Tumakuru: ರೈತರು ಆದಾಯ ದುಪ್ಪಟ್ಟು ಹೆಚ್ಚಿಸಿಕೊಳ್ಳಬೇಕು: ಸಂಸದ ಜಿ.ಎಸ್‌.ಬಸವರಾಜು

By Kannadaprabha News  |  First Published Oct 15, 2022, 7:50 PM IST

ಪ್ರಧಾನಮಂತ್ರಿ ಮೋದಿಯವರ ಆತ್ಮನಿರ್ಭರ ಭಾರತದ ಕನಸು ನನಸಾಗ ಬೇಕೆಂದರೆ ರೈತರು ಉತ್ತಮ ಬೆಳೆ ಬೆಳೆದು ಆದಾಯವನ್ನು ದುಪ್ಪಟ್ಟು ಹೆಚ್ಚಿಸಿಕೊಂಡಾಗ ಮಾತ್ರ ಸಾಧ್ಯವಾಗುತ್ತದೆ ಎಂದು ಸಂಸದ ಜಿ.ಎಸ್‌.ಬಸವರಾಜು ಅಭಿಪ್ರಾಯಪಟ್ಟರು.


ತುಮಕೂರು (ಅ.15): ಪ್ರಧಾನಮಂತ್ರಿ ಮೋದಿಯವರ ಆತ್ಮನಿರ್ಭರ ಭಾರತದ ಕನಸು ನನಸಾಗ ಬೇಕೆಂದರೆ ರೈತರು ಉತ್ತಮ ಬೆಳೆ ಬೆಳೆದು ಆದಾಯವನ್ನು ದುಪ್ಪಟ್ಟು ಹೆಚ್ಚಿಸಿಕೊಂಡಾಗ ಮಾತ್ರ ಸಾಧ್ಯವಾಗುತ್ತದೆ ಎಂದು ಸಂಸದ ಜಿ.ಎಸ್‌.ಬಸವರಾಜು ಅಭಿಪ್ರಾಯಪಟ್ಟರು. ನಗರದ ರೇಷ್ಮೆ ಕೃಷಿ ಉಪನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್‌, ರೇಷ್ಮೆ ಇಲಾಖೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಗತಿಪರ ರೇಷ್ಮೆ ಬೆಳೆಗಾರರೊಂದಿಗೆ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಕರ್ನಾಟಕ ರೇಷ್ಮೆ ಬೆಳೆಯುವಲ್ಲಿ ಅಗ್ರಗಣ್ಯ ಸ್ಥಾನ ಪಡೆದಿದೆ. ಶೇ.80 ರಷ್ಟುರೇಷ್ಮೆ ಉತ್ಪಾದನೆ ಮಾಡುತ್ತಿರುವ ರಾಜ್ಯವಾಗಿದೆ ಎಂದರು.

ರೇಷ್ಮೆ ಬೆಳೆ ಬೆಳೆಯಲು ಉತ್ತಮ ವಾತಾವರಣ ನಮ್ಮ ರಾಜ್ಯದಲ್ಲಿರುವುದರಿಂದ ಪ್ರತಿ ವರ್ಷ ರೇಷ್ಮೆ ಬೆಳೆಗಾರರು ಹೆಚ್ಚಾಗುತ್ತಿದ್ದಾರೆ. ಇದರಿಂದ ಆತ್ಮನಿರ್ಭರ ಭಾರತ್‌ ಸಾಕಾರ ಗೊಳ್ಳಲು ಸಾಧ್ಯವಾಗುತ್ತದೆ ಹೇಳಿದರು. ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಸಂಶೋಧನೆ ಮುಖಾಂತರ ರೈತರು ಯಾವ ರೀತಿ ಬೆಳೆ ಬೆಳೆಯಬಹುದು ಎಂಬುದನ್ನು ಕಂಡುಕೊಂಡಿದ್ದು, ರೇಷ್ಮೆ ಕೃಷಿಯ ಮೂಲಕ ಅತ್ಯಂತ ಸಂಪದ್ಭರಿತವಾದ ಆದಾಯ ಕೊಡುವ ಬೆಳೆಯನ್ನು ಅತಿ ಹೆಚ್ಚಾಗಿ ಬೆಳೆಯಲು ಆರಂಭಿಸಿದ್ದಾರೆ. ಇದರಿಂದ ಅವರ ಆದಾಯವೂ ಕೂಡ ಹೆಚ್ಚಲಿದೆ ಎಂದು ತಿಳಿಸಿದರು.

