ಗದಗ: ಕಪ್ಪತ್ತಗುಡ್ಡಕ್ಕೆ ಬೆಂಕಿ, ಅಪಾರ ಪ್ರಮಾಣದಲ್ಲಿ ಅರಣ್ಯ ನಾಶ

By Kannadaprabha News  |  First Published Mar 1, 2021, 2:21 PM IST

ಸುಮಾರು 40 ಹೆಕ್ಟೇರ್‌ಗೂ ಹೆಚ್ಚು ಅರಣ್ಯ ಪ್ರದೇಶ ಬೆಂಕಿಗೆ ಆಹುತಿ| ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಸಾಧ್ಯತೆ| ಗದಗ ಜಿಲ್ಲೆಯಲ್ಲಿರುವ ಕಪ್ಪತ್ತಗುಡ್ಡ ಅರಣ್ಯ ಪ್ರದೇಶ| 


ಡಂಬಳ(ಮಾ.01): ಹೋಬಳಿಯ ಡೋಣಿ ಗ್ರಾಮದ ಬಳಿ ಭಾನುವಾರ ಮಧ್ಯಾಹ್ನ 1 ಗಂಟೆಗೆ ಬೆಂಕಿ ಕಾಣಿಸಿಕೊಂಡಿದ್ದು ಅತಿಯಾದ ಗಾಳಿಯಿಂದಾಗಿ ಬೆಂಕಿ ಹರಡುತ್ತಿರುವುದರಿಂದ ಸುಮಾರು 80ಕ್ಕೂ ಅಧಿಕ ಸಿಬ್ಬಂದಿ ಬೆಂಕಿ ನಂದಿಸಲು ಸತತ 9 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದರು 50ಕ್ಕೂ ಅಧಿಕ ಹೆಕ್ಟೇರ್‌ ಪ್ರದೇಶದಲ್ಲಿ ಅರಣ್ಯ ನಾಶವಾಗಿರುವ ಸಾಧ್ಯತೆ ಇದೆ.

ಬೆಂಕಿ ತಗುಲಿದ್ದರಿಂದ ಬಾದೆ ಹುಲ್ಲು, ವಿವಿಧ ಗಿಡ ಮೂಲಿಕೆಗಳ ಔಷಧಿ ಸಸ್ಯಗಳು ಬೆಂಕಿಗೆ ಆಹುತಿಯಾಗಿರುವ ಸಾಧ್ಯತೆ ಇದೆ. ಗಾಳಿ ವೇಗವಾಗಿ ಬೀಸುತ್ತಿರುವುದರಿಂದ 80ಕ್ಕೂ ಅಧಿಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದೇವೆ. ಆದರು ನಿಯಂತ್ರಣಕ್ಕೆ ಬರುತ್ತಿಲ್ಲ ರಾತ್ರಿ 8 ಗಂಟೆಯಾದರು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದೇವೆ. ಮಧ್ಯಾಹ್ನ ಬೆಂಕಿ ತಗುಲಿದ್ದರಿಂದ ಬೆಳಕಿನಲ್ಲಿ ಬೆಂಕಿ ನಂದಿಸಬಹುದು ಎಂದು ಕೈಯಲ್ಲಿ ಬ್ಯಾಟರಿ ಇಲ್ಲದೆ ಬಂದಿದ್ದರಿಂದ ರಾತ್ರಿ ಕತ್ತಲು ಪ್ರದೇಶದಲ್ಲಿ ಬೆಂಕಿ ನಂದಿಸಲು ತುಂಬಾ ಕಷ್ಟಪಡುತ್ತಿದ್ದೇವೆ ಎಂದು ಹೆಸರಳಲಿಚ್ಚಸದ ಸಿಬ್ಬಂದಿ ತಮ್ಮ ನೋವು ಹೇಳಿಕೊಂಡರು.

Latest Videos

undefined

ಮತ್ತೆ ಕಪ್ಪತ್ತಗುಡ್ಡಕ್ಕೆ ಬೆಂಕಿ: ಬೆಂಕಿಗೆ ಆಹುತಿಯಾದ ಮೂಕ ಪ್ರಾಣಿಗಳು

ಮಾಹಿತಿ ನೀಡಿದ ತಾಲೂಕು ವಲಯ ಅರಣ್ಯಾಧಿಕಾರಿ ಪ್ರದೀಪ ಪವಾರ ಸುಮಾರ 40 ಹೆಕ್ಟೇರ್‌ಗೂ ಹೆಚ್ಚು ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ರಾತ್ರಿ ಕತ್ತಲು ಇರುವುದರಿಂದ ಬೆಂಕಿ ನಂದಿಸಲು ತುಂಬಾ ಕಠಿಣ ಶ್ರಮವನ್ನು ಪಡಬೇಕಾಯ್ತು. ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಸಾಧ್ಯತೆ ಇದೆ ಎಂದರು.
 

click me!