ಜನಸಂಖ್ಯೆ ಹೆಚ್ಚಿಸುವ ಲವ್ ಜಿಹಾದ್‌ಗೆ ಒಪ್ಪದ ನೇಹಾಳನ್ನು ಫಯಾಜ್ ಕೊಂದಿದ್ದಾನೆ; ಪ್ರಮೋದ್ ಮುತಾಲಿಕ್ ಆರೋಪ

By Sathish Kumar KH  |  First Published Apr 22, 2024, 5:10 PM IST

ಜನಸಂಖ್ಯೆ ಹೆಚ್ಚಿಸುವ ಲವ್ ಜಿಹಾದ್‌ಗೆ ಒಪ್ಪದಿದ್ದಕ್ಕೆ ನೇಹಾಳನ್ನು ಕೊಲೆ ಮಾಡಲಾಗಿದೆ. ಹಿಂದೂ ಹುಡುಗಿಯರು ಎಚ್ಚರಿಕೆಯಿಂದ ಇರಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.


ವಿಜಯಪುರ (ಏ.22): ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣ ಪ್ರೀತಿ, ಪ್ರೇಮ‌ದ ಹಿನ್ನೆಲೆಯನ್ನು ಹೊಂದಿಲ್ಲ. ಇದು ಪಕ್ಕಾ ಲವ್ ಜಿಹಾದ್. ಜನಸಂಖ್ಯೆ ಹೆಚ್ಚಿಗೆ ಮಾಡುವ ಲವ್ ಜಿಹಾದ್ ಇದಾಗಿದೆ. ಇದಕ್ಕೆ ಒಪ್ಪದಿದ್ದಕ್ಕೆ ನೇಹಾಳನ್ನು ಕೊಲೆ ಮಾಡಲಾಗಿದೆ. ಹಿಂದೂ ಹುಡುಗಿಯರು ಎಚ್ಚರಿಕೆಯಿಂದ ಇರಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣ ಪ್ರೀತಿ, ಪ್ರೇಮಕ್ಕೆ ಸಂಬಂಧಿಸಿಲ್ಲ. ಇದು ಜನಸಂಖ್ಯೆ ಹೆಚ್ಚಿಸುವ ಲವ್ ಜಿಹಾದ್ ಆಗಿದೆ. ಇದಕ್ಕೆ ಒಪ್ಪದ ನೇಹಾಳನ್ನು ಕೊಲೆ ಮಾಡಲಾಗಿದೆ. ಈಗಾಗಲೇ ಕೇರಳದಲ್ಲಿ ಕಳೆದ 2 ವರ್ಷದಲ್ಲಿ 3 ಸಾವಿರ ಹಿಂದೂ ಯುವತಿಯರ ಮತಾಂತರ ಮಾಡಲಾಗಿದೆ. ಪ್ರೀತಿ ಬೇಡ ಎಂದ್ಮೇಲೆ ನೇಹಾ ಹತ್ಯೆ ಮಾಡಲಾಗಿದೆ. ಅದು ಕೂಡ ನೇಹಾಳನ್ನು 14 ಬಾರಿ ಚುಚ್ಚಿ ಹತ್ಯೆ ಮಾಡಲಾಗಿದೆ. ಇದುವೇ ಇಸ್ಲಾಂ ಪ್ರಕ್ರಿಯೆ ಆಗಿದೆ. ಇದರ ಹಿಂದೆ ದೊಡ್ಡ ಜಾಲ ಇದೆ ಎಂದು ಆರೋಪಿಸಿದರು.

Tap to resize

Latest Videos

undefined

ಹುಬ್ಬಳ್ಳಿ ಕಾರ್ಪೋರೇಟರ್ ಪುತ್ರಿ ನೇಹಾ ಹಿರೇಮಠ್ ಹತ್ಯೆ ಪ್ರಕರಣ ಸಿಐಡಿಗೆ ಹಸ್ತಾಂತರ

ಧಾರವಾಡದ ಅಂಜುಮನ್‌ ಇಸ್ಲಾಂ ಸಂಸ್ಥೆಯು ಅರ್ಧ ದಿನ ಹೋರಾಟ ಮಾಡುವ ನಾಟಕ ಮಾಡಿದೆ. ಆದರೆ, ಇದು ಮೊಸಳೆ ಕಣ್ಣೀರು ಆಗಿದೆ. ಮದರಸಾಗಳಲ್ಲಿ ಇಸ್ಲಾಂನ ಭಾಗವಾಗಿ ಲವ್ ಜಿಹಾದ್ ಕಲಿಸಲಾಗುತ್ತಿದ್ದು, ಇದು ನಿಲ್ಲಬೇಕು. ಆರೋಪಿ ಫಯಾಜ್ ಕುಟುಂಬಸ್ಥರಿಗೆ ಪತ್ವಾ ಹೊರಡಿಸಬೇಕು. ಫಯಾಜ್ ಮನೆಯನ್ನು ಧ್ವಂಸ ಮಾಡಬೇಕು. ಫಯಾಜ್ ಮನೆಯನ್ನು ಸುಟ್ಟು ಹಾಕಬೇಕು. ಅದು ಆಗೋದಿಲ್ವಾ ಕೂಡಲೇ ಅವರ ಕುಟುಂಬದ ವಿರುದ್ಧ ಪತ್ವಾ ಹೊರಡಿಸಬೇಕು ಎಂದು ಆಗ್ರಹಿಸಿದರು.