Tap to resize

Latest Videos

ಕನ್ನಡ ನಾಮಫಲಕ ಅಳವಡಿಸದಿದ್ದಲ್ಲಿ ಪರವಾನಗಿ ರದ್ದು

ರೇಷ್ಮೆ ಇಲಾಖೆ ಉಪನಿರ್ದೇಶಕ ಡಾ.ವೈ.ಕೆ.ಬಾಲಕೃಷ್ಣ ಮಾತನಾಡಿ, ಹಿಂದೆ ರೇಷ್ಮೆ ಬೆಳೆಗಾರರ ಸಂಖ್ಯೆ ಹೆಚ್ಚಾಗಿತ್ತು. ಅಂದು ಒಂದು ಎಕರೆಯಲ್ಲಿ ಬೆಳೆಯುತ್ತಿದ್ದ ನಮ್ಮ ಹಳೇ ತಳಿಯನ್ನು ಇಂದು 18ರಿಂದ 20 ಗುಂಟೆಯಲ್ಲಿ ಬೆಳೆಯಲಾಗುತ್ತಿದೆ. ಅಂದು 1.25 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ರಾಜ್ಯದಲ್ಲಿ ಬೆಳೆಯುತ್ತಿದ್ದ ರೇಷ್ಮೆಗೂಡನ್ನು ಇಂದು ಕೇವಲ 80 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ ಎಂದರು. ಇಡೀ ರಾಜ್ಯದಲ್ಲಿ ಬೆಳೆಯುತ್ತಿರುವ ಎಲ್ಲಾ ತಳಿಗೂಡು ಸಹ ನಮ್ಮ ಕುಣಿಗಲ್‌ ನಾಟಿಗೂಡಾಗಿದೆ. ಅದಕ್ಕೆ ಕ್ರಾಸ್‌ಮಾಡುವುದರಿಂದ ಮಿಶ್ರತಳಿ ಗೂಡಾಗಿದೆ. 

ಇಡಿ ರಾಜ್ಯದ 80 ಸಾವಿರ ಮೆಟ್ರಿಕ್‌ಟನ್‌ನಲ್ಲಿ ಶೇ.80 ಭಾಗ ಮಿಶ್ರತಳಿ, ಚೀನಾದೇಶದ ಗೂಡು ಬರದಂತೆ ನೋಡಿಕೊಳ್ಳಬೇಕೆಂದು ವಿಶ್ವಬ್ಯಾಂಕ್‌ ಹಾಗೂ ನಿಮ್ಮ ಅಂದಿನ ಹೋರಾಟದ ಫಲ ಸಕ್ಸಸ್‌ ಆಗಲಿಲ್ಲ, ಜಪಾನ್‌ನವರು ಬಂದು ತುರುವೇಕೆರೆ, ಶಿರಾ ಸೇರಿದಂತೆ ರಾಜ್ಯದ 8 ಭಾಗಗಳಲ್ಲಿ ಸಕ್ಸಸ್‌ ಮಾಡಿದ ಪರಿಣಾಮ ಒಂದು ಎಕರೆಯಲ್ಲಿ ರೈತರು 800 ರಿಂದ 1250 ಕೆಜಿ ಗೂಡು ಬೆಳೆಯುತ್ತಿದ್ದಾರೆ ಎಂದು ಹೇಳಿದರು. ಇನ್ಮುಂದೆ ಒಂದು ವರ್ಷದಲ್ಲಿ ಒಂದು ಸಾವಿರ ಜನರು ರೇಷ್ಮೆ ಬೆಳೆಯುವಂತೆ ಮಾಡುತ್ತೇವೆ. ಇದಕ್ಕೆ ಬೇಕಾದ 35 ಲಕ್ಷ ಸಸಿಯನ್ನು ರೈತರ ಬಳಿ ನರೇಗಾದಡಿ ಅರಣ್ಯ ಇಲಾಖೆಯಲ್ಲಿ ಬೆಳೆಸಿ, ಕಳೆದ ವರ್ಷ 1258 ಎಕರೆ ರೇಷ್ಮೆ ಮಾಡಿಸಿ 1001 ರೈತರು 700 ಮಂದಿ ಹೊಸಬರು 301 ಮಂದಿ ಹಳಬರ ಆಯ್ಕೆ ಮಾಡಲಾಯಿತು.

ಈ ವರ್ಷ ರಾಜ್ಯ ಸರ್ಕಾರ ಕೇವಲ 350 ಹೆಕ್ಟೇರ್‌ ಮಾತ್ರ ನಿಗಧಿ ಮಾಡಿದೆ. ನಾವು 550 ಹೆಕ್ಟೇರ್‌ ಗುರಿ ಹಾಕಿಕೊಂಡಿದ್ದು, ಈಗಾಗಲೇ ಸೆಪ್ಟೆಂಬರ್‌ 30ಕ್ಕೆ 498 ಹೆಕ್ಟೇರ್‌ ಪ್ರದೇಶದಲ್ಲಿ ರೇಷ್ಮೆಗೂಡು ಬೆಳೆಯುತ್ತಿದ್ದಾರೆ. ಈಗ ರೇಷ್ಮೆಗೂಡಿಗೆ ಉತ್ತಮ ಬೆಲæಯಿದ್ದು, ಬಹಳಷ್ಟುಮಂದಿ ಯುವಕರು ರೇಷ್ಮೆ ಬೆಳೆಯಲು ಮುಂದೆ ಬಂದಿದ್ದು, ಈ ವರ್ಷ 1000ದಿಂದ 1250 ಕುಟುಂಬಗಳು ಹೊಸ ರೇಷ್ಮೆ ಬೆಳೆಗಾರರಾಗಬೇಕೆಂಬುದೇ ನನ್ನ ಗುರಿ. ಈಗಿರುವ 10ಸಾವಿರದ ಜೊತೆಗೆ 11 ಸಾವಿರ ಮಂದಿ ರೇಷ್ಮೆ ಬೆಳೆಯುವಂತಾಗಬೇಕು ಎಂದರು.

