ಹುಬ್ಬಳ್ಳಿ ಕಾರ್ಪೋರೇಟರ್ ಪುತ್ರಿ ನೇಹಾ ಹಿರೇಮಠ್ ಹತ್ಯೆ ಪ್ರಕರಣ ಸಿಐಡಿಗೆ ಹಸ್ತಾಂತರ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾರ್ಪೋರೆಟರ್ ಪುತ್ರಿ ನೇಹಾ ಹಿರೇಮಠ್ ಹತ್ಯೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರದಿದ ಸಿಐಡಿಗೆ ವಹಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ತುಮಕೂರು (ಏ.22): ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾರ್ಪೋರೆಟರ್ ಪುತ್ರಿ ನೇಹಾ ಹಿರೇಮಠ್ ಹತ್ಯೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರದಿದ ಸಿಐಡಿಗೆ ವಹಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ತುಮಕೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿಐಡಿ ತಂಡ ಹುಬ್ಬಳ್ಳಿಗೆ ಹೋಗಿ ಸ್ಥಳೀಯ ಪೊಲೀಸರು ಈವರೆಗೂ ನಡೆಸಿರುವ ತನಿಖೆಯ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ. ಕೊಲೆಯ ಹಿಂದೆ ಇನ್ನು ನಾಲ್ವರು ಇದ್ದಾರೆ ಎಂದು ಯುವತಿಯ ತಂದೆ ಆರೋಪಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. 12 ದಿನದೊಳಗೆ ಪ್ರಕರಣದ ತನಿಖೆಯ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಯುವತಿಯ ತಂದೆ-ತಾಯಿಗೆ ನ್ಯಾಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೆಯಲ್ಲಿ ಜನ ಕೈಬಿಡುವ ಭಯ: ಘಟನೆ ನಡೆದ ಒಂದು ಗಂಟೆಯೊಳಗೆ ಆರೋಪಿತನನ್ನು ಬಂಧಿಸಲಾಗಿದೆ. ಬಿಜೆಪಿಯವರು ಪ್ರಕರಣಕ್ಕೆ ರಾಜಕೀಯ ಬಣ್ಣ ಬಳಿದು, ರಾಜಕೀಯಕ್ಕೆ ತಿರುಗಿಸಿದ್ದಾರೆ. ನನ್ನ ಬಗ್ಗೆ, ಮುಖ್ಯಮಂತ್ರಿಯವರ ಬಗ್ಗೆ ಕೀಳಾಗಿ, ಕಟುವಾಗಿ ಮಾತನಾಡಿದ್ದಾರೆ. ಇದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಚುನಾವಣೆಯಲ್ಲಿ ಜನ ಬಿಜೆಪಿಯವರನ್ನು ಕೈಬಿಡುತ್ತಾರೆ ಎಂಬ ಭಯದಿಂದ ಹುಬ್ಬಳ್ಳಿ ಪ್ರಕರಣವನ್ನು ರಾಜಕೀಯಗೊಳಿಸುತ್ತಿದ್ದಾರೆ. ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿನ ಬಗ್ಗೆಯೂ ಹೀಗೆ ಆರೋಪ ಮಾಡಲಾಯಿತು. ಬಳಿಕ ಸಿಬಿಐಗೆ ವಹಿಸಲಾಯಿತು. ಅವರು ತನಿಖೆ ಮಾಡಿ ಏನಂತ ವರದಿ ನೀಡಿದರು ಎಂಬುದು ಗೊತ್ತಿರುವ ವಿಚಾರ. ಹುಬ್ಬಳ್ಳಿ ಪ್ರಕರಣದ ಸತ್ಯಾಸತ್ಯತೆಯನ್ನು ಜನರ ಮುಂದೆ ಇಟ್ಟಿದ್ದೇವೆ, ಅವರು ಗಮನಿಸುತ್ತಾರೆ ಎಂದು ಹೇಳಿದರು.
ನೇಹಾ ಹಿರೇಮಠ್ ಕೊಲೆ ಬಳಿಕ, ಅನ್ಯಕೋಮಿನ ಫಯಾಜ್‌ನಿಂದ ಹಿಂದೂ ಯುವಕ ರಾಕೇಶ್ ಕೊಲೆ?
ಏಪ್ರಿಲ್ 23ರಂದು ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಚುನಾವಣಾ ಪ್ರಚಾರಕ್ಕಾಗಿ ತುಮಕೂರಿಗೆ ಬರಲಿದ್ದಾರೆ. ಯಲ್ಲಪುರದಲ್ಲಿ ಪ್ರಚಾರ ಸಭೆಯನ್ನು ಆಯೋಜಿಸಲಾಗಿದೆ. ಮಧುಗಿರಿ, ಕೊರಟಗೆರೆ, ತುಮಕೂರು ನಗರ ಮತ್ತು ಗ್ರಾಮಾಂತರ ವಿಧಾನಸಭೆ ಕ್ಷೇತ್ರಗಳ 30 ರಿಂದ 40 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಜಾತ್ಯಾತೀತ, ಮತ್ತು ಪ್ರಜಾಪ್ರಭುತ್ವ ತತ್ವಗಳಲ್ಲಿ ನಂಬಿಕೆ ಇರುವರಿಗೆ ಕರೆ ಕೊಟ್ಟಿದ್ದೆವು. ಜೆಡಿಎಸ್‌ನವರು ಬರಲಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ನಮ್ಮ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ನಾವು ಆಗ ಅವರಿಗೆ ಬೇಡವಾದವರು ಆಗಿರಲಿಲ್ಲ. ಈಗ ಅವರು ಬಿಜೆಪಿ ಜೊತೆ ಹೋಗಿರುವುದು ಅವರ ಇಚ್ಛೆ. ಅವರು ಇಂಡಿಯಾ ಒಕ್ಕೂಟದ ಜೊತೆ ಬರುತ್ತೇವೆ ಎಂದು ಹೇಳಲೇ ಇಲ್ಲ. ನಾವು ಹೇಗೆ ಒತ್ತಾಯ ಮಾಡಲು ಸಾಧ್ಯ ಎಂದರು.
