Chikkaballapur: ಮಾರುಕಟ್ಟೆ ಇತಿಹಾಸದಲ್ಲೇ ಇದೇ ಮೊದಲು: ವೀಳ್ಯದೆಲೆಗೆ ಚಿನ್ನದ ದರ..!

By Kannadaprabha News  |  First Published Jan 20, 2022, 6:53 AM IST

*  2 ವಾರದಲ್ಲಿ 3 ಪಟ್ಟು ಬೆಲೆ ಹೆಚ್ಚಳ
*  ಮಾರುಕಟ್ಟೆಯಲ್ಲಿ ವೀಳ್ಯದೆಗೆ ಚಿನ್ನದ ಬೆಲೆ, ಕಟ್ಟು 150 ರು
*  ವೀಳ್ಯದೆಲೆ ತೋಟವನ್ನು ನೆಲಕಚ್ಚುವಂತೆ ಮಾಡಿದ ಆಕಾಲಿಕ ಮಳೆ


ಕಾಗತಿ ನಾಗರಾಜಪ್ಪ.

ಚಿಕ್ಕಬಳ್ಳಾಪುರ(ಜ.20): ವೀಳ್ಯದೆಲೆ(Betel Leaf) ಅಂದರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಏನೇ ಧಾರ್ಮಿಕ ಪೂಜೆ, ಶುಭ ಸಭೆ, ಸಮಾರಂಭ ನಡೆಯಬೇಕಾದರೂ ವೀಳ್ಯದೆಲೆಗೆ ಖಾಯಂ ಸ್ಥಾನ ಇದೆ. ಅದರಲ್ಲೂ ಎಲೆಡಿಕೆ ಜಿಗಿಯುವರ ಪಾಲಿಗೂ ಅಂತೂ ವೀಳ್ಯದೆಲೆ ಇರಲೇಬೇಕು. ಆದರೆ ಇದೀಗ ವೀಳ್ಯದೆಲೆಗೆ ಮಾರುಕಟ್ಟೆಯಲ್ಲಿ(Market) ಬಂಗಾರದ ಬೆಲೆ ಬಂದಿದೆ.

Tap to resize

Latest Videos

ಹೌದು, ಕಳೆದ 15 ದಿನದಿಂದ ಜಿಲ್ಲೆಯ(Chikkaballapur) ಮಾರುಕಟ್ಟೆಯಲ್ಲಿ ವೀಳ್ಯದೆಲೆಯ ಬೆಲೆ ಬರೋಬ್ಬರಿ ಮೂರು ಪಟ್ಟು ಹೆಚ್ಚಳ ಕಂಡಿದ್ದು ಬೆಲೆ ಏರಿಕೆಯ ತಾಪ ಗ್ರಾಹಕರ(Customers) ಕೈ ಕಚ್ಚುತ್ತಿದೆ. ಒಂದು ಕಟ್ಟು ವೀಳ್ಯದೆಲೆ ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ 40, ರು, ಗೆ ಮಾರಾಟ ಆಗಿರುವುದನ್ನು ನಾವು ನೋಡಿದ್ದೇವೆ. ಬೇಸಿಗೆ ಬಂದರೆ ಅಬ್ಬಾಬ್ಬ ಅಂದರೂ 50 ರಿಂದ 60 ರು, ಒಳಗೆ ಮಾರಾಟ ಆಗಿರುವುದನ್ನು ನಾವು ನೋಡಿದ್ದೇವೆ. ಕೇಳಿದ್ದೇವೆ.

New Technology in Agriculture: ಮಲೆನಾಡಲ್ಲಿ ಶುರುವಾಯ್ತು ಅಡಕೆ ಮಿಲ್‌ಗಳ ಸದ್ದು..!

