ಧಾರವಾಡ: ಹೊಸ ಥರ್ಮಸ್ ಮರಳಿಸುವಲ್ಲಿ ವಿಫಲ, ಫ್ಲಿಪ್‍ಕಾರ್ಟ್‌ಗೆ ಬಿತ್ತು ದಂಡ..!

By Girish Goudar  |  First Published Sep 26, 2023, 12:45 PM IST

ದೂರುದಾರನಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ಹಿಂಸೆಗಾಗಿ ರೂ.10,000 ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.5,000 ನೀಡುವಂತೆ ಇಬ್ಬರೂ ಎದುರುದಾರರಿಗೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದ ಜಿಲ್ಲಾ ಗ್ರಾಹಕರ ಆಯೋಗ. 
 


ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ 

ಧಾರವಾಡ(ಸೆ.26):  ಧಾರವಾಡದ ಖಾನಾಪೂರ ಮ. ತಡಕೋಡ ಗ್ರಾಮದ ವಾಸಿ ಈರಣ್ಣ ಗುಂಡಗೋವಿ HB ಎಂಬುವವರು ಪ್ಲಿಪ್‍ಕಾರ್ಟ ಕಂಪನಿಯಿಂದ ಆನ್‍ಲೈನ್ ಮೂಲಕ  ದಿ:14/01/2023 ರಂದು ರೂ.2,632/- ಸಂದಾಯ ಮಾಡಿ ಮಿಲ್ಟನ್ ಬೆವರೇಜ್ ಡಿಸ್ಪೆನ್ಸರ್ 2500 ಎಮ್.ಎಲ್.ನ ಥರ್ಮಸ್ ಆರ್ಡರ್ ಮಾಡಿದ್ದರು ಅದರ ಆಯ್‍ ಡಿ.ನಂ. ಓಡಿ ನಂ.427057552465496100 ಇರುತ್ತದೆ. ಅದರಂತೆ ಸದರಿ ಥರ್ಮಸ್‍ನ್ನು 1ನೇ ಎದುರುದಾರರ ಕೋರಿಯರ್ ಸರ್ವಿಸ್‍ನವರು ದಿ:19/01/2023 ರಂದು ದೂರುದಾರನಿಗೆ ತಲುಪಿಸಿದ್ದರು. 

Tap to resize

Latest Videos

ದೂರುದಾರ ಆ ಥರ್ಮಸ್‍ನ್ನು ಬಳಸಲು ತೆರೆದು ನೋಡಿದಾಗ ಅದು ದೋಷದಿಂದ ಕೂಡಿರುವುದು ಕಂಡು ಬಂದಿರುತ್ತದೆ. ಆದ್ದರಿಂದ ಅದನ್ನು ವಾಪಸ್ಸು ಕಳುಹಿಸಲು 1ನೇ ಎದುರುದಾರರಿಗೆ ದೂರುದಾರ ದಿ:21/01/2023 ರಂದು ವಿನಂತಿಸಿಕೊಂಡಿರುತ್ತಾರೆ ಅದರಂತೆ ಕಂಪನಿಯ ಕೋರಿಯರ್ ಸರ್ವಿಸ್‍ನವರು ಆ ಥರ್ಮಸನ್ನು ದೂರುದಾರನಿಂದ ದಿ:24/01/2023 ರಂದು ಹಿಂಪಡೆದುಕೊಂಡು ಹೋಗಿರುತ್ತಾರೆ. 

ಸಂತೋಷ ಲಾಡ್‌ರಿಂದ ಬಳ್ಳಾರಿ ದಿವಾಳಿ; ಯತ್ನಾಳ ಹೇಳಿಕೆಗೆ ಲಾಡ್ ತಿರುಗೇಟು

ಆದರೆ ಆ ದೋಷಯುಕ್ತ ಥರ್ಮಸ್ ಬದಲು ಬೇರೆ ಹೊಸ ಥರ್ಮಸ್‌ ಕೊಡದೇ, ಅದರ ಬೆಲೆ ರೂ.2,632/- ನ್ನು ಹಿಂದಿರುಗಿಸದೇ ಥರ್ಮಸ್ ವಸ್ತುವನ್ನು ಮರಳಿ ಪಡೆಯುವಿಕೆ ರದ್ದುಗೊಳಿಸಲಾಗಿರುತ್ತದೆ ಅಂತ ದೂರುದಾರನ ಮೂಬೈಲ್‍ಗೆ ದಿ:29/01/2023 ರಂದು 1ನೆ ಎದುರುದಾರರು ಸಂದೇಶ ಕಳುಹಿಸಿರುತ್ತಾರೆ. ಎದುರುದಾರ ನಂ.1 ಮತ್ತು 2ನೇ ರವರ ಇಂತಹ ನಡಾವಳಿಕೆಯಿಂದ ತನಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆ ಹಾಗೂ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ ಅಂತಾ ಹೇಳಿ ಅವರ ವಿರುದ್ಧ ಗ್ರಾಹಕ ಸಂರಕ್ಷಣಾ ಕಾಯಿದೆ ಅಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:19/04/2023 ರಂದು ದೂರನ್ನು ಸಲ್ಲಿಸಿದ್ದರು. 

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ.ಭೂತೆ ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಅವರು ದೋಷಯುಕ್ತ ಮಿಲ್ಟನ್ ಬೆವರೇಜ್ ಡಿಸ್ಪನ್ಸರ್ ಥರ್ಮಸ್ ಹಿಂಪಡೆದು ಬೇರೆ ಹೊಸ ಥರ್ಮಸ್ ಮರಳಿಸುವಲ್ಲಿ ಎದುರುದಾರರು ವಿಫಲರಾಗಿ ದೂರುದಾರನಿಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. 

ಎದುರುದಾರರು ದೂರುದಾರರಿಗೆ ಥರ್ಮಸ್‍ನ ಮೌಲ್ಯ ರೂ.2,632/- ಗಳನ್ನು ಈ ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ಕೊಡಲು ಆದೇಶಿಸಿದೆ ಅಲ್ಲದೇ ದೂರುದಾರನಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ಹಿಂಸೆಗಾಗಿ ರೂ.10,000 ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.5,000 ಹಣ ನೀಡುವಂತೆ ಇಬ್ಬರೂ ಎದುರುದಾರರಿಗೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.

click me!