ಬಳ್ಳಾರಿ: ಶಾರ್ಟ್‌ ಸರ್ಕ್ಯೂಟ್‌, ಲಕ್ಷಾಂತರ ಮೌಲ್ಯದ ಕಟ್ಟಿಗೆ, ಜೀನ್ಸ್‌ ಭಸ್ಮ

By Kannadaprabha News  |  First Published Mar 5, 2021, 8:32 AM IST

ಸುಟ್ಟು ಕರಕಲಾದ 25 ಲಕ್ಷಕ್ಕೂ ಹೆಚ್ಚು ಮೌಲ್ಯದ ಮರದ ಕಟ್ಟಿಗೆ| ಬೆಂಕಿ ನಂದಿಸುವಲ್ಲಿ ಯಶಸ್ವಿಯಾದ ಅಗ್ನಿ ಶಾಮಕ ಸಿಬ್ಬಂದಿ| ವುಡ್‌ವರ್ಕ ಶಾಪ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಪಕ್ಕದಲ್ಲಿನ ಜೀಸ್ಸ್‌ ಗಾರ್ಮೆಂಟ್‌ ಮಳಿಗೆಗೂ ವ್ಯಾಪಿಸಿ ಅಲ್ಲೂ ಲಕ್ಷಾಂತರ ರು. ಮೌಲ್ಯದ ಬಟ್ಟೆ ಸುಟ್ಟು ಕರಕಲು| 


ಬಳ್ಳಾರಿ(ಮಾ.05): ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಲಕ್ಷಾಂತರ ರುಪಾಯಿ ಮೌಲ್ಯದ ಕಟ್ಟಿಗೆ,  ಜೀನ್ಸ್‌ ಫ್ಯಾಕ್ಟರಿಯಲ್ಲಿದ್ದ ಬಟ್ಟೆ ಸುಟ್ಟು ಭಸ್ಮವಾಗಿರುವ ಘಟನೆ ನಗರದಲ್ಲಿ ಗುರುವಾರ ನಸುಕಿನ ಜಾವ ಜರುಗಿದೆ. 

ನಗರದ ಕಣೇಕಲ್‌ ಬಸ್‌ ನಿಲ್ದಾಣದ ಸಮೀಪದ ವುಡ್‌ವರ್ಕ್ ಶಾಪ್‌ನಲ್ಲಿ ಗುರುವಾರ ಬೆಳಗ್ಗೆ 5 ಗಂಟೆಯ ವೇಳೆಗೆ ಈ ಅವಘಡ ಸಂಭವಿಸಿದ್ದು, ಅಂದಾಜು 25 ಲಕ್ಷಕ್ಕೂ ಹೆಚ್ಚು ಮೌಲ್ಯದ ಮರದ ಕಟ್ಟಿಗೆಗಳು ಸುಟ್ಟು ಕರಕಲಾಗಿವೆ. ಕೂಡಲೇ ಸ್ಥಳಕ್ಕೆ ಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಸತತ 2 ಗಂಟೆಗೂ ಹೆಚ್ಚುಕಾಲ ಕಟ್ಟಿಗೆ ಅಂಗಡಿ ಹೊತ್ತಿ ಉರಿದಿದ್ದು, ಮರದ ಕಟ್ಟಿಗೆಗಳು ಬೆಂಕಿಗೆ ಆಹುತಿಯಾಗಿವೆ. ವುಡ್‌ವರ್ಕ ಶಾಪ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಪಕ್ಕದಲ್ಲಿನ ಜೀಸ್ಸ್‌ ಗಾರ್ಮೆಂಟ್‌ ಮಳಿಗೆಗೂ ವ್ಯಾಪಿಸಿ ಅಲ್ಲೂ ಲಕ್ಷಾಂತರ ರುಪಾಯಿ ಮೌಲ್ಯದ ಬಟ್ಟೆ ಸುಟ್ಟು ಕರಕಲಾಗಿದೆ.

Tap to resize

Latest Videos

'ಬೆಲೆ ಏರಿಕೆಗೆ ಪರಿಹಾರ ಬೇಕೆಂದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು'

ಮೆಣಸಿನಕಾಯಿ ಲಾರಿಗೆ ಬೆಂಕಿ ತಗುಲಿ ಹಾನಿ

ಲಾರಿಯಲ್ಲಿ ಸಾಗಿಸುತ್ತಿದ್ದ ಕೆಂಪು ಮೆಣಸಿನಕಾಯಿ ಲೋಡ್‌ಗೆ ವಿದ್ಯುತ್‌ ಲೈನ್‌ ತಗುಲಿ ಬೆಂಕಿ ಹೊತ್ತಿಕೊಂಡು ಸುಮಾರು ಅರ್ಧದಷ್ಟುಮೆಣಸಿನಕಾಯಿ ಚೀಲಗಳು ಭಸ್ಮವಾದ ಘಟನೆ ಆಂಧ್ರದ ಅನಂತಪುರ ಹಾಗೂ ಬಳ್ಳಾರಿ ಗಡಿಭಾಗದಲ್ಲಿ ಗುರುವಾರ ಸಂಜೆ ಜರುಗಿದೆ.

ಕೆಂಪು ಮೆಣಸಿನಕಾಯಿಯ ಚೀಲಗಳನ್ನು ಹೊತ್ತುಕೊಂಡ ಲಾರಿಯು ಆಂಧ್ರದ ಅನಂತಪುರದಿಂದ ಹಾವೇರಿ ಜಿಲ್ಲೆಯ ಬ್ಯಾಡಗಿಗೆ ತೆರಳುತ್ತಿತ್ತು. ಆದರೆ, ಬೆಂಕಿ ತಗುಲುತ್ತಲೇ ಲಾರಿ ನಿಲ್ಲಿಸಿ, ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಲಾಯಿತಾದರೂ ಸಹ ಈ ವೇಳೆಗೆ ಲಾರಿಯಲ್ಲಿದ್ದ ಅರ್ಧದಷ್ಟುಮೆಣಸಿನಕಾಯಿ ಚೀಲಗಳು ಬೆಂಕಿಗೆ ಆಹುತಿಯಾಗಿದ್ದವು. ಸುಮಾರು 4 ಲಕ್ಷ ಮೌಲ್ಯದ ಮೆಣಸಿನಕಾಯಿ ಭಸ್ಮವಾಗಿದೆ ಎಂದು ಅಂದಾಜಿಸಲಾಗಿದೆ.
 

click me!