ಕಂಗಾಲಾದ ಗ್ರಾಹಕ

ಆದರೆ ಮಾರುಕಟ್ಟೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವೀಳ್ಯದೆಲೆಗೆ ಚಿನ್ನದ ಬೆಲೆ ಬಂದಿದ್ದು ಒಂದು ಕಟ್ಟು ವೀಳ್ಯದೆಲೆ ಬರೋಬ್ಬರಿ 150 ರಿಂದ 160 ರು, ವರೆಗೂ ಮಾರಾಟವಾಗುತ್ತಿದ್ದು ಗ್ರಾಹಕರ ಅಂತೂ ಬೆಲೆ ಏರಿಕೆಗೆ ಕಂಗಾಲಾಗಿ ಹೋಗಿದ್ದಾರೆ. ಔಷಧಿ ಗುಣವುಳ್ಳ ವೀಳ್ಯದೆಲೆಯನ್ನು ಹೆಚ್ಚಾಗಿ ಬಳಕೆ ಮಾಡುವುದನ್ನು ನಾವು ನೋಡಿದ್ದೇವೆ. ಅದರಲ್ಲೂ ಗ್ರಾಮೀಣ ಭಾಗದ ಮಹಿಳೆಯರು ಅಡಿಕೆಯೊಂದಿಗೆ(Betelnut) ವೀಳ್ಯದೆಲೆಯನ್ನು ಬೆರೆಸಿಕೊಂಡು ಜಿಗಿದರೆ ಅತ್ತ ನಗರ ಪ್ರದೇಶದಲ್ಲಿ ಪಾನ್‌ ಮಸಲಾ(Pan Masala) ಪ್ರಿಯರು ತಂಬಾಕು ಉತ್ಪನ್ನಗಳ ಜೊತೆಗೆ ವೀಳ್ಯದೆಲೆಯ ಬಳಸಿಕೊಂಡು ಜಗಿಯುತ್ತಾರೆ. ಧಾರ್ಮಿಕ ಪೂಜಾ ಕಾರ್ಯಕ್ರಮಗಳಿಂದ ಹಿಡಿದು ದೊಡ್ಡ ದೊಡ್ಡ ಹಬ್ಬ, ಹರಿದಿನಗಳು ಬಂದರೆ ಅಥವ ಮದುವೆ, ನಾಮಕಾರಣ, ಅರಕ್ಷತೆ, ಬಾಡೂಟ ಕಾರ್ಯಕ್ರಮಗಳ ವೇಳೆಯು ವೀಳ್ಯದೆಲೆಗೆ ಖಾಯಂ ಸ್ಥಾನ ಇದೆ.

ಇತಂಹ ವೀಳ್ಯದೆಲೆಗೆ ಈಗ ಬಂಗಾರದ ಬೆಲೆ ಬಂದಿದ್ದು ಬೆಲೆ ಏರಿಕೆ ಪರಿ ನೋಡಿ ಗ್ರಾಹಕರು ಗಾಬರಿಗೊಳ್ಳುವಂತೆ ಮಾಡಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಮಾರುಕಟ್ಟೆಯಲ್ಲಿ ಗಗನ ಕುಸುಮವಾಗಿದೆ. ಅದರಲ್ಲೂ ತರಕಾರಿ(Vegetable) ವೀಪರಿತವಾಗಿ ಏರಿಕೆ ಕಂಡಿದೆ. ಇದರ ನಡುವೆ ಈಗ ಬೆಲೆ ಏರಿಕೆ ಸರದಿ ವೀಳ್ಯದೆಲೆಯದಾಗಿದ್ದು ವೀಳ್ಯದೆಲೆ ಜಿಗಿಯುವ ಬಾಯಿ ಸುಡುವಂತೆ ಬೆಲೆ ದುಪ್ಪಟ್ಟುಗೊಂಡಿದೆ.

Chikkamagaluru : ಮಲೆನಾಡಿನಲ್ಲಿ ಮುಗಿದಿಲ್ಲ ಮಳೆಗಾಲ, ಅಡಿಕೆ ಒಣಗಿಸಲು ಇದೆಂಥಾ ಐಡಿಯಾ ನೋಡಿ..!

