
ಬೆಂಗಳೂರು: ಪಾಗಲ್ ಪ್ರೇಮಿಯ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ನಡೆದಿದೆ. ಮೃತ ಯುವತಿಯನ್ನು 22 ವರ್ಷದ ವಾಣಿ ಎಂದು ಗುರುತಿಸಲಾಗಿದೆ. ಮೃತ ಯುವತಿ ಕೆಲಸ ಹುಡುಕಿಕೊಂಡು ಒಂದು ವರ್ಷದ ಹಿಂದೆ ಬೆಂಗಳೂರಿಗೆ ಆಗಮಿಸಿದ್ದಳು, ಇಲ್ಲಿಯೇ ಚಿನ್ನದ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು.
ಮೂಲತಃ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಬೆಳಮಕ್ಕಿ ಮೂಲದ ವಾಣಿ, ನಿನ್ನೆ ಎಚ್ಎಸ್ಆರ್ ಲೇಔಟ್ ನಲ್ಲಿರುವ ಆಗರ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಯುವತಿಗೆ ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ಅಭಿಷೇಕ್ ಎಂಬಾತನ ಕಿರುಕುಳದಿಂದಲೇ ಯುವತಿ ಸಾವಿಗೆ ಶರಣಾಗಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ.
ಕಾಲೇಜ್ ದಿನಗಳಲ್ಲಿ ಒಟ್ಟಿಗೆ ಓದುತ್ತಿದ್ದ ಅಭಿಷೇಕ್ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಯುವತಿ ಸಾವಿಗೂ ಮುನ್ನ ಡೆತ್‌ನೋಟ್ ಬರೆದಿಟ್ಟು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆರೋಪಿ ಯುವಕ, ವಾಟ್ಸಾಪ್‌ನಲ್ಲಿ ವಿಡಿಯೋ, ಫೋಟೋಸ್ ಕಳುಹಿಸಿ ಬ್ಲಾಕ್ಮೇಲ್ ಮಾಡುತ್ತಿದ್ದನಂತೆ. ಕರೆದಾಗ ಎಲ್ಲಾ ರೂಮಿಗೆ ಬರಬೇಕು ಎಂದು ಮೆಸೇಜ್ ಮಾಡುತ್ತಿದ್ದನಂತೆ. ಅಲ್ಲದೇ ಕಳೆದ ಒಂದು ವರ್ಷದಿಂದ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದನಂತೆ. ಇದರಿಂದ ನೊಂದ ಯುವತಿ, ಸಾರಿ ಪಪ್ಪ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಸಾವನ್ನಪ್ಪಿದ್ದಾಳೆ. ಘಟನೆ ಸಂಬಂಧ ಎಚ್ಎಸ್ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು, ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ವಾಣಿ ಬರೆದಿದ್ದಾಳೆ ಎನ್ನುವ ಡೆತ್‌ನೋಟ್‌ನಲ್ಲಿ, 'ನನ್ನ ಸಾವಿಗೆ ಆಳೂರು ಸ್ವಾಮಿ ಮಗ ಅಭಿಷೇಕ್ ಎ.ಎಸ್ ಕಾರಣ. ನನಗೆ ವಿಡಿಯೋ, ಫೋಟೋ ಸೆಂಡ್ ಮಾಡಿ ಕಾಲ್ ಮೆಸೇಜ್ ಮಾಡಿ ಹಿಂಸೆ ಮಾಡುತ್ತಾ ಇರುತ್ತಾನೆ. ಆದರೆ ಈ ವಿಷಯ ಬೇರೆ, ಅವರ ಜೊತೆ ಹೇಳಿಕೊಳ್ಳಲು ಆಗದೆ ಒಬ್ಬಳೇ ತುಂಬಾ ಹಿಂಸೆ ಅನುಭವಿಸಿರುತ್ತೇನೆ ನನಗೆ. ನನ್ನ ಫ್ಯಾಮಿಲಿ ಎಂದರೆ ಜೀವ, ಅವರ ಮರ್ಯಾದೆ ಹೋಗಬಾರದು ಅಂತ ಈ ನಿರ್ಧಾರ ಮಾಡುತ್ತೇನೆ. ನನ್ನ ಸಾವಿಗೆ ಅಭಿಷೇಕ್ ಎ.ಎಸ್. ಕಾರಣ. ಬ್ಯಾಕೋಡು ಹಾರಿಗೆ ಹತ್ತಿರ ಇರುವ ಆಳೂರು ಅವರ ಅಪ್ಪನ ಹೆಸರು ಸ್ವಾಮಿ ನನ್ನ ಜೊತೆಗೆ ಕಾಲೇಜಿನಲ್ಲಿ ಒಟ್ಟಿಗೆ ಓದಿರುವುದು. ನನ್ನ ಸಾವಿಗೆ ಅಭಿಷೇಕ್ ಕಾರಣ, ಅವನಿಗೆ ಶಿಕ್ಷೆ ಆಗಬೇಕು ಇದೇ ನನ್ನ ಕೊನೆ ಆಸೆ. ಫೋಟೋ-ವಿಡಿಯೋ ಇಟ್ಟುಕೊಂಡು ನನಗೆ ಕಾಲ್ ಮೆಸೇಜ್ ಮಾಡಿ ಯಾವಾಗಲೂ ತುಂಬಾ ಭಯಪಡಿಸುತ್ತಾನೆ. ನನಗೆ ರೂಮ್ಗೆ ಬಾ, ಇಲ್ಲ ಅಂದರೆ ನಿಮ್ಮ ಮನೆ ಮರ್ಯಾದೆ ಹಾಳು ಮಾಡ್ತೀನಿ ಎಂದು ಹೇಳುತ್ತಾನೆ. ಸಾರಿ ಪಪ್ಪಾ, ನನ್ನಿಂದ ನಿನ್ನ ಮರ್ಯಾದೆ ಹೋಗಬಾರದು. ನನ್ನ ನೆನಪು ಮಾಡಿಕೊಳ್ಳಬೇಡಿ. ನೀವು ಎಲ್ಲರೂ ಚೆನ್ನಾಗಿ ಇರಿ. ಅಷ್ಟೇ. ಮನೆಯಲ್ಲಿ ಎಲ್ಲರನ್ನೂ ಚೆನ್ನಾಗಿ ನೋಡಿಕೋ. ಯಾವತ್ತೂ ನನ್ನ ಮಗಳು ಇತರ ಮಾಡಿಕೊಂಡಳು ಅಂತ ಬೇಜಾರು ಆಗಬೇಡ. ಅಕ್ಕನ ಚೆನ್ನಾಗಿ ನೋಡಿಕೋ. ಅಜ್ಜ ಅಜ್ಜಿ ಅಮ್ಮ ಎಲ್ಲರಲ್ಲೂ ಚೆನ್ನಾಗಿ ನೋಡಿಕೋ. ನನ್ನಿಂದ ನನ್ನ ಫ್ರೆಂಡ್ಸ್‌ಗೆ ಬೇಜಾರು ಆಗಿದ್ದರೆ ಸಾರಿ. ನನ್ನ ಪರಿಸ್ಥಿತಿಯನ್ನ ಹೇಳಲಾಗದೆ ನಾನು ಸತ್ತು ಹೋಗಬೇಕು ಎಂದು ನಿರ್ಧಾರ ಮಾಡಿದ್ದೀನಿ. ನಾನು ಸತ್ತ ಮೇಲೆ ಅಭಿಷೇಕ್ ಸುಳ್ಳು ಹೇಳಿ ನಾಟಕ ಮಾಡುತ್ತಾನೆ. ಆದರೆ ಅವನಿಗೆ ಶಿಕ್ಷೆ ಆಗಬೇಕು ಹಾಗೆ ಮಾಡಿ. ಒಂದು ವರ್ಷದಿಂದ ಹಿಂಸೆ ಮಾಡುತ್ತಾ ಇದ್ದಾನೆ. ಆದರೆ ಇಷ್ಟು ದಿನ ನಾನು ಧೈರ್ಯವಾಗಿ ಇದ್ದೆ. ಆದರೆ ಅವನು ಇವಾಗ ನನಗೆ ತುಂಬಾ ಹಿಂಸೆ ಮಾಡುತ್ತಾ ಇದ್ದಾನೆ. ಅವನ ಬಗ್ಗೆ ನಿಮ್ಮ ಜೊತೆ ಹೇಳೋಕೆ ಆಗದೆ ಈ ನಿರ್ಧಾರ ಮಾಡಿದೆ. ಆಳೂರು ಸ್ವಾಮಿ ಮಗ ಅಭಿಷೇಕ್‌ಗೆ ಶಿಕ್ಷೆ ಆಗಬೇಕು ಅವನಿಗೆ ಶಿಕ್ಷೆ ಕೊಡಿಸಿ ನನ್ನ ಸಾವಿಗೆ ಅವನೇ ಕಾರಣ ಅಪ್ಪಾಜಿ. ಬೇಜಾರು ಆಗಬೇಡಿ. ಜೊತೆಗೆ ಇರದ ಜೀವ ಯಾವತ್ತೂ ಜೀವಂತ' ಎಂದು ಬರೆದಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.