ಕೊರೊನಾಗೆ ಮಂಡ್ಯದಲ್ಲಿ ಮೊದಲ ಬಲಿ

By Kannadaprabha NewsFirst Published Jul 8, 2020, 11:24 AM IST
Highlights

ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಮೊದಲ ಪ್ರಕರಣ ಮದ್ದೂರು ಪಟ್ಟಣದಿಂದ ವರದಿಯಾಗಿದೆ. ಮದ್ದೂರು ಪಟ್ಟಣದ ಲೀಲಾವತಿ ಬಡಾವಣೆಯ ಎಂಟನೇ ಕ್ರಾಸ್‌ ವಾಸಿ ಮೊಹಮ್ಮದ್‌ ಸಲೀಂ (51) ಮೃತ ವ್ಯಕ್ತಿ.

ಮಂಡ್ಯ(ಜು.08): ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಮೊದಲ ಪ್ರಕರಣ ಮದ್ದೂರು ಪಟ್ಟಣದಿಂದ ವರದಿಯಾಗಿದೆ. ಮದ್ದೂರು ಪಟ್ಟಣದ ಲೀಲಾವತಿ ಬಡಾವಣೆಯ ಎಂಟನೇ ಕ್ರಾಸ್‌ ವಾಸಿ ಮೊಹಮ್ಮದ್‌ ಸಲೀಂ (51) ಮೃತ ವ್ಯಕ್ತಿ. ಇವರು ಮದ್ದೂರು ಎಪಿಎಂಸಿಯ ನ್ಯೂ ಫೇಮಸ್‌ ಟ್ರೇಡ​ರ್ಸ್ ಹೆಸರಿನಲ್ಲಿ ಎಳನೀರು ವ್ಯಾಪಾರ ಮಾಡುತ್ತಿದ್ದನು. ಇಲ್ಲಿಂದ ಮುಂಬೈಗೆ ಎಳನೀರು ಸಾಗಣೆ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.

ಜು.5ರಂದು ಮೊಹಮ್ಮದ್‌ ಸಲೀಂ ಪಾಶ್ರ್ವವಾಯುಗೆ ತುತ್ತಾಗಿ ಮೈಸೂರಿನ ಕೊಲಂಬಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಜ್ವರ ಕಾಣಿಸಿಕೊಂಡಿದ್ದರಿಂದ ಅನುಮಾನಗೊಂಡ ಆಸ್ಪತ್ರೆ ವೈದ್ಯರು ಕೂಡಲೇ ಅವನನ್ನು ಪರೀಕ್ಷೆಗೊಳಪಡಿಸಿದಾಗ ಕೋವಿಡ್‌-19 ದೃಢಪಟ್ಟಿತ್ತು. ಬಳಿಕ ಮರು ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಯಿತು. ಅಲ್ಲಿಗೆ ಚಿಕಿತ್ಸೆಗೆ ತೆರಳಿದ ವೇಳೆ ಆತನ ಪರಿಸ್ಥಿತಿ ಚಿಂತಾಜನಕವಾಗಿತ್ತು. ವೈದ್ಯರು ಸಲಹೆ ನೀಡಿದ ಮೇರೆಗೆ ಮಂಡ್ಯದ ಮಿಮ್ಸ್‌ ಆಸ್ಪತ್ರೆಗೆ ಕರೆತರುತ್ತಿದ್ದಾಗ ಮಾರ್ಗಮಧ್ಯೆ ಸಾವನ್ನಪ್ಪಿದನು.

194 ಲೈಟ್‌ಹೌಸ್‌ಗಳನ್ನು ಪ್ರವಾಸಿ ತಾಣವಾಗಿಸಲು ಕೇಂದ್ರ ನಿರ್ಧಾರ!

ಮಹಾರಾಷ್ಟ್ರದಿಂದ ಎಳನೀರು ಖರೀದಿಗೆ ಬರುತ್ತಿದ್ದ ಲಾರಿ ಚಾಲಕರು, ಕ್ಲೀನರ್‌ಗಳು ಅಥವಾ ವರ್ತಕರಿಂದ ಈತನಿಗೆ ಕೊರೊನಾ ಹರಡಿರಬಹುದು ಎಂದು ಶಂಕಿಸಲಾಗಿದೆ. ವಿಷಯ ತಿಳಿದ ಆರೋಗ್ಯಾಧಿಕಾರಿಗಳು ಮೃತ ಮೊಹಮ್ಮದ್‌ ಸಲೀಂ ಮನೆಗೆ ಸ್ಯಾನಿಟೈಸರ್‌ ಸಿಂಪರಣೆ ಮಾಡಿ ಮನೆಯ ಸುತ್ತಲಿನ 100 ಮೀ. ಪ್ರದೇಶವನ್ನು ಸೀಲ್‌ಡೌನ್‌ ಮಾಡಿದ್ದಾರೆ. ಮನೆಯವರನ್ನು ಹೋಂ ಕ್ವಾರಂಟೈನ್‌ನಲ್ಲಿಡಲಾಗಿದೆ. ಮೃತನಿಗೆ ಸೋಂಕು ತಗುಲಿದ ನಂತರದಲ್ಲಿ ಎರಡು ದಿನ ಮಾರುಕಟ್ಟೆಯಲ್ಲಿ ಎಳನೀರು ವ್ಯಾಪಾರ ನಡೆಸಿರುವುದರಿಂದ ಮಾರುಕಟ್ಟೆಯನ್ನು ಐದು ದಿನಗಳ ಕಾಲ ಬಂದ್‌ ಮಾಡಲಾಗಿದೆ.

ಇಬ್ಬರಿಗೆ ಸೋಂಕು:

ಮದ್ದೂರು ತಾಲೂಕಿನಲ್ಲಿ ಮತ್ತೆ ಇಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ. ತಾಲೂಕಿನ ಕರಟಗೆರೆ ಹಾಗೂ ಬೆಸಗರಹಳ್ಳಿ ಸಮೀಪದ ಮಾರ್ನಾಮಿ ದೊಡ್ಡಿ ವ್ಯಕ್ತಿಗೆ ಸೋಂಕು ತಗುಲಿದೆ. ಎರಡೂ ಗ್ರಾಮಗಳಲ್ಲೂ ರಾಸಾಯನಿಕ ಸಿಂಪರಣೆ ಮಾಡಿ ಸೀಲ್‌ಡೌನ್‌ ಮಾಡಲಾಗಿದೆ.

click me!