Vijayanagara: ಕೂಡ್ಲಿಗಿ ಬಳಿ ಭೀಕರ ಅಪಘಾತ: ರಾಮೇಶ್ವರಕ್ಕೆ ತೆರಳುತ್ತಿದ್ದ ಐವರು ಭಕ್ತರ ದುರ್ಮರಣ

By Girish Goudar  |  First Published Mar 16, 2022, 10:09 AM IST

*  ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದ ಬಳಿ ನಡೆದ ಘಟನೆ
*  ಮೃತರೆಲ್ಲರೂ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಸುತ್ತಮುತ್ತಲಿನ ಗ್ರಾಮದವರು 
*  ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ ಪೊಲೀಸರು 
 


ವಿಜಯನಗರ(ಮಾ.16):  ಟ್ರ್ಯಾಕ್ಸ್‌ನ ಆಕ್ಸಲ್ ಕಟ್ ಆಗಿ ಸಂಭವಿಸಿದ ಅಪಘಾತದಲ್ಲಿ(Accident) ಐವರು ಮೃತಪಟ್ಟು(Death) ಹಲವರು ಗಾಯಗೊಂಡಿರುವ ಘಟನೆ ವಿಜಯನಗರ(Vijayanagara) ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದ ಹೊರವಲಯ ರಾಷ್ಟ್ರೀಯ ಹೆದ್ದಾರಿ 50 ರ ಬಳಿ ಇಂದು(ಬುಧವಾರ) ನಡೆದಿದೆ. ಮೃತರನ್ನ ಟ್ರ್ಯಾಕ್ಸ್‌ ಚಾಲಕ ಸಿದ್ದಯ್ಯ ಕಾಳಗಿ(48), ಕಲ್ಲವ್ವ(60), ಕುಂತವ್ವ(50), ನೀಲಮ್ಮ(54) ಹಾಗೂ ಲಕ್ಷ್ಮೀಬಾಯಿ (60) ಎಂದು ಗುರುತಿಸಲಾಗಿದೆ.

ಮೃತರು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಸುತ್ತಮುತ್ತಲಿನ ಗ್ರಾಮದವರು ಎಂದು ತಿಳಿದು ಬಂದಿದೆ. ಇವರೆಲ್ಲರೂ ರಾಮೇಶ್ವರಕ್ಕೆ ತೆರಳುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ದುರ್ಘಟನೆಯಲ್ಲಿ ಗಾಯಗೊಂಡವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಕೂಡ್ಲಿಗಿ ಡಿವೈಎಸ್ಪಿ ಹರೀಶ್ ರೆಡ್ಡಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Tap to resize

Latest Videos

undefined

ಕಾರು ಅಪಘಾತ: ಸಂಸದರ ಪುತ್ರ ದಾರುಣ ಸಾವು

ದತ್ತಾತ್ರೇಯನ ದರ್ಶನ ಪಡೆದು ವಾಪಸ್​​ ಆಗ್ತಿದ್ದವರು, ನಿಶ್ಚಿತಾರ್ಥಕ್ಕೆ ಹೊರಟಿದ್ದವರು, ಒಟ್ಟು 9 ಜನ ಮಸಣಕ್ಕೆ

ಕಲಬುರಗಿ/ಕೊಪ್ಪಳ: ಕೊಪ್ಪಳ ಹಾಗೂ ಕಲಬುರಗಿಯಲ್ಲಿ (Koppal And Kalaburagi District)ಸಂಭವಿಸಿದ ಪ್ರತ್ಯೇಕ ರಸ್ತೆ ಅಘಾತದಲ್ಲಿ (Road Accident) ಒಟ್ಟು 9 ಜನರು ಸಾವನ್ನಪ್ಪಿದ ಘಟನೆ ಮಾ.1೦ ರಂದು ನಡೆದಿತ್ತು. ದತ್ತಾತ್ರೇಯನ ದರ್ಶನ ಪಡೆದು ವಾಪಸ್​​ ಆಗ್ತಿದ್ದ ಐವರು ಹಾಗು ನಿಶ್ಚಿತಾರ್ಥಕ್ಕೆ ಹೊರಟಿದವರು ನಾಲ್ವರು ಒಟ್ಟು 9 ಜನರು ಸಾವನ್ನಪ್ಪಿದ್ದರು.

