Bengaluru: ಸಂಪ್‌ ಕ್ಲೀನ್‌ ಮಾಡುವಾಗ ಕರೆಂಟ್‌ ಶಾಕ್‌: ತಂದೆ-ಮಗ ದಾರುಣ ಸಾವು

By Kannadaprabha NewsFirst Published Jan 20, 2022, 5:15 AM IST
Highlights

*   ಆರ್‌.ಟಿ.ನಗರ ಸಮೀಪ ನಡೆದ ಘಟನೆ
*   ಪ್ರತಿ ತಿಂಗಳಿಗೊಮ್ಮೆ ನೀರಿನ ಸಂಪ್‌ ಕ್ಲೀನಿಂಗ್‌
*   ಈ ಸಂಬಂಧ ಆರ್‌.ಟಿ.ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು
 

ಬೆಂಗಳೂರು(ಜ.20):  ಅಪಾರ್ಟ್‌ಮೆಂಟ್‌ವೊಂದರಲ್ಲಿ ನೀರಿನ ತೊಟ್ಟಿ(ಸಂಪ್‌) ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ ವಿದ್ಯುತ್‌(Electrocution) ಪ್ರವಹಿಸಿ ಕಾವಲುಗಾರ ಹಾಗೂ ಆತನ 11 ವರ್ಷದ ಮಗ ದಾರುಣವಾಗಿ ಅಸುನೀಗಿರುವ ಘಟನೆ ಆರ್‌.ಟಿ.ನಗರ ಸಮೀಪ ಬುಧವಾರ ನಡೆದಿದೆ. ಸುಲ್ತಾನ್‌ ಪಾಳ್ಯದ ರಾಮಕೃಷ್ಣ ಅಪಾರ್ಟ್‌ಮೆಂಟ್‌ನ ಕಾವಲುಗಾರ ರಾಜು(36) ಹಾಗೂ ಅವರ ಪುತ್ರ ಸಾಯಿನಾಥ್‌(11) ಮೃತ(Dead) ದುರ್ದೈವಿಗಳು. ತಮ್ಮ ಅಪಾರ್ಟ್‌ಮೆಂಟ್‌ನ ಆವರಣದಲ್ಲಿನ ನೀರಿನ ಸಂಪ್‌(Water Tank) ಅನ್ನು ರಾಜು ಸ್ವಚ್ಛಗೊಳಿಸುವಾಗ ಈ ದುರಂತ ನಡೆದಿದೆ ಎಂದು ಪೊಲೀಸರು(Polic)  ತಿಳಿಸಿದ್ದಾರೆ.

ತಮಿಳುನಾಡು ಮೂಲದ ರಾಜು ಕಳೆದ ಹತ್ತು ವರ್ಷಗಳಿಂದ ರಾಮಕೃಷ್ಣ ಅಪಾರ್ಟ್‌ಮೆಂಟ್‌ನಲ್ಲಿ ಕಾವಲುಗಾರರಾಗಿದ್ದರು(watchman). ಅದೇ ಅಪಾರ್ಟ್‌ಮೆಂಟ್‌ನ(Apartment) ಆವರಣದಲ್ಲಿರುವ ಮನೆಯಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳ ಜತೆ ನೆಲೆಸಿದ್ದರು. ಪ್ರತಿ ತಿಂಗಳಿಗೊಮ್ಮೆ ನೀರಿನ ಸಂಪ್‌ ಅನ್ನು ರಾಜು ಸ್ವಚ್ಛಗೊಳಿಸುತ್ತಿದ್ದರು. ಅಂತೆಯೇ ಬುಧವಾರ ಬೆಳಗ್ಗೆ ಸಹ ರಾಜು ಸ್ವಚ್ಛಗೊಳಿಸಲು ತೆರಳಿದ್ದಾರೆ. ಆಗ ನೀರಿನ ಸಂಪ್‌ಗೆ ಸಂಪರ್ಕ ಪಡೆದಿದ್ದ ಮೋಟಾರ್‌ ಯಂತ್ರದ ತಂತಿಯಿಂದ ವಿದ್ಯುತ್‌ ಪ್ರವಹಿಸಿದೆ. ಆ ವೇಳೆ ರಕ್ಷಣೆಗೆ ರಾಜು ಕೂಗಿಕೊಂಡಾಗ ಮನೆ ಸಮೀಪ ನಿಂತಿದ್ದ ಅವರ ಪುತ್ರ ಸಾಯಿನಾಥ್‌ ದೌಡಾಯಿಸಿದ್ದಾನೆ. ಅಪ್ಪನ ಕೈ ಸ್ಪರ್ಶಿಸಿದ ಕೂಡಲೇ ಆತನಿಗೂ ವಿದ್ಯುತ್‌ ಪ್ರವಹಿಸಿದೆ. ಅಪ್ಪ-ಮಗನ ಚೀರಾಟ ಕೇಳಿ ಸ್ಥಳೀಯರು ರಕ್ಷಣೆಗೆ ಬಂದಿದ್ದಾರೆ. ಆದರೆ ಅಷ್ಟರಲ್ಲಿ ಅವರಿಬ್ಬರು ಕೊನೆಯುಸಿರೆಳೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಆರ್‌.ಟಿ.ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ.

