ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡು ಬಂದಿರುವ ಪೌರಕಾರ್ಮಿಕರಿಗೆ ನೆರವಾಗಬಲ್ಲ ಯಂತ್ರಗಳು ಇದೀಗ ಪಾಲಿಕೆಯ ನಿರ್ಲಕ್ಷ್ಯದಿಂದ ತುಕ್ಕು ಹಿಡಿಯತೊಡಗಿವೆ. ಪಾಲಿಕೆಯ ಅನುದಾನದಲ್ಲಿ ಲಕ್ಷಾಂತರ ರುಪಾಯಿ ಖರ್ಚು ಮಾಡಿ ತಂದಿರುವ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರಗಳು ಈಗ ಶಕ್ತಿ ಕಳೆದುಕೊಂಡು ತುಕ್ಕು ಹಿಡಿಯುವ ಸ್ಥಿತಿಗೆ ಬಂದಿವೆ.
ಮೈಸೂರು(ಡಿ.01): ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡು ಬಂದಿರುವ ಪೌರಕಾರ್ಮಿಕರಿಗೆ ನೆರವಾಗಬಲ್ಲ ಯಂತ್ರಗಳು ಇದೀಗ ಪಾಲಿಕೆಯ ನಿರ್ಲಕ್ಷ್ಯದಿಂದ ತುಕ್ಕು ಹಿಡಿಯತೊಡಗಿವೆ.
ಪಾಲಿಕೆಯ ಅನುದಾನದಲ್ಲಿ ಲಕ್ಷಾಂತರ ರುಪಾಯಿ ಖರ್ಚು ಮಾಡಿ ತಂದಿರುವ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರಗಳು ಈಗ ಶಕ್ತಿ ಕಳೆದುಕೊಂಡು ತುಕ್ಕು ಹಿಡಿಯುವ ಸ್ಥಿತಿಗೆ ಬಂದಿವೆ. 2010ರಲ್ಲಿ ಪುಣೆಯಿಂದ ತರಿಸಿರುವ ಕಾಮ್ ಅವಿಡ ಕಂಪನಿ ತಯಾರಿಸಿರುವ ಚಾಸಿಸ್ ಮೌಂಟೆಡ್ ಸ್ವಯಂ ಚಾಲಿತವಾಗಿ ಧೂಳು ಮತ್ತು ಕಸವನ್ನು ಸ್ವಚ್ಛ ಮಾಡುವ ಯಂತ್ರ ಸರಿಯಾದ ನಿರ್ವಹಣೆಯಿಲ್ಲದ ಸ್ಥಗಿತವಾಗಿವೆ. ಅದೇ ರೀತಿ ಆರೇಳು ತಿಂಗಳುಗಳ ಹಿಂದೆ 21 ಲಕ್ಷ ರುಪಾಯಿ ವ್ಯಯ ಮಾಡಿ ನಗರದಲ್ಲಿನ ಮರಗಳ ರೆಂಬೆ ಕೊಂಬೆ ಕತ್ತರಿಸಲು ಖರೀದಿಸಿದ್ದ ಶಕ್ತಿ ಮಾನ್ ಯಂತ್ರ ಕೂಡ ನಿಷ್ಕ್ರಿಯವಾಗಿದೆ.
ಅತ್ಯಾಚಾರಿಗಳಿಗೆ ಮರಣದಂಡನೆ ಶಿಕ್ಷೆ ಕೊಡಿ: ಎಬಿವಿಪಿ ಒತ್ತಾಯ
ಶಕ್ತಿ ಮಾನ್ ಶಕ್ತಿ ಕಳೆದುಕೊಂಡ ಪರಿಣಾಮ 2 ತಿಂಗಳಿಂದ ಡಾ.ರಾಜ್‌ಕುಮಾರ್ ಉದ್ಯಾನವನದಲ್ಲಿ ಅನಾಥವಾಗಿ ಬಿದ್ದಿದೆ. ಈ ಬಗ್ಗೆ ಪಾಲಿಕೆಯ ಅಧಿಕಾರಿಗಳನ್ನು ಕೇಳಿದರೆ ಇದು ನಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಈ ಶಕ್ತಿ ಮಾನ್ ಯಂತ್ರ ಹೀಗೆ ಅನಾಥವಾಗಿ ನಿಂತಿದೆ ಎಂಬ ಪ್ರಶ್ನೆಗೆ ತೋಟಗಾರಿಕಾ ಇಲಾಖೆ ಅಧಿಕಾರಿ ಪುನೀತ್ ಅದು ಸರಿಯಾಗಿದೆ. ದಸರಾ ಸಂದರ್ಭದಲ್ಲಿ ಮರ ಕತ್ತರಿಸಲು ತೆಗೆದುಕೊಂಡು ಹೋಗಿದ್ದೆವು. ಅದಕ್ಕೆ ಅಲ್ಲೇ ಇದೆ ಎಂದು ಹಾರಿಕೆಯ ಉತ್ತರ ನೀಡುತ್ತಾರೆ.
