ಕೊರೋನಾ ನಡುವೆ ಮಂಡ್ಯದಲ್ಲಿ ಜೋರಾಯ್ತು ರಾಜಕೀಯ..! ಸಚಿವ- ಶಾಸಕರ ಜಗಳ ಸಿಎಂ ಅಂಗಳಕ್ಕೆ

By Suvarna News  |  First Published May 28, 2020, 8:59 AM IST

ಮಂಡ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಿದ್ದು, ಈ ನಡುವೆಯೇ ಸಚಿವ ಕೆ. ಸಿ. ನಾರಾಯಣ ಗೌಡ ಹಾಗೂ ಶಾಸಕ ಸುರೇಶ್ ಗೌಡ ನಡುವಿನ ಜಗಳ ಜೋರಾಗಿದೆ. ಇಬ್ಬರ ನಡುವೆ ರಾಜಕೀಯ ಜಗಳ ತಾರಕಕ್ಕೇರಿದ್ದು, ಇದೀಗ ಈ ಭಿನ್ನಾಭಿಪ್ರಾಯ ಸಿಎಂ ಅಂಗಳಕ್ಕೆ ತಲುಪಿದೆ.


ಮಂಡ್ಯ(ಮೇ 28): ಮಂಡ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಿದ್ದು, ಈ ನಡುವೆಯೇ ಸಚಿವ ಕೆ. ಸಿ. ನಾರಾಯಣ ಗೌಡ ಹಾಗೂ ಶಾಸಕ ಸುರೇಶ್ ಗೌಡ ನಡುವಿನ ಜಗಳ ಜೋರಾಗಿದೆ. ಇಬ್ಬರ ನಡುವೆ ರಾಜಕೀಯ ಜಗಳ ತಾರಕಕ್ಕೇರಿದ್ದು, ಇದೀಗ ಈ ಭಿನ್ನಾಭಿಪ್ರಾಯ ಸಿಎಂ ಅಂಗಳಕ್ಕೆ ತಲುಪಿದೆ.

ಮಂಡ್ಯದಲ್ಲಿ ಕೊರೊನಾ ನಡುವೆ ರಾಜಕೀಯ ಜಗಳ ಜೋರಾಗಿದ್ದು, ಸಚಿವ ನಾರಾಯಣಗೌಡ ಹಾಗೂ ಶಾಸಕರ ಭಿನ್ನಾಭಿಪ್ರಾಯ ಬಗೆಹರಿದಿಲ್ಲ. 3 ಗಂಟೆಯ ಸುದೀರ್ಘ ಸಭೆ ಬಳಿಕವೂ ಉಭಯ ನಾಯಕರು ಒಮ್ಮತಕ್ಕೆ ಬಂದಿಲ್ಲ.

Tap to resize

Latest Videos

undefined

ಕೊಪ್ಪಳ: ಕೈಗಾರಿಕಾ ಅಭಿವೃದ್ಧಿ, ಸಚಿವ ಶೆಟ್ಟರ್‌ ಜೊತೆ ಸಂಗಣ್ಣ ಚರ್ಚೆ

ಬುಧವಾರ ಸಚಿವ ಕೆ.ಸಿ.ನಾರಾಯಣಗೌಡ ನೇತೃತ್ವದಲ್ಲಿ ಸಭೆ ನಡೆದಿತ್ತು. ಕೋವಿಡ್ ಸೇರಿ ಎಲ್ಲಾ ವಿಚಾರದಲ್ಲೂ JDS ಶಾಸಕರ ನಿರ್ಲಕ್ಷ್ಯ ಆರೋಪ ಕೇಳಿ ಬಂದಿದ್ದು, ದಳಪತಿಗಳು ಅಧಿಕಾರಿಗಳು ಮತ್ತು ಸಚಿವರಿಂದ ನಿರ್ಲಕ್ಷ್ಯ ಆರೋಪ ಮಾಡಿದ್ದರು.

ಶಾಸಕರಿಗೆ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಸಚಿವರು JDS  ಶಾಸಕರನ್ನು ಸಮಾಧಾನಗೊಳಿಸಲು ಸಭೆ ಕರೆದಿದ್ದರು. ಗದ್ದಲದಿಂದ ಆರಂಭವಾದ ಜಗಳ ಗದ್ದಲದಿಂದಲೇ ಮುಗಿದಿತ್ತು.

ನಮ್ದು ಕೋಳಿ ಜಗಳ, ಮಂಡ್ಯದವ್ರಲ್ಲಾ, ಹಾಗೇ ಆಡ್ತೀವಿ : ನಾರಾಯಣ ಗೌಡ

JDS ಶಾಸಕರ ಸಹಕಾರ ಪಡೆಯುವಲ್ಲಿ ಸಚಿವ ನಾರಾಯಣಗೌಡ ವಿಫಲವಾಗಿದ್ದು, ಸಿಎಂ ಅಂಗಳಕ್ಕೆ ಸಚಿವ- ಶಾಸಕರ ಭಿನ್ನಾಭಿಪ್ರಾಯ ವಿಚಾರ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಸಲು ನಿರ್ಧಾರ ಮಾಡಲಾಗಿದೆ. ಸಚಿವ ನಾರಾಯಣಗೌಡ ಸಿಎಂ ನೇತೃತ್ವದಲ್ಲಿ ಸಭೆ ಆಯೋಜಿಸುವ ಭರವಸೆ ನೀಡಿದ್ದಾರೆ. ಸಚಿವರ ಭರವಸೆ ಬಳಿಕ JDS ಶಾಸಕರು ಶಾಂತರಾಗಿದ್ದಾರೆ.

click me!