ಕೊಪ್ಪಳ: ಚಿಕನ್-ಮಟನ್ ಅಂಗಡಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರು!

By Girish Goudar  |  First Published Oct 17, 2024, 10:14 PM IST

ಖಾಧೀರ್ ಕಲಾಲ್ ಇದೀಗ ಕುಕನೂರು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಈಗ ಹೊಸದಾಗಿ ಪ್ರಾರಂಭಿಸಿರುವ ಅಂಗಡಿಗೆ ಶೋಭಾ ಕರಂದ್ಲಾಜೆ ಮಟನ್ ಆಂಡ್ ಚಿಕನ್ ಸೆಂಟರ್ ಹೆಸರು ಬರೆಸಿದ್ದಾನೆ. ನಾಮಫಲಕದ ಹೆಸರೀಗ ಭಾರೀ ವೈರಲ್ ಆಗಿದೆ.
 


ವರದಿ- ದೊಡ್ಡೇಶ್ ಯಲಿಗಾರ್ ಏಶಿಯಾನೆಟ್ ಸುವರ್ಣ ನ್ಯೂಸ್

ಕೊಪ್ಪಳ(ಅ.17): ಸಾಮಾನ್ಯವಾಗಿ ತಮ್ಮ ಮನೆ ದೇವರ ಹೆಸರನ್ನು ತಾವು ಆರಂಭಿಸುವ ಉದ್ಯಮಕ್ಕೆ ಇಡುತ್ತಾರೆ. ಆದರೆ ಇಲ್ಲೊಬ್ಬ ಉದ್ಯ ವ್ಯಕ್ತಿ ತಾನು ಆರಂಭಿಸಿದ ಉದ್ಯಮಕ್ಕೆ ಕೇಂದ್ರ ಸಚಿವರ ಹೆಸರಿಡುವ ಮೂಲಕ ಅಭಿಮಾನ ಮೆರೆದಿದ್ದಾನೆ.

Latest Videos

undefined

ಯಾರ ಹೆಸರು ಉದ್ಯಮಕ್ಕೆ ಇಟ್ಟಿರುವುದು?

ಶೋಭಾ ಕರಂದ್ಲಾಜೆ ಹೆಸರು ಯಾರಿಗೆ ತಾನೇ ಗೋತ್ತಿಲ್ಲ ಹೇಳಿ. ಈ ಹಿಂದೆ ರಾಜ್ಯದಲ್ಲಿ ಇಂಧನ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಇದಾದ ಬಳಿಕ ಸಂಸದೆಯಾಗಿ ಪ್ರಸ್ತುತ ಕೇಂದ್ರ ಸಚಿವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಖ್ಯಾತ ರಾಜಕಾರಣಿ ಶೋಭಾ ಕರಂದ್ಲಾಜೆಯ ಹೆಸರನ್ನು ಅವರ ಅಭಿಮಾನಿ ತಾನು ಸ್ಥಾಪಿಸಿರುವ ಉದ್ಯಮಕ್ಕೆ ಇಟ್ಟಿದ್ದಾರೆ.

ಕೊಪ್ಪಳ: ಕಾಲು ಜಾರಿ ಕೆರೆಗೆ ಬಿದ್ದು ಮಹಿಳೆ ಸಾವು, 2 ತಿಂಗಳ ಹಸುಗೂಸು ಅಗಲಿದ ತಾಯಿ!

ಯಾರು ಉದ್ಯಮಕ್ಕೆ ಶೋಭಾ ಕರಂದ್ಲಾಜೆ ಹೆಸರಿಟ್ಟಿದ್ದು?

ಕುಕನೂರು ಪಟ್ಟಣದ ಯುವಕ ಖಾಧೀರ್ ಕಲಾಲ್‌ ಎನ್ನುವ ಯುವಕ ಆರಂಭಿಸಿರುವ ಉದ್ಯಮ ಇದೀಗ ಸಾಕಷ್ಟು ಸದ್ದು ಮಾಡುತ್ತಿದೆ. ಅದಕ್ಕೆ ಆತ ತನ್ನ ಉದ್ಯಮಕ್ಕೆ ಇಟ್ಟಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೆಸರು. ಪಟ್ಟಣದ ನಿವಾಸಿ ಖಾಧೀರ್ ಬಾಬಣ್ಣ ಕಲಾಲ್‌ ಎನ್ನುವ ಯುವಕ ಕಳೆದ 20 ವರ್ಷಗಳಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಅಪ್ಪಟ ಅಭಿಮಾನಿಯಾಗಿದ್ದಾನೆ. ಈ ಹಿನ್ನಲೆಯಲ್ಲಿ ಖಾಧೀರ್ ಕಲಾಲ್ ಇದೀಗ ತನ್ನ ಉದ್ಯಮಕ್ಕೆ ಶೋಭಾ ಕರಂದ್ಲಾಜೆ ಹೆಸರಿಟ್ಟಿದ್ದಾನೆ.