'ನಿಮ್ಮಪ್ಪ ಅಕ್ಕಿ ಕೊಟ್ಟಾರಾ, ಮರೆತ್ರೆ ಭಗವಂತ ಮೆಚ್ತಾನಾ'..!
ಹಾಗಾದರೆ, ಈ ಯಂತ್ರ ಉದ್ಯಾನವನದಲ್ಲಿ ನಿಂತಿರುವುದು ಯಾಕೆ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಟೌನ್‌ಹಾಲ್ ಪಕ್ಕದಲ್ಲಿ ರಸ್ತೆಯಲ್ಲಿರುವ ಧೂಳು ಮತ್ತು ಕಸ ಗುಡಿಸುವ ಯಂತ್ರಕ್ಕೆ ಹೆಚ್ಚು ಡೀಸೆಲ್ ಬೇಕು. ಅದಕ್ಕೆ ಹೆಚ್ಚು ಹಣ ಖರ್ಚು ಆಗುತ್ತದೆ ಎಂಬ ಕಾರಣಕ್ಕೆ ಒಂದು ವರ್ಷದಿಂದ ಉಪಯೋಗಕ್ಕೆ ಬಾರದೆ ತುಕ್ಕು ಹಿಡಿದು ನಿಂತಿದೆ ಎಂಬ ಮಾಹಿತಿಯನ್ನು ಹೆಸರೇಳಲಿಚ್ಛಿಸದ ಅಧಿಕಾರಿ ತಿಳಿಸಿದ್ದಾರೆ.
ಲಕ್ಷಾಂತರ ರುಪಾಯಿ ಖರ್ಚು ಮಾಡಿ ಪೌರ ಕಾರ್ಮಿಕರ ಶ್ರಮವನ್ನು ಕಡಿಮೆ ಮಾಡಲು. ಅವರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಖರೀದಿಸುವ ಪಾಲಿಕೆ ಇಂತಹ ಅತ್ಯಾಧುನಿಕ ಯಂತ್ರಗಳು ಸರಿಯಾದ ರೀತಿಯಲ್ಲಿ ಉಪಯೋಗ ಪಡೆದುಕೊಳ್ಳದೇ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದೆ ಬೇಜವಾಬ್ದಾರಿ ಉತ್ತರ ನೀಡುತ್ತಿರುವುದು ಪಾಲಿಕೆಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಮತ್ತು ವಿಪರ್ಯಾಸ.
ಬಾಗಲಕೋಟೆ ಮಹಿಳೆ ಮೇಲೆ ಉತ್ತರಾಖಂಡದಲ್ಲಿ ಅತ್ಯಾಚಾರ!
ನಿಷ್ಟ್ರಯೋಜಕವಾಗಿರುವ ಕಾಂಪ್ಯಾಕ್ಟ್‌ಗಳನ್ನು ರಿಪೇರಿ ಮಾಡಲು ಬೆಂಗಳೂರಿಗೆ ಕಳುಹಿಸಲಾಗಿದೆ. ಇನ್ನೆರೆಡು ವಾರದಲ್ಲಿ ಬರಲಿವೆ. ಚಾಸಿಸ್ ಮೌಂಟೆಡ್ ಮಿಷನ್ ಕೆಟ್ಟು ನಿಂತಿದೆ. ರಸ್ತೆ ಧೂಳು ಕಸ ಗುಡಿಸುವ ಯಂತ್ರ, ಶಕ್ತಿ ಮಾನ್ ಯಂತ್ರದ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಕೂಡಲೇ ಗಮನ ಹರಿಸಿ. ಏನಾಗಿದೆ ಎಂಬುದನ್ನು ಮಾಹಿತಿ ಪಡೆದು ಸರಿಪಡಿಸುತ್ತೇವೆ ಎಂದು ಪಾಲಿಕೆ ಆಯುಕ್ತರು ಗುರುದತ್ತ ಹೆಗಡೆ ಹೇಳಿದ್ದಾರೆ.
ರಾಜ್ಯದ 7 ಗಡಿ ಜಿಲ್ಲೆಗಳಲ್ಲಿ ಏಡ್ಸ್ ಪ್ರಕರಣ ಹೆಚ್ಚಳ