Bengaluru Road Accidents: ಬೆಂಗ್ಳೂರಲ್ಲಿ ಅಪಘಾತ ಇಳಿಕೆ: ಸಾವು ಏರಿಕೆ

ಕಬ್ಬಿನ ಸೊಪ್ಪಿಗೆ ಹಚ್ಚಿದ್ದ ಬೆಂಕಿಗೆ ಆಕಸ್ಮಿಕವಾಗಿ ಬಿದ್ದು ರೈತ ಸಾವು

ಗುತ್ತಲ: ರೈತನೋರ್ವ(Farmer) ನಂದಿಸಲು ಹೋದ ಬೆಂಕಿಗೇ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುವ ಘಟನೆ ಹಾವೇರಿ(Haveri) ತಾಲೂಕಿನ ಗುತ್ತಲ ಸಮೀಪದ ಬೆಳವಗಿ ಗ್ರಾಮದ ಹೊರವಲಯದ ಹೊಲವೊಂದರಲ್ಲಿ ಸಂಭವಿಸಿದೆ. ಬೆಳವಗಿ ಗ್ರಾಮದ ನಿಂಗಪ್ಪ ಹಾದಿಮನಿ (75) ಮೃತರು. ಅವರು ತಮ್ಮ ಹೊಲದಲ್ಲಿನ ಕಬ್ಬು ಬೆಳೆಯನ್ನು ಕಟಾವು ಮಾಡಿ ಉಳಿದಿದ್ದ ಕಬ್ಬಿನ ಸೊಪ್ಪಿಗೆ ಬೆಂಕಿ(Fire) ಹಚ್ಚಿ ಸುಡುತ್ತಿದ್ದರು. ಆಗ ಬೆಂಕಿ ನಿಯಂತ್ರಣಕ್ಕೆ ಬಾರದೇ ಪಕ್ಕದ ಜಮೀನಿಗೆ ಹರಡಿತು. ಗಾಬರಿಯಿಂದ ಬೆಂಕಿ ನಂದಿಸುವ ಪ್ರಯತ್ನ ಮಾಡಿದರು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಿದ್ದು ದೇಹದ ವಿವಿಧ ಭಾಗಗಳು ಸುಟ್ಟು ಹೋಯಿತು. ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

Haveri Road Accident: ರಟ್ಟಿಹಳ್ಳಿ ಬಳಿ ಭೀಕರ ಅಪಘಾತ: 4 ಮಂದಿ ಸಾವು

ಬೈಕ್‌ಗೆ ಕಾರು ಡಿಕ್ಕಿಯಾಗಿ ಡೆಲಿವರಿ ಬಾಯ್‌ ಸಾವು

ಬೆಂಗಳೂರು: ಅತಿವೇಗವಾಗಿ ಬಂದ ಕಾರೊಂದು ಬೈಕ್‌ಗೆ ಡಿಕ್ಕಿಯಾಗಿದ್ದರಿಂದ(Accident) ಬೈಕ್‌ ಸವಾರ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಮಡಿವಾಳ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಿಹಾರ(Bihar) ಮೂಲದ ಯಾದವ್‌(24) ಮೃತ ಬೈಕ್‌ ಸವಾರ. ಮಡಿವಾಳದಲ್ಲಿ ನೆಲೆಸಿರುವ ಯಾದವ್‌ ಫುಡ್‌ ಡೆಲಿವರಿ ಬಾಯ್‌(Food Delivery Boy) ಆಗಿ ಕೆಲಸ ಮಾಡುತ್ತಿದ್ದರು. ಸೋಮವಾರ ತಡರಾತ್ರಿ 12.30ರ ಸುಮಾರಿಗೆ ಫುಡ್‌ ಡೆಲಿವರಿ ಕೊಟ್ಟು ಮನೆಗೆ ವಾಪಸಾಗುವಾಗ ಗಾರ್ವೆಬಾವಿ ಪಾಳ್ಯದ ಬಳಿ ವೇಗವಾಗಿ ಬಂದ ಕಾರೊಂದು ಬೈಕ್‌ಗೆ ಡಿಕ್ಕಿಯಾಗಿದೆ. ಈ ವೇಳೆ ರಸ್ತೆಗೆ ಬಿದ್ದ ಯಾದವ್‌ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮೃತದೇಹವನ್ನು(Deadbody) ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆ ಬಳಿಕ ಕಾರು ಚಾಲಕ ಕಾರಿನೊಂದಿಗೆ ಪರಾರಿಯಾಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮಡಿವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!