ಬೆಂಗಳೂರು: ದ್ವಿತೀಯ PUCಯಲ್ಲಿ ಶೇ. 92ರಷ್ಟು ಅಂಕ ಗಳಿಸಿದ್ದ ವಿದ್ಯಾರ್ಥಿ ನಾಪತ್ತೆ

Published : May 11, 2019, 09:29 PM ISTUpdated : May 11, 2019, 09:45 PM IST
ಬೆಂಗಳೂರು: ದ್ವಿತೀಯ PUCಯಲ್ಲಿ ಶೇ. 92ರಷ್ಟು ಅಂಕ ಗಳಿಸಿದ್ದ ವಿದ್ಯಾರ್ಥಿ ನಾಪತ್ತೆ

ಸಾರಾಂಶ

ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಅನುಮಾನಾಸ್ಪದವಾಗಿ ನಾಪತ್ತೆ| ವೀಣಾ ಮತ್ತು ರವೀದ್ರನಾಥ್ ದಂಪತಿ ಪುತ್ರ ಕ್ಷೀತೀಶ್ ಭಾರದ್ವಜ್ ನಾಪತ್ತೆಯಾದ ವಿದ್ಯಾರ್ಥಿ| ಮೇ1 ರಂದು  ಟ್ಯೂಟೋರಿಯಲ್ಸ್ ಗೆ ಹೋಗಿ ಬರುವುದಾಗಿ ಮನೆಯಿಂದ ತೆರಳಿದ್ದ.

ಬೆಂಗಳೂರು, [ಮೇ.11]: ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇಕಡ 92 ರಷ್ಟು ಅಂಕ ಪಡೆದಿದ್ದ ಬೆಂಗಳೂರು ಮೂಲದ ವಿದ್ಯಾರ್ಥಿ ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದಾನೆ.

ವೀಣಾ ಮತ್ತು ರವೀದ್ರನಾಥ್ ದಂಪತಿ ಪುತ್ರ ಕ್ಷೀತೀಶ್ ಭಾರದ್ವಾಜ್  (18) ನಾಪತ್ತೆಯಾದ ವಿದ್ಯಾರ್ಥಿ. ಮೇ1ರಂದು  ಟ್ಯೂಟೋರಿಯಲ್ಸ್ ಗೆ ಹೋಗಿ ಬರುವುದಾಗಿ ಮನೆಯಿಂದ ತೆರಳಿದ್ದ ಕ್ಷೀತೀಶ್ ಮರಳಿ ಮನೆಗೆ ವಾಪಸ್ ಆಗಿಲ್ಲ.

ಬೆಂಗಳೂರಿನ ಹನುಮಂತನಗರದಿಂದ ನಾಪತ್ತೆಯಾಗಿರುವ ಕ್ಷೀತೀಶ್,  ಹತ್ತುದಿನಗಳು ಕಳೆದರೂ ಸಣ್ಣ ಸುಳಿವು ಪತ್ತೆಯಾಗಿಲ್ಲ. ಇದ್ರಿಂದ ಆತಂಕದಲ್ಲಿರುವ ಪೋಷಕರು  ಹನುಮಂತನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

ನಾಪತ್ತೆಯಾದ ದಿನ [ಮೇ.01] ಬೆಳಗ್ಗೆ ಮೆಜೆಸ್ಟಿಕ್ ಮೇಟ್ರೋ ನಿಲ್ದಾಣದಲ್ಲಿ ತೆರಳಿ ಬಳಿಕ ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ತೆರಳಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದ್ರೆ ರೈಲ್ವೆ ನಿಲ್ದಾಣದಿಂದ ಎಲ್ಲಿಗೆ ತೆರಳಿದ್ದಾನೆಂಬುವುದು ಮಾತ್ರ ಪತ್ತೆಯಾಗ್ತಿಲ್ಲ.

PREV
click me!

Recommended Stories

ಕಾರ್ಯಕರ್ತರು ಎದೆಗುಂದಬೇಡಿ, ಜೆಡಿಎಸ್‌ಗೆ ಉತ್ತಮ ಕಾಲ ಬರಲಿದೆ: ಕೇಂದ್ರ ಸಚಿವ ಕುಮಾರಸ್ವಾಮಿ
ಗಂಭೀರತೆ ಪಡೆದ ಕಲ್ಲಿದ್ದಲು ಕಳ್ಳತನ ಪ್ರಕರಣ, ಪವರ್ ಮೇಕ್ ಸಂಸ್ಥೆಯ ಇಬ್ಬರ ವಿರುದ್ಧ ಎಫ್‌ಐಆರ್‌ ದಾಖಲು