ಮಂಚೇಚನಹಳ್ಳಿ ಹೋಬಳಿಯಲ್ಲಿ ಬೆಳೆ

ಜಿಲ್ಲೆಯಲ್ಲಿ ಮಲೆನಾಡು ಆಗಿರುವ ಗೌರಿಬಿದನೂರು(Gauribidanur) ತಾಲೂಕಿನ ಮಂಚೇಚನಹಳ್ಳಿ ಹೋಬಳಿ ಬಿಟ್ಟರೆ ವೀಳ್ಯದೆಲೆ ತೋಟಗಳು ಕಾಣುವುದೇ ಅಪರೂಪ. ಆದರೆ ಇತ್ತೀಚೆಗೆ ಜಿಲ್ಲೆಯಲ್ಲಿ ಬಿದ್ದ ಆಕಾಲಿಕ ಮಳೆ ವೀಳ್ಯದೆಲೆ ತೋಟವನ್ನು ನೆಲಕಚ್ಚುವಂತೆ ಮಾಡಿದೆ. ಇನ್ನೂ ಜಿಲ್ಲೆಗೆ ಪೂರೈಕೆ ಆಗುವ ಪಾವಗಡ, ತುಮಕೂರು ಮತ್ತಿತರ ಕಡೆಯ ವೀಳ್ಯದೆಲೆ ತೋಟಗಳಿಗೂ ವರುಣನ ಅರ್ಭಟ ಅಪ್ಪಳಿಸಿದ ಪರಿಣಾಮ ನಿರೀಕ್ಷಿತ ಪ್ರಮಾಣದಲ್ಲಿ ವೀಳ್ಯದೆಲೆ ಜಿಲ್ಲೆಗೆ ಪೂರೈಕೆ ಆಗದೇ ಬೆಲೆ ಹೆಚ್ಚಳ ಕಂಡಿದೆ ಎನ್ನುವ ಮಾತು ವ್ಯಾಪಾರಸ್ಥರಿಂದ ಕೇಳಿ ಬರುತ್ತಿದೆ. ಇಡೀ ಜಿಲ್ಲೆಗೆ ಆಂಧ್ರ ಹಾಗೂ ತುಮಕೂರು ಭಾಗದಿಂದ ವೀಳ್ಯದೆಲೆ ಪೂರೈಕೆ ಆಗುತ್ತಿದೆ.

ಬೆಲೆ ಏರಿಕೆಯ ಮಧ್ಯೆ ಮತ್ತೊಂದು ಶಾಕಿಂಗ್‌ ಸುದ್ದಿ..!

ನಂದಿನಿ ಉತ್ಪನ್ನಗಳ(Nandini Product) ಮಾರಾಟ ದೇಶಾದ್ಯಂತ(India) ವಿಸ್ತರಿಸಲು ಬೆಳಗಾವಿಯಲ್ಲಿ(Belagavi) ನಂದಿನಿ ಮೆಗಾ ಫುಡ್‌ ಪಾರ್ಕ್(Nandini Mega Food Park) ನಿರ್ಮಿಸಲಾಗುತ್ತಿದೆ. ಪನ್ನೀರ್‌, ಚೀಸ್‌ ಆಧಾರಿತ ಉತ್ಪನ್ನ ಹಾಗೂ ಇತರೆ ನಂದಿನಿ ಸಿಹಿ ಉತ್ಪನ್ನ ಉತ್ಪಾದಿಸಿ ದೇಶಾದ್ಯಂತ ಹಳ್ಳಿಯಿಂದ ಮಹಾನಗರದವರೆಗೆ ಸಮಗ್ರ ಮಾರುಕಟ್ಟೆಅಭಿವೃದ್ಧಿಗಾಗಿ ‘ವಿಜನ್‌ - 2022-2025’ ಕಾರ್ಯಕ್ರಮ ರೂಪಿಸಿದ್ದೇವೆ ಎಂದು ಕೆಎಂಎಫ್‌ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ(Balachandra Jarkiholi) ಹೇಳಿದ್ದಾರೆ.
 

click me!