ಕನ್ನಡದಲ್ಲಿ ಮಾತಾಡಿದರೆ ದಂಡ: ವರದಿಗೆ ಸೂಚನೆ

By Kannadaprabha NewsFirst Published Feb 16, 2020, 7:52 AM IST
Highlights

ಶಾಲಾ ಆವರಣದಲ್ಲಿ ಕನ್ನಡ ಮಾತನಾಡುವುದನ್ನು ಅಪರಾಧವೆಂದು ಪರಿಗಣಿಸಿ ದಂಡ ಹಾಕುವುದಾಗಿ ಸೂಚಿಸಿರುವ ಬೆಂಗಳೂರಿನ ಚೆನ್ನಸಂದ್ರದ ಎಸ್‌ಎಲ್‌ಎಸ್‌ ಶಾಲಾ ಪ್ರಕರಣ ಕುರಿತು ವರದಿ ನೀಡುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಇಲಾಖಾ ಪ್ರಧಾನ ಕಾರ್ಯದರ್ಶಿ ಅವರಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ.

ಬೆಂಗಳೂರು(ಫೆ.16): ಶಾಲಾ ಆವರಣದಲ್ಲಿ ಕನ್ನಡ ಮಾತನಾಡುವುದನ್ನು ಅಪರಾಧವೆಂದು ಪರಿಗಣಿಸಿ ದಂಡ ಹಾಕುವುದಾಗಿ ಸೂಚಿಸಿರುವ ಬೆಂಗಳೂರಿನ ಚೆನ್ನಸಂದ್ರದ ಎಸ್‌ಎಲ್‌ಎಸ್‌ ಶಾಲಾ ಪ್ರಕರಣ ಕುರಿತು ವರದಿ ನೀಡುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಇಲಾಖಾ ಪ್ರಧಾನ ಕಾರ್ಯದರ್ಶಿ ಅವರಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ.

ಎಸ್‌ಎಲ್‌ಎಸ್‌ ಶಾಲೆಯು ಲಿಖಿತ ಸೂಚನೆ ಮೂಲಕ ತನ್ನ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಶಾಲಾ ಆವರಣದಲ್ಲಿ ಕನ್ನಡದಲ್ಲಿ ಸಂಭಾಷಣೆ ನಡೆಸಿದರೆ ಅಥವಾ ಕನ್ನಡದಲ್ಲಿ ಮಾತನಾಡಿದರೆ ಅದನ್ನು ಅಪರಾಧವೆಂದು ಪರಿಗಣಿಸಿ ಮೊದಲ ಬಾರಿ .50 ಹಾಗೂ ಪುನರಾವರ್ತನೆಗೊಂಡ ಪ್ರಕರಣಕ್ಕೆ .100 ಗಳಂತೆ ದಂಡ ವಿಧಿಸಲಾಗುತ್ತದೆ ಎಂದು ಮಕ್ಕಳ ಪೋಷಕರಿಗೆ ಪತ್ರ ಕಳುಹಿಸಿದೆ.

ಅಮೆರಿಕ ಉದ್ಯೋಗದಾಸೆಯಲ್ಲಿ ಕಾಯ್ತಿದ್ದ ಯುವಕನಿಗೆ ಲಕ್ಷ ಲಕ್ಷ ವಂಚನೆ

ಈ ಕ್ರಮವು ಶಿಕ್ಷಣ ಹಕ್ಕು ಕಾಯ್ದೆ-2019, ಶಿಕ್ಷಣ ಹಕ್ಕು ನಿಯಮಗಳು-2012, ಕನ್ನಡ ಕಲಿಕಾ ಅಧಿನಿಯಮ-2015 ಮತ್ತು ಕನ್ನಡ ಕಲಿಕಾ ನಿಯಮಗಳು-2017ರ ಸಂಪೂರ್ಣ ಉಲ್ಲಂಘನೆಯಾಗಿದೆ. ಹೀಗಾಗಿ, ಎಸ್‌ಎಲ್‌ಎಸ್‌ ಶಾಲೆಯ ಮಾನ್ಯತೆಯನ್ನು ನಿಯಮಾನುಸಾರ ರದ್ದುಗೊಳಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಶಿಫಾರಸು ಮಾಡಿದೆ. ಈ ಸಂಬಂಧ ಕೂಡಲೇ ಪರಿಶೀಲನೆ ನಡೆಸಿ ನನಗೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.

ಟೇಕಾಫ್‌ ಆಗುವಾಗ ವಿಮಾನಕ್ಕೆ ಅಡ್ಡ ಬಂತು ಜೀಪ್‌!

ಶಾಲಾ ಸುತ್ತೋಲೆಯನ್ನು ಆಧರಿಸಿ ಇತ್ತೀಚೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಅವರು ಖುದ್ದು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಶಾಲಾ ಆಡಳಿತ ಮಂಡಳಿಯು ದಂಡ ವಿಧಿಸುವುದಾಗಿ ಸೂಚನೆ ನೀಡಿರುವುದು ರುಜುವಾತು ಆದ ಬಳಿಕ ಶಿಕ್ಷಣ ಇಲಾಖೆಗೆ ಎಸ್‌ಎಲ್‌ಎಸ್‌ ಶಾಲಾ ಮಾನ್ಯತೆ ರದ್ದುಗೊಳಿಸುವಂತೆ ಶಿಫಾರಸು ಮಾಡಿತ್ತು. ಅದರಂತೆ ಇದೀಗ ಸಚಿವರು ಸೂಚನೆ ನೀಡಿದ್ದಾರೆ.

click me!