
ಉತ್ತರಕನ್ನಡ(ಅ.17): ಜಿಲ್ಲೆಯ ಹಳಿಯಾಳ ಪಟ್ಟಣದಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದೆ. ಅಂಗಡಿಗಳು ಹಾಗೂ ಮನೆ ಧಗಧಗನೆ ಹೊತ್ತಿ ಉರಿಯುತ್ತಿವೆ. ಬೆಂಕಿ ನಂದಿಸಲು ಅಗ್ನಿ ಶಾಮಕ ದಳದ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದ ಉಪನೋಂದಣಿ ಕಚೇರಿ ಬಳಿ ಅಗ್ನಿ ಅವಘಡ ಸಂಭವಿಸಿದೆ.
ಸ್ಥಳಕ್ಕೆ ಅಗ್ನಿ ಶಾಮಕ ದಳ ಹಾಗೂ ಪೊಲೀಸ್ ಇಲಾಖೆ ದೌಡಾಯಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ನಿರಂತರ ಸುರಿಯುತ್ತಿರುವ ಮಳೆಯ ನಡುವೆಯೇ ಕಾರ್ಯಾಚರಣೆ ಮುಂದುವರಿದಿದೆ. ಕಳೆದ ಒಂದು ಗಂಟೆಯಿಂದ ಕಾರ್ಯಾಚರಣೆ ನಡೆಯುತ್ತಿದೆ.
ಹೊನ್ನಾವರ: ಕೃಷಿ ಹೊಂಡದಲ್ಲಿ ಬಿದ್ದಿದ್ದ ನಾಲ್ಕು ಕಾಡುಹಂದಿ ಮರಿಗಳ ರಕ್ಷಣೆ
ರವಿ ಝೆರಾಕ್ಸ್ ಸೆಂಟರ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಹಬ್ಬಿ ಅಕ್ಕ ಪಕ್ಕದ ಅಂಗಡಿಗಳು ಹಾಗೂ ಮನೆಗೂ ಹಾನಿ ಬೆಂಕಿ ಹಬ್ಬಿದೆ. ಗದಿಗೆಪ್ಪ ಖಾನಾವಳಿ, ಆರ್‌ಎನ್‌ಎಸ್ ಎಲೆಕ್ಟ್ರಿಕಲ್ಸ್, ಅಪ್ಪು ಜ್ಯುವೆಲ್ಲರಿ ಹಾಗೂ ಮನೆಯೊಂದಕ್ಕೆ ಬೆಂಕಿ ತಗುಲಿದೆ.
ಅಗ್ನಿಶಾಮಕದಳ ಹಾಗೂ ಪೊಲೀಸರು ಈವರೆಗೂ ಬೆಂಕಿ ನಂದಿಸಲಾಗದೇ ಹರಸಾಹಸ ಪಡುತ್ತಿದ್ದಾರೆ. ದುರ್ಘಟನೆಯಿಂದ ಈವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಹಳಿಯಾಳ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.