ವಿವಾಹಿತನ ಜತೆ ಯುವತಿ ಪರಾರಿ, ಹುಡ್ಗಿ ಪೋಷಕರಿಗೆ ವಿಷ್ಯಾ ಮುಟ್ಟಿಸಿದ ಹೆಂಡ್ತಿ: ಬಳಿಕ ನಡೆದಿದ್ದು ಘನಘೋರ

Published : May 12, 2019, 06:13 PM IST
ವಿವಾಹಿತನ ಜತೆ ಯುವತಿ ಪರಾರಿ, ಹುಡ್ಗಿ ಪೋಷಕರಿಗೆ ವಿಷ್ಯಾ ಮುಟ್ಟಿಸಿದ ಹೆಂಡ್ತಿ: ಬಳಿಕ ನಡೆದಿದ್ದು ಘನಘೋರ

ಸಾರಾಂಶ

ಯುವತಿಯೊಬ್ಬಳು ವಿವಾಹಿತ ಪ್ರಿಯಕರನ ಜತೆ ಪರಾರಿಯಾಗಿದ್ದು, ಈ ವಿಷಯವನ್ನು ಆತನ  ಹೆಂಡತಿ, ಯುವತಿಯ ಪೋಷಕರಿಗೆ ತಿಳಿಸಿದ್ದಾರೆ. ಬಳಿಕ ನಡೆದ ಘಟನೆ ಘನಘೋರ ದುರಂತ. 

ಬೆಂಗಳೂರು, [ಮೇ.12]: ಪ್ರೀತಿಸಿದವನ ಜತೆ ಮಗಳು ಓಡಿಹೋದ ಎಂಬ ಕಾರಣಕ್ಕೆ ಮನನೊಂದ ತಂದೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬೆಂಗಳೂರಿನ ಸಂಜಯ್​​ಗಾಂಧಿ ನಗರದಲ್ಲಿ ಘಟನೆ ನಡೆದಿದ್ದು, ವಿವಾಹಿತ ಉದಯ್ ಎಂಬವನ ಜತೆ ವೇದಾವತಿ ಎಂಬಾಕೆ ಓಡಿಹೋಗಿದ್ದಾಳೆ. ಮಗಳು ಓಡಿ ಹೋಗಿದ್ದಕ್ಕೆ ನೊಂದ ತಂದೆ ರಾಮು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮನೆಗೆ ಬಂದು ಹೋಗುತ್ತಿದ್ದ ಉದಯ್, ವೇದಾವತಿಯ ಸ್ನೇಹ ಬೆಳಸಿಕೊಂಡಿದ್ದ. ಬಳಿಕ ಇಬ್ಬರು ಪರಾರಿಯಾಗಿದ್ದರು.ಈ ವಿಷಯವನ್ನು ಉದಯ್‌ ಪತ್ನಿ ವೇದಾವತಿ ಪಾಲಕರಿಗೆ ವಿಷಯ ತಿಳಿಸಿದ್ದಾರೆ.

ಇದ್ರಿಂದ ನೊಂದ ಯುವತಿಯ ತಂದೆ ರಾಮು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಮಗಳು ವೇದಾವತಿ ವಿರುದ್ಧ ದೂರು ದಾಖಲಾಗಿದೆ.

PREV
click me!

Recommended Stories

ಗಂಭೀರತೆ ಪಡೆದ ಕಲ್ಲಿದ್ದಲು ಕಳ್ಳತನ ಪ್ರಕರಣ, ಪವರ್ ಮೇಕ್ ಸಂಸ್ಥೆಯ ಇಬ್ಬರ ವಿರುದ್ಧ ಎಫ್‌ಐಆರ್‌ ದಾಖಲು
ಕಾರವಾರದಲ್ಲಿ ಸಿಕ್ಕಿದ ಸೀಗಲ್ ಹಕ್ಕಿಯಲ್ಲಿ ಚೈನಾದ ಜಿಪಿಎಸ್ ಟ್ರ್ಯಾಕರ್ ಪತ್ತೆ! ಪೊಲೀಸರಿಂದ ತನಿಖೆ