ಎಲ್ಲಿ ಹೋದರೂ ಮನೆ ಕೇಳುತ್ತಾರೆ, ಮದುವೆಯಾದ ಮೇಲೆ ಹೆಂಡತಿಯನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿಯಾ? ಅನ್ನುತ್ತಾರೆ ಎಂದು ಅಳಲು ತೋಡಿಕೊಂಡರಲ್ಲದೆ, ಇದಕ್ಕೆ ಸೂಕ್ತ ಪರಿಹಾರ ಒದಗಿಸಿ, ಇಲ್ಲವೇ ದಯಾ ಮರಣ ನೀಡಿಬಿಡಿ ಎಂದು ಆಕ್ರೋಶ ಹೊರಹಾಕಿದ ಅರ್ಜಿದಾರ.
ಚಾಮರಾಜನಗರ(ಸೆ.26): ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಜಿಲ್ಲಾಡಳಿತ ಭವನದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾ ಜನತಾ ದರ್ಶನ ನಡೆಯಿತು.
280 ಕ್ಕಿಂತಲೂ ಹೆಚ್ಚಿನ ಮಂದಿ ಸಚಿವರಿಗೆ ಅಹವಾಲು ಸಲ್ಲಿಸಿ ಅಧಿಕಾರಿಗಳ ವಿರುದ್ಧ ದೂರುಗಳ ಸುರಿಮಳೆಗೈದರು.
undefined
ದಾವಣಗೆರೆ: ಜನತಾ ದರ್ಶನದಲ್ಲಿ ಹರಿದುಬಂದ ಸಮಸ್ಯೆಗಳ ಮಹಾಪೂರ!
ಇಲ್ಲೊಬ್ಬ ಅರ್ಜಿದಾರ ‘ಎಲ್ಲಿ ಹೋದರೂ ಮನೆ ಕೇಳುತ್ತಾರೆ, ಮದುವೆಯಾದ ಮೇಲೆ ಹೆಂಡತಿಯನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿಯಾ? ಅನ್ನುತ್ತಾರೆ ಎಂದು ಅಳಲು ತೋಡಿಕೊಂಡರಲ್ಲದೆ, ಇದಕ್ಕೆ ಸೂಕ್ತ ಪರಿಹಾರ ಒದಗಿಸಿ, ಇಲ್ಲವೇ ದಯಾ ಮರಣ ನೀಡಿಬಿಡಿ ಎಂದು ಆಕ್ರೋಶ ಹೊರಹಾಕಿದರು.