ಹೊಲದಲ್ಲಿ ಬೋರ್‌ವೆಲ್ ಆನ್ ಮಾಡುವಾಗ ವಿದ್ಯುತ್ ಶಾಕ್‌ ತಗುಲಿ ಅಪ್ಪ-ಮಗ ಸಾವು

Published : Nov 26, 2023, 07:52 PM IST
ಹೊಲದಲ್ಲಿ ಬೋರ್‌ವೆಲ್ ಆನ್ ಮಾಡುವಾಗ ವಿದ್ಯುತ್ ಶಾಕ್‌ ತಗುಲಿ ಅಪ್ಪ-ಮಗ ಸಾವು

ಸಾರಾಂಶ

ಹೊಲದಲ್ಲಿ ಬೋರ್‌ವೆಲ್‌ ಮೋಟರ್‌ನ ವಾಟರ್‌ ವಾಲ್‌ ತಿರುಗಿಸುವಾಗ ವಿದ್ಯುತ್ ಶಾಕ್‌ ತಗುಲಿ ತಂದೆ- ಮಗ ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿರುವ ದಾರುಣ ಘಟನೆ ಸಂಭವಿಸಿದೆ.

ಬೆಳಗಾವಿ (ನ.26):ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಹೊಲದಲ್ಲಿ ಬೋರ್‌ವೆಲ್‌ ಮೋಟರ್‌ನ ವಾಟರ್‌ ವಾಲ್‌ ತಿರುಗಿಸುವಾಗ ವಿದ್ಯುತ್ ಶಾಕ್‌ ತಗುಲಿ ತಂದೆ- ಮಗ ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿರುವ ದಾರುಣ ಘಟನೆ ಸಂಭವಿಸಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕಟ್ಟಿ ಗ್ರಾಮದಲ್ಲಿ ತಂದೆ ಮಗ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ತಂದೆ ಮಲ್ಲಿಕಾರ್ಜುನ ಸದಾಶಿವ ಪೂಜಾರಿ (32) ಆತನ ಮಗ ಪ್ರೀತಮ ಮಲ್ಲಿಕಾರ್ಜುನ ಪೂಜಾರಿ (7) ಸ್ಥಳದಲ್ಲೇ ಮೃತಪಟ್ಟ ದುರ್ದೈವಿಗಳಾಗಿಉದ್ದಾರೆ. ಇಂದು ಬೆಳಗ್ಗೆ ಹೊಲದಲ್ಲಿ ಬೋರವೆಲ್ ಮೋಟಾರ್ ವಾಟರ್ ವಾಲ್ ಟರ್ನ್ ಮಾಡುವ ವೇಳೆ ವಿದ್ಯುತ್ ತಗುಲಿ ಅವಘಡ ಸಂಭವಿಸಿದೆ. ಈ ವೇಳೆ ವಿದ್ಯುತ್‌ ತಗುಲಿದವರನ್ನು ಹೇಗ ಬಿಡಿಸಬೇಕು ಎಂಬ ಬಗ್ಗೆ ಅರಿವಿಲ್ಲದ ಪುತ್ರ ವಿದ್ಯುತ್ ತಗುಲಿದ ತಂದೆ ಒದ್ದಾಡುವುದನ್ನು ನೋಡಿ ರಕ್ಷಣೆ ಮಾಡಲು ಮುಂದಾಗಿದ್ದಾನೆ. ಆಗ ಮಗನಿಗೂ ವಿದ್ಯುತ್ ಪ್ರವಹಿಸಿದ್ದು, ಇಬ್ಬರೂ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.

ಡ್ರೋನ್ ಪ್ರತಾಪ್ ಹೆಸರೇಳದೇ ಹಿಗ್ಗಾಮುಗ್ಗಾ ನೀರಿಳಿಸಿದ ಕನ್ನಡತಿ ಅಕ್ಕ ಅನು!

ಈ ಘಟನೆ ನಡೆದ ಸ್ಥಳಕ್ಕೆ ಅಥಣಿ ಠಾಣೆ ಪೊಲೀಸರು ಭೇಟಿ ಮಾಡಿ ಪರಿಶೀಲನೆ ಮಾಡಿದ್ದಾರೆ. ಇನ್ನು ಸಾವಿನ ಕುರಿತಂತೆ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ವಿದ್ಯುತ್ ತಗುಲಿದ್ದು ಆಕಸ್ಮಿಕವೋ ಅಥವಾ ಬೇರೆ ಯಾರದ್ದಾದರೂ ಕೈವಾಡವಿದೆಯೋ ಎಂಬ ಬಗ್ಗೆ ಪತ್ತೆ ಮಾಡುತ್ತಿದ್ದಾರೆ. ಆದರೆ, ಕುಟುಂಬದ ಒಡೆಯ ಹಾಗೂ ಮುಂದೆ ಕುಟುಂಬಕ್ಕೆ ಆಸರೆಯಾಗುತ್ತಾನೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದ ಮಗನನ್ನು ಕಳೆದುಕೊಂಡ ಕುಟುಂಬ ಕಣ್ಣೀರಿಡುತ್ತಿದೆ.

PREV
Read more Articles on
click me!

Recommended Stories

Urdu Invitation Row: ನಾವು ಯಾರನ್ನೂ ಓಲೈಕೆ ಮಾಡೋಲ್ಲ, ಪ್ರತಿಭಟನೆ ಮಾಡೋದು ವಿಪಕ್ಷಗಳ ಚಾಳಿ ಎಂದ ಸಿಎಂ
Kunigal hotel fire: ಹೆದ್ದಾರಿ ಬದಿಯ ಹೋಟೆಲ್‌ಗೆ ಬೆಂಕಿ, ನೋಡನೋಡುತ್ತಿದ್ದಂತೆ ಇಡೀ ಕಟ್ಟಡವೇ ಸುಟ್ಟು ಕರಕಲು!