* ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ರಾಮಲೂಟಿ ಗ್ರಾಮದಲ್ಲಿ ನಡೆದ ಘಟನೆ
* ಕೃಷ್ಣಾ ನದಿಗೆ ಏಕಾಏಕಿ ಹೆಚ್ಚಿನ ಪ್ರಮಾಣ ನೀರು ಬಿಡುಗಡೆ
* ನಡುಗಡ್ಡೆಯಲ್ಲಿ ಸಿಲುಕಿ ಪರದಾಡಿದ್ದ ಕುರಿಗಾಹಿ ದುರುಗಪ್ಪ
ರಾಯಚೂರು(ಸೆ.11): ಯ ನಡುಗಡ್ಡೆಯಲ್ಲಿ ಸಿಲುಕಿದ್ದ ಕುರಿಗಾಹಿಯನ್ನ ಅಗ್ನಿಶಾಮಕ ಸಿಬ್ಬಂದಿ ಕುರಿಗಳ ಸಮೇತ ಯನ್ನ ರಕ್ಷಿಸಿದ್ದಾರೆ. ಜಿಲ್ಲೆಯ ಲಿಂಗಸೂಗೂರು ತಾಲೂಕಿನ ರಾಮಲೂಟಿ ಗ್ರಾಮದ ಕುರಿಗಾಹಿ ದುರುಗಪ್ಪನನ್ನ ಅಗ್ಮಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ನಿನ್ನೆ(ಶುಕ್ರವಾರ) ಕೃಷ್ಣಾ ನದಿಗೆ ಏಕಾಏಕಿ ಹೆಚ್ಚಿನ ಪ್ರಮಾಣ ನೀರು ಬಿಡುಗಡೆ ಮಾಡಲಾಗಿತ್ತು. ಹೀಗಾಗಿ ನದಿಯಲ್ಲಿ ನೀರು ಹೆಚ್ಚಳದಿಂದ ದುರುಗಪ್ಪ ನಡುಗಡ್ಡೆಯಲ್ಲಿ ಸಿಲುಕಿ ಪರದಾಡುತ್ತಿದ್ದ.
ಯಾದಗಿರಿ: 7 ದಿನ ನಡುಗಡ್ಡೆಯಲ್ಲಿ ಸಿಲುಕಿದ್ದ ಕುರಿಗಾಹಿ ರಕ್ಷಣೆ
ಈ ಮಾಹಿತಿ ತಿಳಿದ ಅಗ್ನಿಶಾಮಕ ನಡುಗಡ್ಡೆಯಲ್ಲಿ ಸಿಲುಕಿ ಪರದಾಡುತ್ತಿದ್ದ ಗ್ರಾಮದ ಕುರಿಗಾಹಿ ದುರುಗಪ್ಪನನ್ನ ಅಗ್ಮಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಯಾರು ನಡುಗಡ್ಡೆಗೆ ಹೋಗದಂತೆ ಲಿಂಗಸೂಗೂರು ತಾಲೂಕಾಡಳಿತ ನದಿ ತೀರದ ಜನರಿಗೆ ಸೂಚನೆ ನೀಡಿದ್ದಾರೆ.