* ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪ್ರದೇಶದಲ್ಲಿ ಕಾಡ್ಗಿಚ್ಚು
* 5 ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿ
* ನೂರಾರು ಎಕರೆ ಅರಣ್ಯ ಭೂಮಿ ಸುಟ್ಟು ಹೋಗುವುದನ್ನು ತಪ್ಪಿಸಿದ ಸ್ಥಳೀಯರು
ಆಲ್ದೂರುಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು(ಮಾ.18): ದಿನದಿಂದ ದಿನಕ್ಕೆ ಕಾಫಿನಾಡು ಚಿಕ್ಕಮಗಳೂರು(Chikkamagaluru) ಜಿಲ್ಲೆಯಲ್ಲಿ ಬಿಸಿಲು ಧಗೆ ಹೆಚ್ಚಾಗುತ್ತಿದೆ. ಕುಡಿಯುವ ನೀರು(Drinking Water), ಪ್ರಾಣಿ ಪಕ್ಷಿಗಳು ಕೂಡ ನೀರಿನ ಹಾಹಾಕಾರ ಉಂಟಾಗುವ ಪರಿಸ್ಥಿತಿ ಉದ್ಭವಾಗುತ್ತಿದೆ. ಮತ್ತೊಂದೆಡೆ ಕಾಡಂಚಿನ ಪ್ರದೇಶದಲ್ಲಿ ಹುಲ್ಲುಗಾವಲು ಒಣಗಿರುವ ಪರಿಣಾಮ ಕಾಡ್ಗಿಚ್ಚಿನ(Wildfire) ಪ್ರಕರಣಗಳು ಹೆಚ್ಚಾಗುತ್ತಿದೆ. ಜಿಲ್ಲೆಯ ಮೂಡಿಗೆರೆ ಪ್ರದೇಶದಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಅರಣ್ಯ(Forest) ಪ್ರದೇಶದಲ್ಲಿ ಕಾಡ್ಗಿಚ್ಚಿನ ಪ್ರಕರಣಗಳು ನಡೆಯುತ್ತಿದೆ. ಆಕಸ್ಮಿಕವಾಗಿ ಬೀಳುವ ಪ್ರಕರಣ ಒಂದಡೆಯಾದ್ರೆ ಮತ್ತೊಂದೆಡೆ ಕಿಡಿಗೇಡಿಗಳ ಕೃತ್ಯಕ್ಕೆ ಅರಣ್ಯ ಪ್ರದೇಶ ಭಸ್ಮವಾಗುತ್ತಿದೆ.
undefined
ನಿನ್ನೆ(ಗುರುವಾರ) ತಡ ರಾತ್ರಿಯೂ ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಮದ ಪುರದಮಕ್ಕಿಯಲ್ಲಿ ಕಾಡ್ಗಿಚ್ಚು ಉಂಟಾಗಿ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ. ಆಕಸ್ಮಿಕವಾಗಿ ಈ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದ ಪರಿಣಾಮ 5 ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಇರುವ ಅರಣ್ಯ ಸಂಪತ್ತು ಬೆಂಕಿಗೆ ಸುಟ್ಟು ಭಸ್ಮವಾಗಿದೆ. ಬೆಳೆಬಾಳುವ ಮರಗಳು, ಔಷಧಿ ಗಿಡಗಳು(Medicinal Plants), ಸೇರಿದಂತೆ ಪ್ರಾಣಿ ಪಕ್ಷಿಗಳು ಬೆಂಕಿಗೆ ಆಹುತಿ ಆಗಿದೆ. ವಿಚಾರ ತಿಳಿದ ಕೂಡಲೇ ಜಾವಳಿಯ ರಾಷ್ಟ್ರೀಯ ಸ್ವಯಂ ಸೇವಕ(RSS) ಸಂಘದ ಕಾರ್ಯಕರ್ತರಾದ ಶಶಿಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದ ಪರೀಕ್ಷಿತ್ ಜಾವಳಿ ,ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ(Fire Department) ಸಿಬ್ಬಂದಿ ಸಹಾಯದಿಂದ ತಡರಾತ್ರಿವರೆಗೂ ಬೆಂಕಿಯನ್ನು ಹರಡದಂತೆ ನಂದಿಸಿದರು. ಅಕ್ಕಪಕ್ಕದ ಕಾಫಿ ತೋಟ, ಮನೆಗಳಿಗೆ ಮತ್ತು ನೂರಾರು ಎಕರೆ ಅರಣ್ಯ ಭೂಮಿ ಸುಟ್ಟು ಹೋಗುವುದನ್ನು ತಪ್ಪಿಸಿದರು.
Colorado Wildfires: ಭೀಕರ ಕಾಡ್ಗಿಚ್ಚು, ಮೂವರು ನಾಪತ್ತೆ, 1000ಕ್ಕೂ ಅಧಿಕ ಮನೆ ಬೂದಿ!
ಜಾವಳಿ ಪುರದಮಕ್ಕಿ ಗುಡ್ಡದಲ್ಲಿ ಆಕಸ್ಮಿಕ ಬೆಂಕಿ:
ಕೊಟ್ಟಿಗೆಹಾರ: ಜಾವಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪುರದಮಕ್ಕಿ ಅರಣ್ಯಕ್ಕೆ ಆಕಸ್ಮಿಕವಾಗಿ ಬಿದ್ದ ಬೆಂಕಿ ನಂದಿಸಲು ಸ್ಥಳೀಯರು, ಅರಣ್ಯ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಬುಧವಾರ ರಾತ್ರಿ ಪುರದಮಕ್ಕಿ ಗುಡ್ಡದಲ್ಲಿ ಆಕಸ್ಮಿಕ ಬೆಂಕಿ ಬಿದ್ದ ಸುದ್ದಿ ತಿಳಿದ ಕೂಡಲೇ ಅರಣ್ಯ ಇಲಾಖೆ(Forest Department) ಸಿಬ್ಬಂದಿಗೆ ಸಾರ್ವಜನಿಕರು ಮಾಹಿತಿ ನೀಡಿದರು.
ಬಳಿಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು, ಸ್ಥಳೀಯರು, ಧರ್ಮಸ್ಥಳ ಪತ್ತು ನಿರ್ವಹಣಾ ತಂಡದ ಸದಸ್ಯರ ಜೊತೆ ಅರಣ್ಯ ಸಿಬಂದಿ ನಾಗರಾಜ್ ಮತ್ತು ಅಗ್ನಿ ಶಾಮಕ ದಳದವರು ತಡ ರಾತ್ರಿವರೆಗೂ ಹೊತ್ತುತ್ತಿದ್ದ ಬೆಂಕಿಯನ್ನು ನಂದಿಸಿದರು. ಅಕ್ಕಪಕ್ಕದ ಕಾಫಿ ತೋಟ, ಮನೆಗಳಿಗೆ ಬೆಂಕಿ ವ್ಯಾಪಿಸದಂತೆ ತಡೆದು ಹೆಚ್ಚು ಅರಣ್ಯ ಸುಟ್ಟು ಹೋಗದಂತೆ ನಿಗಾವಹಿಸಲಾಯಿತು.
Watch Terrifying Video: ಕೊಲೆರಾಡೋದಲ್ಲಿ ಭಯಾನಕ ಕಾಡ್ಗಿಚ್ಚು, ನೂರಾರು ಮನೆಗಳು ಬೆಂಕಿಗಾಹುತಿ
ಕಾಡ್ಗಿಚ್ಚು ತಡೆಯಲು ಮಾಸ್ಟರ್ ಪ್ಲಾನ್: ಬೆಂಕಿ ತಡೆಯಲು ಡ್ರೋಣ್ ಕಣ್ಗಾವಲು..!
ಚಿಕ್ಕಮಗಳೂರು: ಅರಣ್ಯವನ್ನ ಯಾರೂ ಬೆಳೆಸೋದು ಬೇಡ. ಅದೇ ಬೆಳೆಯುತ್ತೆ. ಆದ್ರೆ, ರಕ್ಷಣೆ ಮಾಡೋದು ಮಾತ್ರ ಅನಿವಾರ್ಯ. ಅದ್ರಲ್ಲೂ ಈ ಬಾರಿ ಭಾರೀ ಮಳೆಯ ಮಧ್ಯೆಯೂ ಬಿಸಿಲಿನ ತಾಪ ವಿಶ್ವದ ಸೂಕ್ಷ್ಮ ಅರಣ್ಯಕ್ಕೂ ತಟ್ಟಿದೆ. ಹಾಗಾಗಿ, ಬೇಸಿಗೆಗೂ ಮುನ್ನವೇ ಬಿಸಿಲ ಬೇಗೆಯಿಂದ ಅರಣ್ಯ ರಕ್ಷಣೆಗೆ ಇಲಾಖೆ ಮುಂದಾಗಿದೆ. ಬೆಂಕಿಯಿಂದ ಕಾಡನ್ನ ರಕ್ಷಿಸಲು ನೂರಾರು ಕಿ.ಮೀ. ಫೈರ್ ಲೈನ್ ನಿರ್ಮಿಸಿದೆ. ಕಿಡಿಗೇಡಿಗಳಿಂದ ಬೀಳುವ ಬೆಂಕಿಯನ್ನು ತಡೆಯುಲು ಇಲಾಖೆ ಮಾಸ್ಟರ್ ಪ್ಲಾನ್ ರೂಪಿಸಿದೆ.
ಹೌದು, ಪ್ರಪಂಚದ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗಿರೋ ಪಶ್ಚಿಮಘಟ್ಟಗಳ ಸೌಂದರ್ಯದ ಶಕ್ತಿಯೇ ಶೋಲಾ ಕಾಡುಗಳು. ನೀರನ್ನ ಹಿಡಿದಿಟ್ಟುಕೊಂಡು ವರ್ಷಪೂರ್ತಿ ಹರಿಸೋ ಸಾಮರ್ಥ್ಯವಿರೋ ಶೋಲಾ ಕಾಡುಗಳು ಕೂಡ ಈ ಬಾರಿ ಬಿಸಿಲ ಛಾಯೆಯಿಂದ ತನ್ನ ಸಾಮರ್ಥ್ಯವನ್ನ ಕಳೆದುಕೊಂಡಿವೆ. ತಾಪದ ತೀವ್ರತೆಯಿಂದ ಶೋಲಾ ಕಾಡುಗಳು ಸೇರಿದಂತೆ ಅಲ್ಲಲ್ಲೇ ಅರಣ್ಯ ಬೆಂಕಿಗಾಹುತಿಯಾಗ್ತಿದೆ. 2004ರಲ್ಲಿ ಮುತ್ತೋಡಿಯಲ್ಲಿ ಕಾಡ್ಗಿಚ್ಚಿನಿಂದಾದ ದುರಂತದಿಂದ ಎಚ್ಚೆತ್ತುಕೊಂಡಿರೋ ಇಲಾಖೆ ಬೆಂಕಿಯಿಂದ ಕಾಡನ್ನ ರಕ್ಷಿಸಲು ಸೂಕ್ತ ಕ್ರಮ ಕೈಗೊಳ್ತಿದೆ.