ಸಂಕ್ರಾಂತಿ ಸಂಭ್ರಮ: ರೈತರಿಗೆ ಉಡುಗೊರೆ

By Kannadaprabha NewsFirst Published Jan 15, 2020, 12:05 PM IST
Highlights

ಸಂಕ್ರಾಂತಿ ಆಚರಣೆ ಸಂದರ್ಭ ರೈತರಿಗೆ ಉಡುಗೊರೆ ನೀಡಲಾಗಿದೆ. ನಾಡಿನೆಲ್ಲೆಡೆ ಸಂಕ್ರಾಂತಿ ಸಂಭ್ರಮ ಮನೆ ಮಾಡಿದ್ದು, ಈ ಸಂದರ್ಭದಲ್ಲಿ ರೈತರಿಗೆ ಬಂಪರ್ ಗಿಫ್ಟ್ ಕೊಡಲಾಗಿದೆ.

ಚಿಕ್ಕಬಳ್ಳಾಪುರ(ಜ.15): ರೈತ ಆಸಕ್ತ ಗುಂಪುಗಳು ಫ್ಲೋರ್‌ ಮಿಲ್‌, ಉಪ್ಪಿನಕಾಯಿ ಘಟಕ ಅಥವಾ ರೈತರಿಗೆ ಉಪಯುಕ್ತ ಯಂತ್ರಗಳನ್ನು ತರಿಸಿ ಬಾಡಿಗೆಗೆ ನೀಡುವ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು ಎಂದು ರೇಷ್ಮೆ ರೈತರ ಉತ್ಪಾದಕ ಕಂಪನಿಯ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಿರೆಡ್ಡಿ ತಿಳಿಸಿದ್ದಾರೆ.

ಶಿಡ್ಲಘಟ್ಟ ನಗರದ ರೈತ ಸಂಘದ ನಗರ ಘಟಕದ ಕಚೇರಿಯಲ್ಲಿ ಶ್ರೀರಾಮ ರೈತ ಆಸಕ್ತ ಗುಂಪು ಮತ್ತು ಶ್ರೀ ಆಂಜನೇಯ ರೈತ ಆಸಕ್ತ ಗುಂಪುಗಳ ಸದಸ್ಯರಿಗೆ ಉಳಿತಾಯದ ಹಣದಿಂದ ಸಂಕ್ರಾಂತಿ ಹಬ್ಬದ ಉಡುಗೊರೆಯಾಗಿ ಒಂದು ಸಾವಿರ ರು. ಮತ್ತು ನೀರಿನ ಕ್ಯಾನ್‌ ವಿತರಿಸಿ ಮಾತನಾಡಿದ್ದಾರೆ.

ಸರ್ಕಾರಿ ಜಾಗದಲ್ಲಿದ್ದ ಅಕ್ರಮ ಮನೆಗಳು ನೆಲಸಮ..!

ಅವರು ಎರಡೂ ರೈತ ಆಸಕ್ತ ಗುಂಪುಗಳು ಶಿಸ್ತು ಮತ್ತು ಬದ್ಧತೆಯಿಂದ ಪ್ರಗತಿಯನ್ನು ಸಾಧಿಸಿ ಹಣವನ್ನು ಉಳಿತಾಯ ಮಾಡಿದ್ದಾರೆ. ತಾವು ಉಳಿತಾಯ ಮಾಡಿರುವ ಹಣದಲ್ಲಿ ಸ್ವಲ್ಪ ಭಾಗವನ್ನು ತಮ್ಮ ಸದಸ್ಯರಿಗೆ ನೀಡುವ ಮೂಲಕ ಉತ್ತೇಜನ ನೀಡುತ್ತಿರುವುದು ಶ್ಲಾಘನೀಯ ಎಂದಿದ್ದಾರೆ.

ರೇಷ್ಮೆ ರೈತರ ಉತ್ಪಾದಕ ಕಂಪನಿಯ ಸಿಇಒ ಕೆ.ಎನ್‌.ಜನಾರ್ಧನಮೂರ್ತಿ ಮಾತನಾಡಿ, ನಗರದಲ್ಲಿರುವ ಎರಡೂ ರೈತ ಆಸಕ್ತ ಗುಂಪುಗಳು ಪ್ರತಿ ತಿಂಗಳೂ ಎರಡು ಸಸಿಗಳನ್ನು ನಡೆಸುತ್ತಾ ಬಂದಿರುವರು ಅದರಲ್ಲಿ ಸದಸ್ಯರು ತಲಾ 200 ರು. ಉಳಿತಾಯ ಮಾಡುತ್ತಾ, ಸದಸ್ಯರಿಗೆ ಸಾಲವನ್ನೂ ನೀಡುತ್ತಾ ಬಂದಿರುವರು. ಅದರಲ್ಲಿ ಬಂದ ಲಾಭಾಂಶದಲ್ಲಿ ಒಂದು ಭಾಗವನ್ನು ಸಂಕ್ರಾಂತಿಯ ಉಡುಗೊರೆಯಾಗಿ ಸದಸ್ಯರಿಗೆ ನೀಡಿದ್ದಾರೆ ಇದು ಇತರರಿಗೂ ಮಾದರಿಯಾಗಲಿ ಎಂದು ಹೇಳಿದ್ದಾರೆ. ರೈತ ಆಸಕ್ತ ಗುಂಪುಗಳ ಸದಸ್ಯರಾದ ಬಿ. ನಾರಾಯಣಸ್ವಾಮಿ, ರಾಮಕೃಷ್ಣಪ್ಪ, ವೇಣುಗೋಪಾಲ್‌, ಅನಂತ ಪದ್ಮನಾಭ್‌, ದೇವರಾಜ್‌ ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು.

click me!