ಮರಕ್ಕೆ ಕಾರು ಢಿಕ್ಕಿಯಾಗಿ ಸ್ಥಳದಲ್ಲೇ ಐವರ ದುರ್ಮರಣ

ಕಲಬುರಗಿ ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 5 ಜನ ಸ್ಥಳದಲ್ಲೇ ಸಾವೀಗಿಡಾಗಿದ್ದರು. ಜೊತೆಗೆ ಕಾರಿನಲ್ಲಿದ ಇಬ್ಬರು ಮಕ್ಕಳಿಗೆ ಗಂಭೀರವಾಗಿ ಗಾಯಗೊಂಡಿದ್ದರು. ಚಾಲಕ ಸೇರಿ ಕಾರಿನಲ್ಲಿದ್ದ ಐದು ಜನ ದುರ್ಮರಣ ಹೊಂದಿದ್ದರು. ಮೃತ ಚಾಲಕನ ಹೆಸರು ಸಕಾರಾಂ ವೀರ್ (54). ಉಳಿದ ನಾಲ್ವರ ಹೆಸರು ತಿಳಿದು ಬರಬೇಕಿದೆ. ಇನ್ನು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಇಬ್ಬರು ಮಕ್ಕಳನ್ನು ಚಿಕಿತ್ಸೆಗಾಗಿ ಅಫಜಲಪುರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಬಳೂರ್ಗಿ ಗ್ರಾಮದ ಬಳಿ ಈ ದುರ್ಘಟನೆ ನಡೆದಿದ್ದು, ಅಫಜಲಪುರದ ಕಡೆಯಿಂದ ಮಹಾರಾಷ್ಟ್ರದ ಕಡೆಗೆ ಹೊರಟಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ನಿದ್ದೆ ಮಂಪರು ಅಥವಾ ಟೈರ್ ಪಂಕ್ಚರ್ ಆದ ಕಾರಣದಿಂದ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ ಎಂಬ ಶಂಕೆ ವ್ಯಕ್ತವಾಗಿತ್ತು.  ದತ್ತಾತ್ರೇಯನ ದರ್ಶನ ಮಾಡಿಕೊಂಡು ಹಿಂದಿರುಗುವ ವೇಳೆ ಈ ದುರ್ಘಟನೆ ನಡೆದಿತ್ತು. ಅಫಜಲಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಘಟನೆ ಕುರಿತು ಸಿಪಿಐ ಜಗದೇವಪ್ಪ ಪಾಳಾ ಸ್ಥಳ ಪರಿಶೀಲನೆ ನಡೆಸಿದ್ದರು. 

ನಿಶ್ಚಿತಾರ್ಥಕ್ಕೆಂದು ಹೊರಟಿದ್ದ ಟ್ರ್ಯಾಕ್ಟರ್ ಪಲ್ಟಿ ; ನಾಲ್ವರ ಸಾವು

ಕೊಪ್ಪಳ: ನಿಶ್ಚಿತಾರ್ಥ ಕಾರ್ಯಕ್ರಮಕ್ಕೆಂದು ಹೊರಟಿದ್ದ ಟ್ರ್ಯಾಕ್ಟರ್​ವೊಂದು ಇದ್ದಕ್ಕಿದ್ದಂತೆ ಪಲ್ಟಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರು, ಆಸ್ಪತ್ರೆಯಲ್ಲಿ ಮತ್ತಿಬ್ಬರು ಸೇರಿದಂತೆ ಒಟ್ಟು ನಾಲ್ವರು ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿತ್ತು. 

Bengaluru Accident: ಪ್ರತ್ಯೇಕ ಅಪಘಾತ: ಹೆಲ್ಮೆಟ್‌ ಧರಿಸದ ಇಬ್ಬರು ಟೆಕ್ಕಿ ಸೇರಿ ಮೂವರ ಸಾವು!

ಕನಕಗಿರಿ ತಾಲೂಕು ನವಲಿ ಗ್ರಾಮದ ಬಳಿಯ ರೈಸ್ ಟೆಕ್ನಾಲಜಿ ಪಾರ್ಕ್ ಬಳಿ ಅಪಘಾತ ಸಂಭವಿಸಿದೆ. ಕಾರಟಗಿ ಪಟ್ಟಣದ 16ನೇ ವಾರ್ಡಿನ ನಿವಾಸಿಗಳಾದ ಯಮನೂರಪ್ಪ (55) ಮತ್ತು ಅಂಬಮ್ಮ (50) ಸ್ಥಳದಲ್ಲೇ ಮೃತಪಟ್ಟರೆ ದ್ಯಾವಮ್ಮ (60), ಶೇಷಪ್ಪ ಬಂಡಿ (40) ಕಾರಟಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. 

ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಕಾರಟಗಿ ಆಸ್ಪತ್ರೆಗೆ ರವಾನಿಸಲಾಗಿದೆ. ನಿಶ್ಚಿತಾರ್ಥ ಕಾರ್ಯಕ್ರಮಕ್ಕೆಂದು ಇವರು ಕಾರಟಗಿಯಿಂದ ಕನಕಗಿರಿಗೆ ಟ್ರ್ಯಾಕ್ಟರ್​​ನಲ್ಲಿ ಹೊರಟಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
 

click me!