ಬೆಂಗಳೂರಿನ ಡಿ.ಜೆ. ಹಳ್ಳಿ, ಕೆ.ಜೆ. ಹಳ್ಳಿ ಹಾಗೂ ಹುಬ್ಬಳ್ಳಿ ಗಲಾಟೆ ಜೊತೆಗೆ ಹಿಂದೂ ಕಾರ್ಯಕರ್ತ ಹರ್ಷ ಕೊಲೆಯಾದಾಗ ಅಂಜುಮನ್ ಸಂಸ್ಥೆ ಯಾಕೆ ಮಾತನಾಡಲಿಲ್ಲ. ಎಲ್ಲಿಯವರೆಗೆ ಕಾಂಗ್ರೆಸ್ ಇರುತ್ತದೆಯೋ, ಅಲ್ಲಿಯವರೆಗೂ ಇಸ್ಲಾಂ ಎದ್ದು ಕುಣಿಯುತ್ತದೆ. ಇದಕ್ಕೆ ಕಾಂಗ್ರೆಸ್ ಪ್ರೇರಣೆ, ಕಾಂಗ್ರೆಸ್ ಖುರ್ಚಿ ದಾಹಕ್ಕಾಗಿ ಹಿಂದೂಗಳ ಹತ್ಯೆ ಆಗ್ತಾ ಇದಾವೆ. ಕಾಂಗ್ರೆಸ್‌ನವರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಕಾಂಗ್ರೆಸ್‌ನವರು ತೊಳೆಯಲಾರದ ಪಾಪ ಮಾಡಿದ್ದಾರೆ ಎಂದು ಟೀಕೆ ಮಾಡಿದರು.

ನೇಹಾ ಹಿರೇಮಠ್ ಕೊಲೆ ಬಳಿಕ, ಅನ್ಯಕೋಮಿನ ಫಯಾಜ್‌ನಿಂದ ಹಿಂದೂ ಯುವಕ ರಾಕೇಶ್ ಕೊಲೆ?

ಮೋದಿ ಗೆಲ್ಲಿಸಿ ಭಾರತ ಉಳಿಸಿ. ನಾವು ಬಿಜೆಪಿಗೆ ಮತ ಹಾಕುತ್ತೇವೆ. ಗೆದ್ದ ನಂತರ ನಿದ್ದೆ ಮಾಡಂಗಿಲ್ಲ. ಆದ್ರೇ, ಐದು ವರ್ಷಗಳ ಕಾಲ ಕ್ರಿಯಾಶೀಲರಾಗಬೇಕು. 24 ಗಂಟೆ ಕಾಲ ಫೋನ್ ಆನ್ ಇರಬೇಕು. ಸಂಸತ್ತಿನಲ್ಲಿ ಸಮಾನ ನಾಗರಿಕ, ಜನಸಂಖ್ಯೆ ನಿಯಂತ್ರಣ, ಸಂಪೂರ್ಣ ಗೋವು ಹತ್ಯೆ ನಿಷೇಧ, ವಕ್ಫ ಬೋರ್ಡ್ ಬ್ಯಾನ್ ಮಾಡಬೇಕು. ಅತಿಕ್ರಮಣ ಮಸೀದಿ, ದೇವಸ್ಥಾನ, ಚರ್ಚ್‌ಗಳು ತೆಗದು ಹಾಕಬೇಕು. ಸರ್ಕಾರ ಶಾಲೆ, ಸರ್ಕಾರಿ ಆಸ್ಪತ್ರೆ ಅಭಿವೃದ್ಧಿ ಆಗಬೇಕು. ಖಾಸಗಿ ಶಾಲೆಗಳು ಲೂಟಿ ಹೊಡೆಯುತ್ತಿದ್ದಾರೆ. ಅದಕ್ಕಾಗಿ ಸರ್ಕಾರಿ, ಆಸ್ಪತ್ರೆ, ಶಾಲೆಯ ಅಭಿವೃದ್ಧಿ ಮುಖ್ಯ. ಹಿಂದೂ ಕಾರ್ಯಕರ್ತರ ರಕ್ಷಣೆ ಆಗಬೇಕು. ಹಿಂದೂ ಕಾರ್ಯಕರ್ತರ ಮೇಲಿನ ರೌಡಿಶೀಟರ್ ಹಾಗೂ ಗುಂಡೂ ಆ್ಯಕ್ಟ್ ಆಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

click me!