ಜನತಾ ಕರ್ಫ್ಯೂ ಪರಿಣಾಮ: ಗುಟ್ಕಾಕ್ಕಾಗಿ ಯುವಕರ ಮಧ್ಯೆ ಮಾರಾಮಾರಿ..!

Kannadaprabha News   | Asianet News
Published : Apr 30, 2021, 02:44 PM IST
ಜನತಾ ಕರ್ಫ್ಯೂ ಪರಿಣಾಮ: ಗುಟ್ಕಾಕ್ಕಾಗಿ ಯುವಕರ ಮಧ್ಯೆ ಮಾರಾಮಾರಿ..!

ಸಾರಾಂಶ

ದುಪ್ಪಟ್ಟು ದರಕ್ಕೆ ಗುಟ್ಕಾ| ಹೊಡೆದಾಟದ ದೃಶ್ಯ ವೈರಲ್‌| ಹುಬ್ಬಳ್ಳಿ ನಗರದ ನಗರದ ಬಾರದಾನ ಸಾಲ ಗಲ್ಲಿಯಲ್ಲಿ ನಡೆದ ಘಟನೆ| ಸ್ಥಳಕ್ಕೆ ಆಗಮಿಸಿ ಯುವಕರಿಗೆ ಎಚ್ಚರಿಕೆ ನೀಡಿ ಕಳುಹಿಸಿದ ಪೊಲೀಸರು| 

ಹುಬ್ಬಳ್ಳಿ(ಏ.30): ಅಂಗಡಿಯಲ್ಲಿ ದುಪ್ಪಟ್ಟು ದರಕ್ಕೆ ಗುಟ್ಕಾ ಮಾರಾಟ ಮಾಡಿದ ವಿಚಾರಕ್ಕೆ ಸಂಬಂಧಿಸಿ ಅಂಗಡಿ ಮಾಲೀಕರು ಮತ್ತು ಗ್ರಾಹಕರು ಹೊಡೆದಾಡಿಕೊಂಡಿರುವ ಘಟನೆ ನಗರದ ಬಾರದಾನ ಸಾಲ ಗಲ್ಲಿಯಲ್ಲಿ ಇತ್ತೀಚೆಗೆ ನಡೆದಿದ್ದು ಇದರ ವೀಡಿಯೋ ವೈರಲ್‌ ಆಗಿದೆ. 

ಕರ್ಫ್ಯೂ ಹಿನ್ನೆಲೆಯಲ್ಲಿ ಅಂಗಡಿ ಮುಗ್ಗಟ್ಟುಗಳೆಲ್ಲ ಬಂದ್‌ ಆಗಿವೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಪಾನ್‌ಶಾಪ್‌ನವರು ದುಪ್ಪಟ್ಟು ದರಕ್ಕೆ ಗುಟುಕಾ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಗುಟುಕಾ ಕೊಳ್ಳಲು ಬಂದ ನಾಲ್ಕೈದು ಜನ ಯುವಕರು ಹಾಗೂ ಅಂಗಡಿ ಮಾಲೀಕರ ನಡುವೆ ಜಗಳ ಶುರುವಾಗಿದ್ದು ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದ ಜಗಳದಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. 

ಹುಬ್ಬಳ್ಳಿ: ಸ​ಭಾ​ಪ​ತಿ ಹೊರಟ್ಟಿಗೆ ಕೊರೋನಾ ದೃಢ

ಈ ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ ಯುವಕರಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಈ ದೃಶ್ಯ ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದ್ದು ವೈರಲ್‌ ಆಗಿದೆ.
 

PREV
click me!

Recommended Stories

ಪ್ರಧಾನಿಗೆ ಪತ್ರ ಬರೆಯುವುದರಲ್ಲಿ ಸಿದ್ದರಾಮಯ್ಯ, ಡಿಕೆಶಿ ನಿಸ್ಸೀಮರು: ಬಿ.ವೈ.ವಿಜಯೇಂದ್ರ
ಕುಡುಕರ ಲಿವರ್‌ ಚಿಕಿತ್ಸೆಗೆ ಹಣ ಕೇಳಿದ ಶಾಸಕರು: ಪರಿಷತ್‌ನಲ್ಲಿ ಸ್ವಾರಸ್ಯಕರ ಚರ್ಚೆ