ಕೋಟೆನಾಡಿನಲ್ಲಿ ಕಿಡಿಗೇಡಿಗಳ ಕೃತ್ಯಕ್ಕೆ ಹೊತ್ತಿ ಉರಿದ ಜೋಗಿಮಟ್ಟಿ ಗಿರಿಧಾಮ

By Suvarna News  |  First Published Mar 27, 2022, 10:50 AM IST
  • ಜೋಗಿಮಟ್ಟಿ ಅರಣ್ಯಕ್ಕೆ ಹೊಂದಿದ ಗಿರಿಧಾಮಕ್ಕೆ ಬೆಂಕಿ.
  • ಕಿಡಿಗೇಡಿಗಳ ಕೃತ್ಯದಿಂದ ಸುಮಾರು ಎರಡು ತಾಸು ಒತ್ತಿ ಉರಿದ ಗಿರಿಧಾಮ.
  • ಮಿನಿ ಊಟಿ ಎಂದೇ ಪ್ರಖ್ಯಾತಿ ಪಡೆದಿರುವ ಜೋಗಿಮಟ್ಟಿ ಅರಣ್ಯ ಪ್ರದೇಶ

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್ 


ಚಿತ್ರದುರ್ಗ: ಕೋಟೆನಾಡಿನಲ್ಲಿ ಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ಒಂದಾದ ಜೋಗಿಮಟ್ಟಿ ಅರಣ್ಯ (jogimatti forest) ಪ್ರದೇಶವನ್ನು ನೋಡಲು ನಾನಾ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ಪ್ರವಾಸಿಗರು ಆಗಮಿಸ್ತಾರೆ. ಮಳೆಗಾಲದಲ್ಲಂತೂ ಮಿನಿ ಊಟಿ ಎಂದೇ ಪ್ರಖ್ಯಾತಿ ಪಡೆದಿದೆ ಈ ಜೋಗಿಮಟ್ಟಿ ಅರಣ್ಯ ಪ್ರದೇಶ. ಆದ್ರೆ ತಡರಾತ್ರಿ ಕಿಡಿಗೇಡಿಗಳು‌ ಮಾಡಿರೋ ಕೃತ್ಯದಿಂದಾಗಿ ಅರಣ್ಯ ಧಾಮಕ್ಕೆ ಹೊಂದಿ ಕೊಂಡಿರೋ ಗಿರಿಧಾಮಕ್ಕೆ (Hill station) ಬೆಂಕಿ (fire) ಆವರಿಸಿದೆ. ಸುಮಾರು ಎರಡು ಗಂಟೆಗಳ ಕಾಲ ಹೊತ್ತಿ ಉರಿದಿರೋ ಬೆಂಕಿಯಿಂದಾಗಿ ಅನೇಕ ಗಿಡ ಮರಗಳು ಬೆಂಕಿಗಾಹುತಿ ಆಗಿರೋದು ಪರಿಸರ ಪ್ರೇಮಿಗಳಲ್ಲಿ (Environmentalist) ಬೇಸರ ತಂದಿದೆ. ವಿಷಯ ತಿಳಿದು ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ (Forest Department) ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Tap to resize

Latest Videos

ಮದರಸಗಳಲ್ಲಿ ದೇಶದ್ರೋಹ ಪಾಠ ಮಾಡಲಾಗುತ್ತಿದೆ: ರೇಣುಕಾಚಾರ್ಯ 

ಸದ್ಯಕ್ಕೆ ಜೋಗಿಮಟ್ಟಿಗೆ ನೋ ಎಂಟ್ರಿ : 
ಬೇಸಿಗೆ ಕಾಲದಲ್ಲಿ ಪ್ರತೀ ವರ್ಷ ಎರಡು ತಿಂಗಳು ಗಳ‌ ಕಾಲ ಜೋಗಿಮಟ್ಟಿ ವೀಕ್ಷಿಸಲು ಪ್ರವಾಸಿಗರಿಗೆ ನಿರ್ಬಂಧ. ಬಿರು ಬೇಸಿಗೆ ಸಮಯದಲ್ಲಿ ಪ್ರಾಣಿಗಳು ಜೋಗಿಮಟ್ಟಿ ಅರಣ್ಯ ಪ್ರದೇಶದಲ್ಲಿ ಸುತ್ತಾಟ ಮಾಡುವುದು ಹೆಚ್ಚಿರುತ್ತದೆ. ಅದಕ್ಕಾಗಿಯೇ ಅರಣ್ಯ ಇಲಾಖೆ ಪ್ರತೀ ಬೇಸಿಗೆ ಸಮಯದಲ್ಲಿ ಎರಡು ತಿಂಗಳು ಯಾರನ್ನೂ ಅರಣ್ಯಧಾಮ ವೀಕ್ಷಣೆ ಮಾಡಲು ಅವಕಾಶ ಕೊಡವುದಿಲ್ಲ. ಪ್ರವಾಸಿಗರು ವೀಕ್ಷಣೆಗೆ ತೆರಳಿದ ಸಂದರ್ಭದಲ್ಲಿ ಏನಾದ್ರು ಅನಾಹುತಗಳು ಆಗಬಹುದು ಎಂಬ ಭಯ. ಮತ್ತೊಂದು ಕಡೆ ಹೋದಂತಹ ಪ್ರವಾಸಿಗರು ಪ್ರಾದಿಗಳ ಮೇಲೆ ಏನಾದ್ರು ದಾಳಿ ಮಾಡುವ ಕ್ರೂರ ಮನಸ್ಸಿನವರು ಇರ್ತಾರೆ ಎಂಬ ಆತಂಕ. ಇದೆಲ್ಲದನ್ನು ಅರಿತ ಅರಣ್ಯ ಇಲಾಖೆ ಈ ವೇಳೆಯಲ್ಲಿ ಎರಡು ತಿಂಗಳುಗಳ‌ ಕಾಲ ಯಾವುದೇ ಪ್ರವಾಸಿಗರಿಗೂ ಜೋಗಿಮಟ್ಟಿ ವೀಕ್ಷಣೆಗೆ ಪ್ರವೇಶ ನಿರ್ಬಂಧ ಹೇರಿದೆ.

click me!