ಸರ್ಕಾರ ರೈತರಿಂದ ಬೆಂಬಲ ಬೆಲೆಯಡಿ ಖರೀದಿಸುವ ಜೋಳ ಹಾಗೂ ರಾಗಿ ನಡುವೆ ಇರುವ ವ್ಯತ್ಯಾಸವನ್ನು ಸರಿಪಡಿಸಬೇಕು ಎಂದು ಶಾಸಕ ಕೆ. ಮಹದೇವ್ ಹೇಳಿದರು.
ಪಿರಿಯಾಪಟ್ಟಣ : ಸರ್ಕಾರ ರೈತರಿಂದ ಬೆಂಬಲ ಬೆಲೆಯಡಿ ಖರೀದಿಸುವ ಜೋಳ ಹಾಗೂ ರಾಗಿ ನಡುವೆ ಇರುವ ವ್ಯತ್ಯಾಸವನ್ನು ಸರಿಪಡಿಸಬೇಕು ಎಂದು ಶಾಸಕ ಕೆ. ಮಹದೇವ್ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ವತಿಯಿಂದ ನಡೆದ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮತ್ತು ಭತ್ತ ಖರೀದಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಉತ್ತರ ಭಾಗದಲ್ಲಿ ರೈತರು ಬೆಳೆಯುವ ಜೋಳ ಹಾಗೂ ಮೈಸೂರು ಪ್ರಾಂತ್ಯದಲ್ಲಿ ರೈತರು ಬೆಳೆಯುವ ರಾಗಿಯನ್ನು ಸರ್ಕಾರ ಬೆಂಬಲ ಬೆಲೆ ನೀಡಿ ಖರೀದಿಸುವ ಪ್ರಕ್ರಿಯೆಯಲ್ಲಿ ಹಲವಾರು ವ್ಯತ್ಯಾಸಗಳಿದ್ದು, ಈ ಸಂಬಂಧ ಮುಖ್ಯಮಂತ್ರಿಗಳು ಹಾಗೂ ಸಚಿವರೊಂದಿಗೆ ಚರ್ಚಿಸುತ್ತೇನೆ ಹಾಗೂ ಮುಂಬರುವ ಅಧಿವೇಶನದಲ್ಲಿಯೂ ಸಹ ರಾಗಿ ಖರೀದಿಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳನ್ನು ಸರಿಪಡಿಸಲು ಒತ್ತಾಯಿಸುತ್ತೇನೆ ಎಂದರು.
ರಾಗಿ ಖರೀದಿ ಸಂದರ್ಭ ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ಹಾಗೂ ಮಧ್ಯವರ್ತಿಗಳಿಗೆ ಅವಕಾಶ ನೀಡದೆ ಸರ್ಕಾರದ ನಿಯಮಾನುಸಾರ ಖರೀದಿ ಪ್ರಕ್ರಿಯೆ ನಡೆಸಬೇಕು, ಹೊಸ ಆದೇಶದ ಪ್ರಕಾರ ರೈತರು ಬೆಳೆದ ರಾಗಿಯನ್ನು ಮಾರುಕಟ್ಟೆಆವರಣದಲ್ಲಿ ರಾಶಿ ಮಾಡಿ ಸರ್ಕಾರದಿಂದ ಕೊಡುವ ಚೀಲದಲ್ಲಿ ತುಂಬಿಸಿ ತೂಕ ಮಾಡಬೇಕಿದೆ ಆದರೆ ಇದು ಕಷ್ಟಕರ ವಿಚಾರವಾಗಿದ್ದರೂ ಸಹ ಗುಣಮಟ್ಟಕ್ಕೆ ಆದ್ಯತೆ ನೀಡಲು ಇದನ್ನು ಪಾಲಿಸಲೇ ಬೇಕಾಗಿದೆ ಎಂದರು.
ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಮಾರಾಟ ಮಂಡಳಿ ಮುಖ್ಯ ಪ್ರಧಾನ ವ್ಯವಸ್ಥಾಪಕ ಚಂದ್ರಕಾಂತ… ಪಾಟೀಲ… ಅವರು ಮಾತನಾಡಿ ರೈತರು ರಾಗಿ ಮಾರಾಟ ಸಂದರ್ಭ ಸರ್ಕಾರದ ನಿಯಮಗಳನ್ನು ಪಾಲಿಸಿ ಪ್ರಸಕ್ತ ಸಾಲಿನಲ್ಲಿ ಬೆಳೆದಿರುವ ರಾಗಿ ಮಾರಾಟ ಮಾಡಬೇಕು, ನಾವು ಮಾರಾಟ ಮಾಡಿದ ರಾಗಿ ಮತ್ತೆ ನಮ್ಮ ಆಹಾರದ ಉಪಯೋಗಕ್ಕಾಗಿ ಸಿಗುವುದರಿಂದ ಗುಣಮಟ್ಟಕ್ಕೆ ಹೆಚ್ಚು ಆದ್ಯತೆ ನೀಡಿ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕೋರಿ ಖರೀದಿ ಸಂದರ್ಭ ಸರ್ಕಾರ ಹೊರಡಿಸಿರುವ ನೂತನ ಆದೇಶಗಳ ಪ್ರಕಾರ ರೈತರು ಇಲಾಖೆ ಅಧಿಕಾರಿಗಳೊಂದಿಗೆ ಸಹಕರಿಸುವಂತೆ ತಿಳಿಸಿದರು.
ಈ ಸಂದರ್ಭ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಮಾರಾಟ ಮಂಡಳಿ ಉಪ ಪ್ರಧಾನ ವ್ಯವಸ್ಥಾಪಕ ಸಿದ್ದನಾಯಕ, ಆಹಾರ ಇಲಾಖೆ ಶಿರಸ್ತೆರ್ದಾ ಸಣ್ಣಸ್ವಾಮಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್, ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ
ಡಾ. ಸೋಮಯ್ಯ, ಎಪಿಎಂಸಿ ಕಾರ್ಯದರ್ಶಿ ರೇವತಿ ಬಾಯಿ, ಕೃಷಿ ಅಧಿಕಾರಿ ಮಹೇಶ…, ಖರೀದಿ ಅಧಿಕಾರಿ ಮಂಜುನಾಥ್, ಆಹಾರ ನಿರೀಕ್ಷಕ ಸಂದೀಪ್, ಬೆಂಗಳೂರಿನ ಜಿಕೆವಿಕೆಯ ಎಂಎಸ್ಸಿ (ಅಗ್ರಿಕಲ್ಚರಲ್… ಮಾರ್ಕೆಟಿಂಗ್) ಅಂತಿಮ ವರ್ಷದ ವಿದ್ಯಾರ್ಥಿಗಳು, ಜೆಡಿಎಸ್ ತಾಲೂಕು ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಮುಖಂಡರಾದ ರಘುನಾಥ್, ಜವರಪ್ಪ, ಬಸವರಾಜೆ ಅರಸ್, ನದೀಮ… ಪಾಷ, ಬಿ.ವಿ ಗಿರೀಶ್ ಇದ್ದರು.