ಖಾಧೀರ್ ಕಲಾಲ್ ಇದೀಗ ಕುಕನೂರು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಈಗ ಹೊಸದಾಗಿ ಪ್ರಾರಂಭಿಸಿರುವ ಅಂಗಡಿಗೆ ಶೋಭಾ ಕರಂದ್ಲಾಜೆ ಮಟನ್ ಆಂಡ್ ಚಿಕನ್ ಸೆಂಟರ್ ಹೆಸರು ಬರೆಸಿದ್ದಾನೆ. ನಾಮಫಲಕದ ಹೆಸರೀಗ ಭಾರೀ ವೈರಲ್ ಆಗಿದೆ.

ಖಾಧೀರ್ ಶೋಭಾ ಕರಂದ್ಲಾಜೆ ಅಭಿಮಾನಿ ಆಗಿದ್ದು ಹೇಗೆ?

ಖಾಧೀರ್ ಕಳೆದ 2008 ರಿಂದ ವರ್ಷಗಳಿಂದ ಶೋಭಾ ಕರಂದ್ಲಾಜೆ ಅವರ ಅಭಿಮಾನಿಯಾಗಿದ್ದಾನೆ. ಅಂದಿನ  ಶಾಸಕರಾಗಿದ್ದ ಈಶಣ್ಣ ಗುಳಗಣ್ಣನವರ್ ಚುನಾವಣೆ ಸಮಯದಲ್ಲಿ ಶೋಭಾ ಕರಂದ್ಲಾಜೆ ಆಗಮಿಸಿದ್ದರು.‌ ಈ ವೇಳೆ ಅವರ ಭಾಷಣ ಕೇಳಿ ಖಾಧೀರ್ ಶೋಭಾ ಕರಂದ್ಲಾಜೆ ಅವರ ಅಭಿಮಾನಿಯಾಗಿದ್ದಾರೆ.

ಜಾತಿ ಗಣತಿ ವರದಿ ಕುರಿತು ಕ್ಯಾಬಿನೆಟ್‌ನಲ್ಲಿ ಚರ್ಚೆ: ಸಿಎಂ ಸಿದ್ದರಾಮಯ್ಯ

ಮಾಜಿ ಸಚಿವರಾದ ಹಾಲಪ್ಪ ಆಚಾರ್ ಅವರ ನಿವಾಸದಲ್ಲಿ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಈ ವೇಳೆಯಲ್ಲಿ ಶೋಭಾ ಕರಂದ್ಲಾಜೆ ಅವರ ಟ್ಯಾಟೋ ಹಾಕಿಸಿಕೊಂಡಿದ್ದನ್ನು ಅವರಿಗೆ ತೋರಿಸಿದ್ದ. ಇನ್ನು ಒಬ್ಬ ಮಹಿಳೆಯಾಗಿ ಶೋಭಾ ಕರಂದ್ಲಾಜೆ ಅವರ ನಿರಂತರ ಪರಿಶ್ರಮದಿಂದ ಈ ಮಟ್ಟಿಗೆ ಬೆಳೆದಿರುವುದು ಅಭಿಮಾನದ ಸಂಗತಿ. ಈ ಕಾರಣಕ್ಕಾಗಿಯೇ ನನ್ನ ಅಂಗಡಿಗೆ ಅಭಿಮಾನಪೂರ್ವಕವಾಗಿ ಅವರ ಹೆಸರನ್ನು ಹಾಕಿಸಿದ್ದೇನೆ ಅಂತಾನೆ ಖಾಧೀರ್ ಕಲಾಲ್‌.

ಒಟ್ಟಿನಲ್ಲಿ ತನ್ನ ನೆಚ್ಚಿನ ನಾಯಕಿಯ ಹೆಸರನ್ನು ತನ್ನ ಚಿಕನ್-ಮಟನ್ ಅಂಗಡಿಗೆ ಇಡುವ ಮೂಲಕ ಅಭಿಮಾನ ತೋರಿರುವುದು ನಿಜಕ್ಕೂ ವಿಶೇಷವೇ ಸರಿ.

click me!