ಕೆ.ಆರ್ .ಪೇಟೆ ಉಪಚುನಾವಣೆ ಮತದಾನ ಹತ್ತಿರವಾಗುತ್ತಿದ್ದಂತೆ ಜೆಡಿಎಸ್, ಬಿಜೆಪಿ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದು ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿದೆ. ಬಿಜೆಪಿ ಕಾರ್ಯಕರ್ತ ಕರ್ತೇನಹಳ್ಳಿ ಸುರೇಶ್ ಶೀಳನೆರೆ ಹೋಬಳಿಯ ಬೇಲದಕೆರೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ 9ರ ಸಮಯದಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದ ವೇಳೆ ಜೆಡಿಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.
ಮಂಡ್ಯ(ಡಿ.01): ಕೆ.ಆರ್ .ಪೇಟೆ ಉಪಚುನಾವಣೆ ಮತದಾನ ಹತ್ತಿರವಾಗುತ್ತಿದ್ದಂತೆ ಜೆಡಿಎಸ್, ಬಿಜೆಪಿ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದು ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿದೆ.
ಬಿಜೆಪಿ ಕಾರ್ಯಕರ್ತ ಕರ್ತೇನಹಳ್ಳಿ ಸುರೇಶ್ ಶೀಳನೆರೆ ಹೋಬಳಿಯ ಬೇಲದಕೆರೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ 9ರ ಸಮಯದಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದ ವೇಳೆ ಜೆಡಿಎಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.
ಚಾಕುನಿಂದ ಇರಿದು ಕೊಲೆ ಯತ್ನ.. ಬೆದರಿಕೆ:
ಜೆಡಿಎಸ್ ಕಾರ್ಯಕರ್ತರಾದ ಗಾಣದ ನಂಜಪ್ಪ ಸೇರಿದಂತೆ ಹಲವು ಕಾರ್ಯಕರ್ತರು ಅಡ್ಡಗಟ್ಟಿಕಬ್ಬಿಣ್ಣದ ರಾಡಿನಿಂದ ಹೊಡೆದು, ಚಾಕು ಇರಿದು ಕೊಲೆ ಪ್ರಯತ್ನ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಗ್ರಾಮಕ್ಕೆ ಜೆಡಿಎಸ್ ಹೊರತು ಪಡಿಸಿ ಬಿಜೆಪಿಯವರು ಬರವಂತಿಲ್ಲ. ಬಂದರೇ ಅವರನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದರು. ನಮ್ಮ ಕೂಗಾಟದಿಂದ ಸ್ಥಳಕ್ಕೆ ಬಂದ ಜನರು ನಮ್ಮನ್ನು ಬಿಡಿಸಿಕಳಿಸಿದ್ದಾರೆ ಎಂದು ಆರೋಪಿಸಿ ಸುರೇಶ್ ಪಟ್ಟಣ ಠಾಣೆಗೆ ದೂರು ನೀಡಿದ್ದಾರೆ. ನಂತರ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚುವರಿ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಬಂದಿದ್ದಾರೆ.
ಸುರೇಶ್ ಅಸಭ್ಯ ವರ್ತನೆ ಆರೋಪ:
ಗ್ರಾಮದ ಮಹಿಳೆಯೊಬ್ಬರು ಬಿಜೆಪಿ ಕಾರ್ಯಕರ್ತ ಕರ್ತೆನಹಳ್ಳಿ ಸುರೇಶ್ ವಿರುದ್ಧ ಪ್ರತಿ ದೂರು ನೀಡಿದ್ದು, ರಾತ್ರಿ 9ಗಂಟೆಯಲ್ಲಿ ಕರ್ತೆನಹಳ್ಳಿ ಸುರೇಶ್ ಮತ್ತು ಹಲವರು ಮನೆ ಕದ ತಟ್ಟಿತೆಗೆಯುವಂತೆ ಒತ್ತಾಯಿಸಿದರು. ತೆಗೆದಾಗ ನಾರಾಯಣಗೌಡರು ಚುನಾವಣೆಗೆ ಸೀರೆ ಮತ್ತು ಸ್ತ್ರೀ ಶಕ್ತಿ ಸಂಘಗಳಿಗೆ ಹಣ ಕೊಡಲು ಹೇಳಿದ್ದಾರೆ. ತಂದಿದ್ದೀವಿ, ತಗೋಳಿ ಎಂದು ಹೇಳಿದ್ದಾರೆ.
ಮೈಸೂರು: ತುಕ್ಕು ಹಿಡಿಯುತ್ತಿವೆ ಸ್ವಚ್ಛತಾ ಯಂತ್ರಗಳು!
ನಾನು ಬೇಡ ಅಂದಿದಕ್ಕೆ ಸೀರೆ ಬೇಡ ಅಂದರೆ ದುಡ್ಡನಾದರೂ ತೆಗೆದುಕೊಳ್ಳಿ ಎಂದು ಪೀಡಿಸಿದರು. ಇದಕ್ಕೆ ಒಪ್ಪದಿದ್ದಾಗ ನನ್ನ ಮೈಕೈ ಮುಟ್ಟಿ, ಸೀರೆ ಉಡಿಸುತ್ತೇನೆ ಎಂದು ಒತ್ತಾಯಿಸಿ ಮಾನಭಂಗಕ್ಕೆ ಯತ್ನಿಸಿದರು. ನಾನು ಕೂಗಿಕೊಂಡಾಗ ನನ್ನ ಕತ್ತಿನಲ್ಲಿದ್ದ 60 ಗ್ರಾಂ ಮಾಂಗಲ್ಯ, ಕೈನಲ್ಲಿದ್ದ 40 ಗ್ರಾಂ ಬಳೆಯ ಚಿನ್ನವನ್ನು ಕಿತ್ತುಕೊಂಡಿದ್ದಾರೆ. ನಂತರ ನನ್ನ ಚೀರಾಟ ಕೇಳಿ ಗ್ರಾಮದ ನಂಜಪ್ಪ ಮತ್ತು ಹಲವರು ಬಂದರು. ಘಟನೆ ವೇಳೆ ನನ್ನ ಪತಿ ಇರಲಿಲ್ಲ. ಪಟ್ಟಣದಿಂದ ತಡವಾಗಿ ಮನೆಗೆ ಆಗಮಿಸಿದರು. ನಂತರ ಪಟ್ಟಣದ ಠಾಣೆಗೆ ಬಂದು ದೂರು ನೀಡಿದ್ದೇವೆ ಎಂದು ಹೇಳಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಘಟನೆ ಕುರಿತು ಪ್ರತ್ಯೇಕ ಪ್ರಕರಣ ದಾಖಲು ಮಾಡಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ನಂತರಗ್ರಾಮದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಅತ್ಯಾಚಾರಿಗಳಿಗೆ ಮರಣದಂಡನೆ ಶಿಕ್ಷೆ ಕೊಡಿ: ಎಬಿವಿಪಿ ಒತ್ತಾಯ