದಿಂದ ಹಾಸನಕ್ಕೆ ಮರಳಿದ್ದ ಇಬ್ಬರು ವ್ಯಕ್ತಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇಬ್ಬರಲ್ಲೂ ಯಾವುದೇ ಸೋಂಕು ಪತ್ತೆಯಾಗಿಲ್ಲ.  ಮೆಕ್ಕಾಗೆ ಕಲಬುರಗಿ ವೃದ್ಧನೊಂದಿಗೆ ತೆರಳಿದವರಿಂದ ಮತ್ತೆ ಹಾಸನದಲ್ಲಿ ಆತಂಕ ಎದುರಾಗಿದೆ.

PREV
click me!

Recommended Stories

ರೈತರಿಗೆ ಅನುಕೂಲ ಮಾಡುವುದೇ ಗುರಿ: ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್
ದಾವಣಗೆರೆ ಮಹಿಳೆಯನ್ನ ಕಚ್ಚಿಕೊಂದ 2 ರಾಟ್‌ವೀಲರ್ ನಾಯಿಗಳು ಜನರ ಹಲ್ಲೆಯಿಂದ ಸಾವು; ಶ್ವಾನಗಳ ಮಾಲೀಕ ಬಂಧನ