ಮೂತ್ರ ಮಾಡಿದ್ದಕ್ಕೆ ಮಂಗಳಮುಖಿಯರಿಂದ ಆಟೋ ಚಾಲಕನಿಗೆ ಥಳಿತ

Kannadaprabha News   | Asianet News
Published : Mar 01, 2021, 01:57 PM ISTUpdated : Mar 01, 2021, 02:17 PM IST
ಮೂತ್ರ ಮಾಡಿದ್ದಕ್ಕೆ ಮಂಗಳಮುಖಿಯರಿಂದ ಆಟೋ ಚಾಲಕನಿಗೆ ಥಳಿತ

ಸಾರಾಂಶ

ಮೂತ್ರ ವಿಸರ್ಜನೆ ಮಾಡಿದ್ದರಿಂದ ಮಂಗಳ ಮುಖಿಯರು ಆಟೋ ಚಾಲಕನ ಮೇಲೆ ಹಲ್ಲೆ ಮನಬಂದಂತೆ ಹಲ್ಲೆ ಮಾಡಿದ್ದು ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಣ್ಣಗಾಗಿದೆ.

ಕೋಲಾರ(ಮಾ.01):  ಮೂತ್ರ ವಿಸರ್ಜನೆ ಮಾಡಿದ್ದರಿಂದ ಮಂಗಳ ಮುಖಿಯರು ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ರಾಷ್ಟ್ರೀಯ ಹೆದ್ದಾರಿಯ ಅರಾಭಿಕೊತ್ತನೂರು ಬಳಿ ಭಾನುವಾರ ಸಂಜೆ ನಡೆದಿದೆ.

ಚಲುವನಹಳ್ಳಿಯ ಗ್ರಾಮದ ಆಟೋ ಚಾಲಕ ಆಟೋ ನಿಲ್ಲಿಸಿ ಹೆದ್ದಾರಿ ಪಕ್ಕದಲ್ಲಿಯೇ ಇರುವ ಮಂಗಳ ಮುಖಿಯರಿದ್ದ ನಿವಾಸದ ಮುಂದೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಇದರಿಂದ ಮಂಗಳ ಮುಖಿಯರು ತಗಾದೆ ತೆಗೆದಿದ್ದಾರೆ. ಈ ವೇಳೆ ಮಂಗಳ ಮುಖಿಯರು ಮತ್ತು ಚಾಲಕನ ನಡುವೆ ಮಾತಿನ ಚಕಮುಕಿ ನಡೆದು ಮಂಗಳ ಮುಖಿಯರೆಲ್ಲರೂ ಸೇರಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ.

ಚಿಕ್ಕಮಗಳೂರು: ಯೂಟ್ಯೂಬ್‌ ನೋಡಿ ದರೋಡೆಗೆ ಸ್ಕೆಚ್‌..! ...

ಪಕ್ಕದ ಗ್ರಾಮದವನೇ ಆದ ಆಟೋ ಚಾಲಕನು ಫೋನ್‌ ಮಾಡಿ ಗ್ರಾಮದವರನ್ನು ಕರೆಸಿಕೊಂಡಿದ್ದಾನೆ. ಗ್ರಾಮದವರು ಮಂಗಳಮುಖಿಯರೊಂದಿಗೆ ಗಲಾಟೆ ಮಾಡುತ್ತಿದ್ದ ಸುದ್ಧಿ ಕೇಳಿ ಪೋಲಿಸರು ಆಗಮಿಸಿ ಎಲ್ಲರನ್ನೂ ಸಮಾಧಾನಪಡಿಸಿ ಕಳಿಸಿದ್ದಾರೆ. ಈ ಸಂಬಂಧ ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಯಾವುದೇ ಕೇಸು ದಾಖಲಾಗಿಲ್ಲ ಎಂದು ಸಬ್‌ಇನ್ಸ್‌ಪೆಕ್ಟರ್‌ ಕಿರಣ್‌ ಕುಮಾರ್‌ ತಿಳಿಸಿದರು.

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC