ಸಮಾನ್ಯ ಉದ್ಯಾನವನಗಳು ಎಲ್ಲ ಕಡೆಯಲ್ಲೂ ಇರುತ್ತವೆ. ಅವು ಸಾಮಾನ್ಯ. ಮೈಸೂರಿನಲ್ಲೀಗ ಸಾಹಸ ಕ್ರೀಡೆಗಳ ಉದ್ಯಾನವನ ನಿರ್ಮಿಸಲಾಗಿದೆ. ಈ ಉದ್ಯಾನವನದಲ್ಲಿ ಮಕ್ಕಳು, ಯುವಕರು ಸುಮಾರು 30 ಬಗೆಯ ಸಾಹಸ ಚಟುವಟಿಕೆಗಳು, 25 ಅಡಿ ಎತ್ತರದ ಜಿಪ್‌ಲೈನ್, ಕೆಸರು ಗದ್ದೆ ಓಟ, ಮಳೆ ನೃತ್ಯ ಮುಂತಾದ ಆಟಗಳನ್ನು ಅಳವಡಿಸಲಾಗಿದೆ.
ಮೈಸೂರು(ಸೆ.28): ಪ್ರೊಫಿ ಸಲ್ಯೂಷನ್ಸ್ ಕಂಪನಿಯ ಸಿಎಸ್‌ಆರ್ ನಿಧಿಯ ಸಹಾಯದಿಂದ ಪೂರ್ಣ ಚೇತನ ಪಬ್ಲಿಕ್ ಶಾಲಾ ಆವರಣದ ಸುಮಾರು ಎರಡು ಎಕರೆ ಜಾಗದಲ್ಲಿ ಮಕ್ಕಳ, ಯುವಕರ ಸಾಹಸ ಕ್ರೀಡಾ ಉದ್ಯಾನವವನ್ನು ಅಭಿವೃದ್ಧಿಪಡಿಸಿದ್ದು, ಇದು ಪ್ರಥಮ ಸಾಹಸ ಕ್ರೀಡೆಗಳ ಉದ್ಯಾನವವಾಗಿದೆ.
ಈ ಉದ್ಯಾನವನದಲ್ಲಿ ಮಕ್ಕಳು, ಯುವಕರು ಸುಮಾರು 30 ಬಗೆಯ ಸಾಹಸ ಚಟುವಟಿಕೆಗಳು, 25 ಅಡಿ ಎತ್ತರದ ಜಿಪ್‌ಲೈನ್, ಕೆಸರು ಗದ್ದೆ ಓಟ, ಮಳೆ ನೃತ್ಯ ಮುಂತಾದ ಆಟಗಳನ್ನು ಅಳವಡಿಸಲಾಗಿದೆ. ಉದ್ಯಾನವನಕ್ಕೆ ಭೇಟಿ ನೀಡುತ್ತಿರುವ ಮಕ್ಕಳು, ಯುವಕರು ವಿಭಿನ್ನ ಅನುಭವನ್ನು ಹೊಂದಿ ಆನಂದಿಸುತ್ತಿದ್ದಾರೆ.
undefined
ಮಂಡ್ಯ: ದಸರಾ ಪೆಂಡಾಲ್ ಹಾಕೋದಿಕ್ಕೂ JDS, BJP ಜಗಳ
ದಿನನಿತ್ಯ ಈ ಕಾರ್ಯಕ್ರಮವು ಎರಡು ಅವಧಿ ನಡೆಯುತ್ತದೆ- ಸೆ. 29 ರಿಂದ ಅ. 6ರವರೆಗೆ ಬೆಳಗ್ಗೆ 9 ರಿಂದ ಮಧ್ಯಾಹ್ನ 12ರವರೆಗೆ ಮಧ್ಯಾಹ್ನ 2 ರಿಂದ 5ರವರೆಗೆ ಪ್ರತಿ
ಅವಧಿಯಲ್ಲಿ 35 ರಿಂದ 40 ಮಕ್ಕಳು, ಯುವಕರಿಗೆ ಅವಕಾಶವಿರುತ್ತದೆ. ಮಾಹಿತಿಗಾಗಿ ಮೊ. 9901010990 ಸಂಪರ್ಕಿಸಬಹುದು.
ಮೇಲಾಧಿಕಾರಿ ಲಂಚಕ್ಕೆ ಬೇಡಿಕೆ: ಬಸ್ ಚಾಲಕ ಆತ್ಮಹತ್ಯೆಗೆ ಯತ್ನ