ನೂರಾರು ವರ್ಷಗಳಿಂದ ಹೂಳುತುಂಬಿದ ಕೆರೆಗೆ ಕಾಯಕಲ್ಪ| ರಾಜ್ಯದಲ್ಲಿ 93ಕೆರೆಗಳ ಅಭಿವೃದ್ಧಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹೆಗಲಿಗೆ| ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ನಡೆದಿದೆ ಕೆರೆಗೆ ಕಾಯಕಲ್ಪ| ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಕೆರೆ ಸಂಜೀವಿನಿಯಡಿ ಹೂಳೆತ್ತುವ ಕಾರ್ಯ| ಕಳೆದ 15ದಿನಗಳಿಂದ 3 ಹಿಟಾಚಿ ಮೂಲಕ ಹೂಳೆತ್ತುವ ಕಾರ್ಯ| ಕೆರೆ ಹೂಳೆತ್ತಿರೋದರಿಂದ ರೈತರ ಮೊಗದಲ್ಲಿ ಮಂದಹಾಸ|
ಮಲ್ಲಿಕಾರ್ಜುನ ಹೊಸಮನಿ
ಬಾಗಲಕೋಟೆ(ಮೇ.12): ಹಲವು ವಷ೯ಗಳಿಂದ ಆ ಕೆರೆ ಹೂಳಿನಿಂದ ತುಂಬಿ ಹೋಗಿತ್ತು. ಸತತ ಬರಗಾಲದಿಂದ ಕೆರೆಯಂಗಳ ಬರಿದಾಗಿತ್ತು.ಆದರೆ ಇದೀಗ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಕೆರೆ ಸಂಜೀವಿನಿ ಯೋಜನೆಯಡಿ ಆ ಗ್ರಾಮದ ಕೆರೆಯಲ್ಲಿನ ಹೂಳೆತ್ತೋ ಕಾಯಕ ಭರದಿಂದ ಸಾಗಿದೆ.
ರಾಜ್ಯ ಸರ್ಕಾರ ಕೆರೆಗೆ ಕಾಯಕಲ್ಪ ನೀಡೋ ಉದ್ದೇಶದಿಂದ ಕೆರೆ ಸಂಜೀವಿನಿ ಯೋಜನೆ ಜಾರಿ ಮಾಡಿದ್ದು ಹೀಗಾಗಿ ರಾಜ್ಯದಲ್ಲಿ ಮೊದಲ ಹಂತದಲ್ಲಿ 93ಕೆರೆ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಇದರಲ್ಲಿ 93 ಕೆರೆಗಳ ಹೂಳೆತ್ತಿ ಅಭಿವೃದ್ಧಿಪಡಿಸೋದಕ್ಕೆ ರಾಜ್ಯ ಸರ್ಕಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ಹೆಗಲಿಗೆ ವಹಿಸಿದೆ.
ಸತತ ಐದಾರು ವರ್ಷಗಳಿಂದ ಬರಕ್ಕೆ ತುತ್ತಾಗಿರೋ ಬಾಗಲಕೋಟೆ ಜಿಲ್ಲೆಯಲ್ಲಿ ಕೆರೆಗಳಲ್ಲಿ ನೀರಿಲ್ಲದೇ ಹೂಳು ತುಂಬಿ ಬಿರುಕು ಬಿಟ್ಟಿವೆ. ಮಾಜಿ ಸಿಎಂ ಸಿದ್ದರಾಮಯ್ಯನವರ ಸ್ವಕ್ಷೇತ್ರ ಬಾದಾಮಿ ತಾಲೂಕಿನ ಮುಷ್ಠಿಗೇರಿ ಗ್ರಾಮದಲ್ಲಿರೋ 15 ಎಕರೆ ವಿಸ್ತೀರ್ಣದ ಕೆರೆಯನ್ನು ಬರೋಬ್ಬರಿ 18ಲಕ್ಷ ವೆಚ್ಚದಲ್ಲಿ ಕೆರೆಕಾಯಕ ಕೈಗೆತ್ತಿಕೊಂಡಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಿಬ್ಬಂದಿ ಮೊದಲು ಗ್ರಾಮದಲ್ಲಿ ಕೆರೆ ಭಾಗಿದಾರರನ್ನೋಳಗೊಂಡ ಕೆರೆ ಅಭಿವೃದ್ಧಿ ಸಂಭಂದ ಸಂಘವೊಂದನ್ನು ರಚನೆ ಮಾಡಿ, ಕೆರೆಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ತಯಾರಿಸಿ, ಹೂಳೆತ್ತಲಾಗುತ್ತಿದೆ.