ತಿಪಟೂರು ತಾಲೂಕು ನೊಣವಿನಕೆರೆ ರೇಷ್ಮೆ ಬೆಳೆಗಾರ ಎಸ್‌.ವಿ.ಸ್ವಾಮಿ ಮಾತನಾಡಿ, ರೇಷ್ಮೆ ಕೃಷಿ ಜೊತೆಗೆ ಹೈನುಗಾರಿಯನ್ನು ಮಾಡುತ್ತಿದ್ದು, ರೇಷ್ಮೆ ಬೆಳೆ ಬಗ್ಗೆ ಇಂದಿನ ಯುವ ರೈತರಿಗೆ ಮಾರ್ಗದರ್ಶನ ನೀಡುತ್ತಿದ್ದೇನೆ. ರೇಷ್ಮೆ ಬೆಳೆಯಲ್ಲಿ ಅತ್ಯುತ್ತಮವಾಗಿ ರೇಷ್ಮೆ ಬೆಳೆದು ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲೂ ಮೊದಲ ಬಹುಮಾನ ಪಡೆದು ಯಶಸ್ವಿ ರೇಷ್ಮೆ ಬೆಳೆಗಾರನಾಗಿದ್ದೇನೆ. ವಿಜ್ಞಾನಿಗಳು ಮತ್ತು ರೈತರ ನೇರ ಸಂಪರ್ಕ ಇರಬೇಕಾದಂತಹ ರೇಷ್ಮೆ ಇಲಾಖೆಯನ್ನು ಸ್ವತಂತ್ರ್ಯ ಇಲಾಖೆ ಮಾಡಬೇಕೆ ಹೊರತು ಕೃಷಿ ಇಲಾಖೆಯಲ್ಲಿ ವಿಲೀನಗೊಳಿಸಿದರೆ ಅನಾಹುತವಾಗಲಿದೆ. ಆದುದರಿಂದ ಯಾವುದೇ ಕಾರಣಕ್ಕೂ ವಿಲೀನಗೊಳಿಸಬಾರದು ಎಂಬುದೇ ನಮ್ಮ ಉದ್ಧೇಶ ಎಂದರು.

ತುಮಕೂರು: ಮಳೆಹಾನಿ ಪ್ರದೇಶದಲ್ಲಿ ಮೇಯರ್‌, ಉಪಮೇಯರ್‌ ಸುತ್ತಾಟ

ಇದೇ ಸಂದರ್ಭದಲ್ಲಿ ಚಂದ್ರಕಲಾ, ಹನುಮಂತರಾಯಪ್ಪ, ಕೆಂಪಣ್ಣ, ರಾಮಕೃಷ್ಣಯ್ಯ ಅವರಿಗೆ ಸಹಾಯಧನ ವಿತರಿಸಲಾಯಿತು. ಸಂವಾದ ಕಾರ್ಯಕ್ರಮದಲ್ಲಿ ಕಳ್ಳನಕೆರೆ ರೇಷ್ಮೆ ಬೆಳೆಗಾರ ಶಿವಾನಂದ, ರೇಷ್ಮೆ ಸಹಾಯಕ ನಿರ್ದೇಶಕ ಎ.ಸಿ.ನಾಗೇಂದ್ರ, ರೇಷ್ಮೆ ನಿರೀಕ್ಷಕ ಎಂ.ಎ.ಬೊಮ್ಮಯ್ಯ, ಕೊರಟಗೆರೆ ರೇಷ್ಮೆ ಸಹಾಯಕ ನಿರ್ದೇಶಕ ಮುರಳೀಧರ, ಮಧುಗಿರಿ ರೇಷ್ಮೆ ಸಹಾಯಕ ನಿರ್ದೇಶಕ ಲಕ್ಷ್ಮೀನರಸಯ್ಯ ಸೇರಿದಂತೆ ಜಿಲ್ಲೆಯ ರೇಷ್ಮೆ ಇಲಾಖೆ ಅಧಿಕಾರಿಗಳು, ರೇಷ್ಮೆ ಬೆಳೆಗಾರರು ಭಾಗವಹಿಸಿದ್ದರು.

click me!