ನಗರದಲ್ಲಿ ಶ್ರೀರಾಮ ನವಮಿಯಂದು ನಾನೇ ಕುದ್ದಾಗಿ ಜನರಿಗೆ ಪಾನಕ, ಮಜ್ಜಿಗೆ, ಹೆಸರುಬೇಳೆ ಹಂಚಿದ್ದೇವೆ. ಶ್ರೀರಾಮನನ್ನು ಆರಾಧಿಸುವ ರೀತಿಯೇ ಬೇರೆ. ನಾವು ಶ್ರೀರಾಮನ ಜೊತೆ ಸೀತಾ ಮಾತೆ, ಲಕ್ಷ್ಮಣ ಮತ್ತು ಹನುಮಂತ ದೇವರನ್ನು ಪೂಜಿಸಿದ್ದೇವೆ. ಬಿಜೆಪಿಯವರು ರಾಜಕೀಯ ಉದ್ದೇಶದಿಂದ ಶ್ರೀರಾಮನನ್ನು ಬಳಸಿಕೊಳ್ಳುತ್ತಿದ್ದಾರೆ. ಸರ್ಕಾರ ಶಿಕ್ಷೆ ವಿಧಿಸಲು ಹೇಗೆ ಸಾಧ್ಯ:- ಹುಬ್ಬಳ್ಳಿ ಯುವತಿ ಹತ್ಯೆ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ವೋಟ್ ಫಾರ್ ನೇಹಾ ಅಂತ ಬಿಜೆಪಿಯವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿಕೊಳ್ಳುತ್ತಿರುವುದು ಏನರ್ಥ? ಇನ್ನು ಯಾವ ಮಟ್ಟಕ್ಕೆ ಹೋಗುತ್ತೀರ? ಪ್ರಕರಣದ ತನಿಖೆಯಲ್ಲಿ ಲೋಪದೋಷಗಳಾಗಿದ್ದರೆ ಹೇಳಲಿ, ಒಪ್ಪಿಕೊಳ್ಳುತ್ತೇವೆ. ನ್ಯಾಯಾಂಗ ವ್ಯವಸ್ಥೆ ಇದೆ. ಪೊಲೀಸರು ತನಿಖೆ ಮಾಡಿ ದೋಷರೋಪಣಾ ಮಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ. ಕೋರ್ಟ್ ತಪ್ಪಿತಸ್ಥನಿಗೆ ಶಿಕ್ಷೆ ವಿಧಿಸುತ್ತದೆ. ಸರ್ಕಾರ ಹೇಗೆ ಶಿಕ್ಷೆ ಕೊಡಲು ಸಾಧ್ಯ ಎಂದು ಪ್ರಶ್ನಿಸಿದರು.
ಕರ್ನಾಟಕದ ಮಹಿಳೆಯರು ಕಿರುಗತ್ತಿ, ಕಠಾರಿ ಇಟ್ಟುಕೊಂಡು ಓಡಾಡಲು ಪರ್ಮಿಷನ್ ಕೊಡಿ: ವಿಶ್ವ ಹಿಂದೂ ಪರಿಷತ್ ಆಗ್ರಹ
ಆರ್.ಅಶೋಕ್ ಗೃಹ ಸಚಿವರಾಗಿ ಕೆಲಸ ಮಾಡಿದವರು. ಪ್ರಕರಣದ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡುವುದು ಸರಿಯಲ್ಲ. ಯಾವುದೇ ಘಟನೆ ನಡೆದ ಕೂಡಲೇ ಗೃಹ ಸಚಿವರಿಗೆ ಮಾಹಿತಿ ನೀಡುತ್ತಾರೆ. ಇದು ಆಗಿಲ್ಲ ಎಂದರೆ ನಾವೇ ವರದಿ ತರಿಸಿಕೊಳ್ಳುತ್ತೇವೆ. ಎಸ್‌ಪಿ ಕೊಟ್ಡ ವರದಿ ಆಧಾರದ ಮೇಲೆ ಹೇಳಿದ್ದೇನೆ. ಅಶೋಕ್ ಅವರಿಗೆ ಇಷ್ಟು ಗೊತ್ತಿಲ್ಲವೇ? ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಅನುಮತಿ ನೀಡಿದರೆ, ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ಚುನಾವಣೆ ನಂತರ ಪಂಚ ಗ್ಯಾರಂಟಿಗಳನ್ನು ನಿಲ್ಲಿಸಲಾಗುತ್ತದೆ. ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್‌ನವರು ವದಂತಿ ಹಬ್ಬಿಸುತ್ತಿದ್ದಾರೆ. ಯಾವುದೇ ಕಾರಣಕ್ಕು ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ. ಬಿಜೆಪಿಯವರ ಅಪಪ್ರಚಾರಗಳು ಪ್ರಾಮುಖ್ಯ ಎನಿಸುವುದಿಲ್ಲ ಎಂದರು.