ಈ ಕಾರ್ಯದಿಂದ ಈ ಗ್ರಾಮದ ಜನತೆಗೆ ಅತ್ಯಂತ ಅನುಕೂಲವಾಗಲಿದೆ ಅಂತಾರೆ ಶ್ರೀ ಧಮ೯ಸ್ಥಳ ಗ್ರಾಮಾಭಿವೃದ್ದಿ ಸಂಘದ ವಿಭಾಗಿಯ ನಿರ್ದೇಶಕರು.
ಇನ್ನು ಕಳೆದ 15ದಿನಗಳಿಂದ 3 ಹಿಟಾಚಿಗಳೊಂದಿಗೆ ಮುಷ್ಠಿಗೇರಿ ಕೆರೆಯಲ್ಲಿ ಹೂಳೆತ್ತಲಾಗ್ತಿದೆ. ಇನ್ನು ಸಂಘದ ನಿರ್ಧಾರದಂತೆ ರೈತರು ತಮ್ಮ ಹೊಲಕ್ಕೆ ಕೆರೆ ಹೂಳು ಹಾಕಿಸಿಕೊಳ್ಳಬೇಕಾದರೆ ಪ್ರತಿ ಟ್ರ್ಯಾಕ್ಟರ್ ಗೆ 50 ರೂ. ನಿಗದಿ ಮಾಡಿದ್ದಾರೆ.18ಲಕ್ಷ ಹಣ ಹಿಟಾಚಿ ಮೂಲಕ ಹೂಳೆತ್ತಲು ಬಳಸಲಾಗ್ತಿದೆ.
ರೈತರು ತಮ್ಮ ವೆಚ್ಚದಲ್ಲಿ ಟ್ರ್ಯಾಕ್ಟರ್ ಮೂಲಕ ಹೂಳು ತೆಗೆದುಕೊಂಡು ಹೋಗ್ತಿದ್ದಾರೆ. ಕೆರೆ ಹೂಳೆತ್ತುತ್ತಿರೋದರಿಂದ ರೈತರ ಜಮೀನುಗಳಿಗೆ ಫಲವತ್ತಾದ ಮಣ್ಣು ಅನುಕೂಲವಾಗ್ತಿದೆ. ಇನ್ನು ಮಳೆಯಾಗಿ ಕೆರೆಯಲ್ಲಿ ನೀರು ತುಂಬಿದರೆ ಸುತ್ತಲೂ ಇರೋ ರೈತರ ಬೋರ್ ವೆಲ್ ಕಾಮಗಾರಿ ನಡೆಯುತ್ತಿದೆ.
ಮುಷ್ಠಿಗೇರಿ ಗ್ರಾಮದಲ್ಲಿ ನಡೆಯುತ್ತಿರೋ ಕೆರೆ ಕಾಯಕ ಕಾಮಗಾರಿ ವೀಕ್ಷಣೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಪ್ಪಳ ಪ್ರಾದೇಶಿಕ ನಿರ್ದೇಶಕರು, ಅಧಿಕಾರಿಗಳು ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಚರ್ಚಿಸಿದರು.
ಯೋಜನೆಯಡಿ ಕೆರೆಪಿಚಿಂಗ್ ಮಾಡಲು ಅವಕಾಶ ಕಲ್ಪಿಸುವಂತೆ ರೈತರು ಮನವಿ ಮಾಡಿದರು. ಇನ್ನು ರೈತರಿಂದ ಪ್ರತಿ ಟ್ರ್ಯಾಕ್ಟರ್ ಗೆ 50 ರೂ. ಹಣವನ್ನು ಕೆರೆ ಅಭಿವೃದ್ಧಿಗೆ ಬಳಸುವಂತೆ ಸಲಹೆ ನೀಡಿದ್ದರು. ನಮ್ಮೂರು ಕೆರೆ ಅಭಿವೃದ್ಧಿ ಆಗ್ತಿರೋದರಿಂದ ಖುಷಿ ಆಗಿದೆ ಮಳೆರಾಯ ಕೃಪೆ ತೋರಿದರೆ ಸಾರ್ಥಕವಾಗುತ್ತೆ ಅಂತಾರೆ ರೈತ ಮಹಿಳೆಯರು.
ಒಟ್ಟಿನಲ್ಲಿ ಕೆರೆ ಸಂಜೀವಿನಿ ಯೋಜನೆಯಡಿ ರಾಜ್ಯದಲ್ಲಿ ಕೆರೆ ಅಭಿವೃದ್ಧಿ ಆಗ್ತಿರೋದು ರೈತರಿಗೆ ಅನುಕೂಲವಾಗಲಿದೆ. ಈ ವರ್ಷವಾದ್ರೂ ಮಳೆರಾಯ ರೈತರ ಮೇಲೆ ಕರುಣೆ ತೋರಿ ಮಳೆ ಸುರಿಸಲಿ ಅನ್ನೋದೆ ಎಲ್ಲರ ಆಶಯ.