ಕೊರೋನಾ ಸಂಕಷ್ಟ: RTE ಹಣ ಮರುಪಾವತಿಗೆ ಆಗ್ರಹ

By Kannadaprabha NewsFirst Published May 25, 2020, 11:56 AM IST
Highlights

ಶಿಕ್ಷಣ ಸಚಿವರಿಗೆ ಜಿಲ್ಲಾ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಮನವಿ| ಕೋವಿಡ್‌ -19 ರ ಕೊರೋನಾ ಮಹಾಮಾರಿ ಎಲ್ಲಾ ಕ್ಷೇತ್ರಗಳನ್ನೂ ಸಂಕಷ್ಟಕ್ಕೆ ಸಿಲುಕಿಸಿದೆ|

ಹಾಸನ(ಮೇ.25): ಖಾಸಗಿ ಶಿಕ್ಷಣ ಸಂಸ್ಥೆಗಳ ಆರ್‌ಟಿಇ ಹಣ ಮರುಪಾವತಿ ಮತ್ತು ಅನುದಾನ ರಹಿತ ಶಾಲೆಗಳಿಗೆ ಆರ್ಥಿಕ ನೆರವು ಹಾಗೂ 6 ನೇ ವೇತನ ಆಯೋಗದನ್ವಯ ವೇತನ ಪಾವತಿ ಪುನರ್ವಿಮರ್ಶೆಗೆ ಒತ್ತಾಯಿಸಿ ಹಾಸನ ಜಿಲ್ಲಾ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದಿಂದ ಶನಿ​ವಾರ ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಅವ​ರಿಗೆ ಮನವಿ ಸಲ್ಲಿಸಲಾಯಿತು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣಕ್ಕೆ ಆಗಮಿಸಿದಾಗ ಮುಖ್ಯ ದ್ವಾರದಲ್ಲಿ ಮನವಿ ಸಲ್ಲಿಸಿದ ಜಿಲ್ಲಾ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದವರು, ಕೋವಿಡ್‌ -19 ರ ಕೊರೋನಾ ಮಹಾಮಾರಿ ಎಲ್ಲಾ ಕ್ಷೇತ್ರಗಳನ್ನೂ ಸಂಕಷ್ಟಕ್ಕೆ ಸಿಲುಕಿಸಿದೆ. ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಶಾಲಾ ಸಿಬ್ಬಂದಿ ವೇತನ, ಕಟ್ಟಡ ನಿರ್ವಹಣೆ, ವಿದ್ಯುತ್‌, ನೀರು, ಇತರ ತೆರಿಗೆ ಪಾವತಿ, ಬ್ಯಾಂಕ್‌ / ಸಹಕಾರ ಸಂಸ್ಥೆಗಳಿಂದ ಪಡೆದ ಸಾಲದ ಮರುಪಾವತಿ ಹೀಗೆ ಹಲವು ಬಗೆಯಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳೂ ಆರ್ಥಿಕವಾಗಿ ಕಷ್ಟವನ್ನು ಅನುಭವಿಸುತ್ತಾ ನಲುಗುತ್ತಿವೆ ಎಂದು ಹೇಳಿ​ದರು.

ಕ್ವಾರಂಟೈನ್‌ನಲ್ಲಿ ಇರುವವರಿಗೆ ಚಿಕನ್‌ ಊಟ..!

ಕನಿಷ್ಠ ಪಕ್ಷ ಮಕ್ಕಳಿಗೆ ಶಿಕ್ಷಣ ಕೊಟ್ಟ ಶಿಕ್ಷಕರಿಗೆ, ಅದಕ್ಕೆ ನೆರವಾದ ಸಂಸ್ಥೆಗೆ ಸಹಕಾರ ನೀಡುವ ಭಾವದಲ್ಲಿ, ತಮ್ಮ ಜವಾಬ್ದಾರಿ ಅರಿತು ತಾವು ನೀಡಬೇಕಾಗಿರುವ ಶುಲ್ಕವನ್ನು ಕಾಲಕಾಲಕ್ಕೆ ಪೋಷಕರು ಕಟ್ಟಿದ್ದರೆ ಸ್ವಲ್ಪವಾದರೂ ಕಷ್ಟಕಡಿಮೆಯಾಗುತ್ತಿತ್ತು. ಪ್ರಸ್ತುತ ಸಂದರ್ಭದಲ್ಲಿ ಶುಲ್ಕ ಪಾವತಿ ಮಾಡುವ ಸಾಮರ್ಥ್ಯವಿರುವ ಪೋಷಕರೂ ಪಾವತಿಸಲು ಮುಂದೆ ಬರುವ ಲಕ್ಷಣವೇ ಕಾಣುತ್ತಿಲ್ಲ. ಇದರಿಂದಾಗಿ ಆಡಳಿತ ಸಂಸ್ಥೆಯವರಿಗೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಈ ಕೋವಿಡ್‌ -19 ರ ಸಂಕಷ್ಟದ ಸಮಯದಲ್ಲಿ ವೇತನವನ್ನೂ ನೀಡಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿ​ದ​ರು.

ಸಂಸ್ಥೆಯಲ್ಲಿ ಹಣವಿಲ್ಲ. ಸಾಲ ಸಿಗುವುದಿಲ್ಲ. ಏನು ಮಾಡುವುದು ಎಂಬುದು ಎಲ್ಲರಿಗೂ ಪ್ರಶ್ನಾರ್ಥಕ ಚಿಹ್ನೆಯಾಗಿದೆ. ಆದ್ದರಿಂದ ದಯಮಾಡಿ ಆರ್‌ಟಿಇ ಹಣವನ್ನು ಅತಿ ಶೀಘ್ರದಲ್ಲಿ ಬಿಡುಗಡೆ ಮಾಡಿಸಿಕೊಡುವ ಮೂಲಕ ಸಣ್ಣ ಪ್ರಮಾಣದ ಸಹಾಯ ಮಾಡುವುದರ ಜೊತೆಗೆ, ಅನುದಾನರಹಿತ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೂ ಪೋತ್ಸಾಹಕ ರೂಪದಲ್ಲಿ ಪರಿಹಾರಧನದ ಪ್ಯಾಕೇಜ್‌ ನೀಡುವುದರ ಮೂಲಕ ಜೀವನದಾನ ನೀಡಬೇಕಾಗಿ ಮನವಿ ಮಾಡುವುದಾಗಿ ತಮ್ಮ ಅಳಲು ತೋಡಿಕೊಂಡರು.

ಖಾಸಗಿ ಸಂಸ್ಥೆಗಳು ತಾವು ಪಡೆಯುವ ಶುಲ್ಕದಲ್ಲಿ ಸರಕಾರ ಚಿಂತನೆ ನಡೆಸಿರುವ 6 ನೇ ವೇತನ ವಿನಂತಿಸುತ್ತೇವೆ. ಆಯೋಗದ ವೇತನ ನೀಡುವುದು ಕಷ್ಟ ಸಾಧ್ಯ. ಇದನ್ನೂ ಪುನರ್ವಿಮರ್ಶೆ ಮಾಡಬೇಕಾಗಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಬಿ.ಈ. ಶಿವರಾಮೇಗೌಡ, ಕಾರ್ಯದರ್ಶಿ ಬಿ.ಕೆ. ಗಂಗಾಧರ್‌ ಇತರರು ಇದ್ದ​ರು.
 

click me!