ನಕಲಿ ದಾಖಲೆಗಳನ್ನು ಸೃಷ್ಟಿಸಿ ತಮ್ಮ ಜಮೀನುಗಳನ್ನು ಖಾತೆ ಮಾಡಿಸಿಕೊಳ್ಳುವ ವಂಚಕರಿದ್ದು, ಖಾತೆದಾರರು ತಮ್ಮ ಆಸ್ತಿಯ ಬಗ್ಗೆ ಜಾಗೃತರಾಗಿರಬೇಕೆಂದು ಶಾಸಕ ಎಂ. ಅಶ್ವಿನ್ ಕುಮಾರ್ ಕರೆ ನೀಡಿದರು.
ಟಿ. ನರಸೀಪುರ (ಅ.17): ನಕಲಿ ದಾಖಲೆಗಳನ್ನು ಸೃಷ್ಟಿಸಿ ತಮ್ಮ ಜಮೀನುಗಳನ್ನು ಖಾತೆ ಮಾಡಿಸಿಕೊಳ್ಳುವ ವಂಚಕರಿದ್ದು, ಖಾತೆದಾರರು ತಮ್ಮ ಆಸ್ತಿಯ ಬಗ್ಗೆ ಜಾಗೃತರಾಗಿರಬೇಕೆಂದು ಶಾಸಕ ಎಂ. ಅಶ್ವಿನ್ ಕುಮಾರ್ ಕರೆ ನೀಡಿದರು.
ತಾಲೂಕಿನ ದೊಡ್ಡೆಬಾಗೀಲು ಗ್ರಾಮದಲ್ಲಿ (Village) ತಾಲೂಕು ಆಡಳಿತದಿಂದ ಆಯೋಜನೆ ಮಾಡಲಾಗಿದ್ದ ಜಿಲ್ಲಾಧಿಕಾರಿಗಳ (DC) ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ದೀರ್ಘ ಕಾಲದವರೆಗೆ ಪಾಳು ಬಿದ್ದ ಜಮೀನುಗಳಿಗೆ ನಕಲಿ ಖಾತೆ ಸೃಷ್ಟಿಸಿ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿರುವ ಘಟನೆಗಳು ಅಲ್ಲಲ್ಲಿ ನಡೆದಿವೆ ಹಾಗಾಗಿ ಖಾತೆದಾರರು ತಮ್ಮ ಆಸ್ತಿಯ ಬಗ್ಗೆ ಜವಬ್ದಾರಿವಹಿಸಬೇಕು ಹಾಗೂ ತಮ್ಮ ಜಮೀನಿನ ಆರ್‌ಟಿಸಿ ಪರಿಶೀಲನೆ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ತಾಲೂಕಿಗೆ ವರ್ಗಾವಣೆಗೊಂಡು ಬಂದ ತಹಸೀಲ್ದಾರ್ ಸಿ.ಜಿ. ಗೀñಎಾ ಅವರು ಜನಪರ ಕೆಲಸ ಮಾಡುತ್ತಿದ್ದಾರೆ, ಇವರು ನಡೆಸಿದ ಪಿಂಚಣಿ ಮತ್ತು ಕಂದಾಯ ಅದಾಲತ್ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಕಂದಾಯ ಇಲಾಖೆಯಲ್ಲಿ ಜನಪರ ಕೆಲಸವನ್ನು ಹೇಗೆಲ್ಲ ಯಶಸ್ವಿಯಾಗಿ ಮಾಡಬಹುದು ಎಂದು ತಹಸೀಲ್ದಾರ್ ತೋರಿಸಿಕೊಟ್ಟಿದ್ದಾರೆ, ಇದು ನಮ್ಮ ತಾಲೂಕಿಗೆ ಹೆಮ್ಮೆಯ ವಿಷಯ ಎಂದರು.
ಖಾತೆ ಮತ್ತು ತಿದ್ದುಪಡಿಗಳಿಗೆ ಸಂಬಂಧಿಸಿದಂತೆ ಒಟ್ಟು 104 ಅರ್ಜಿಗಳು ಸಲ್ಲಿಕೆಯಾಗಿದ್ದು, 104 ಅರ್ಜಿಗಳನ್ನು ಸ್ಥಳದಲ್ಲೇ ಖಾತೆ ಮಾಡಲು ತಹಸೀಲ್ದಾರ್ ಆದೇಶ ನೀಡಿದರು. ವಿವಿಧ ಮಾಸಾಸನಕ್ಕೆ ಅರ್ಜಿ ಸಲ್ಲಿಕೆಯಾಗಿದ್ದ 30 ಅರ್ಜಿಯ ಫಲಾನುಭವಿಗಳಿಗೆ ಆದೇಶದ ಪ್ರತಿ ನೀಡಲಾಯಿತು ಹಾಗೂ ಖಾತೆ, ತಿದ್ದುಪಡಿಗೆ 72 ಹೊಸ ಅರ್ಜಿಗಳು ಸಲ್ಲಿಕೆಯಾದವು.
ಗ್ರಾಪಂ ಅಧ್ಯಕ್ಷ ಮಹದೇವಸ್ವಾಮಿ, ಜಿಪಂ ಮಾಜಿ ಸದಸ್ಯ ಎಸ್.ಎನ್. ಸಿದ್ದಾರ್ಥ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಮಹದೇವಯ್ಯ, ಗ್ರಾಪಂ ಸದಸ್ಯ ಅಶೋಕ್, ತಹಸೀಲ್ದಾರ್ ಸಿ.ಜಿ. ಗೀತಾ, ತಾಪಂ ಇಓ ಕೃಷ್ಣ, ಡಿ.ಟಿ. ಸುಬ್ರಹ್ಮಣ್ಯ, ಆರ್‌ಐ ಶಾಮ…, ಸಮಾಜ ಕಲ್ಯಾಣಾಧಿಕಾರಿ ರಾಮೇಗೌಡ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿಶ್ವನಾಥ್, ತಾಲೂಕು ಆರೋಗ್ಯಧಿಕಾರಿ ಡಾ. ರವಿಕುಮಾರ್ ಪಶು ವೈದ್ಯಾಧಿಕಾರಿ ನಿಂಗರಾಜು, ವಿಎಗಳಾದ ಶ್ರೀನಿವಾಸ ಸುನಿಲ್, ಆನಂದ್ ಇದ್ದರು.
..ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಿ
ತುಮಕೂರು
ಅರಣ್ಯ ಭೂಮಿ, ಗೋಮಾಳ, ಬಗರ್‌ಹುಕುಂ ಸಾಗುವಳಿದಾರರಿಗೆ ಕೂಡಲೇ ಹಕ್ಕು ಪತ್ರ ನೀಡಬೇಕು ಎಂದು ಎಐಕೆಕೆಎಂಎಸ್ ಜಿಲ್ಲಾ ಸಂಚಾಲಕ ಎಸ್.ಎನ್. ಸ್ವಾಮಿ ಆಗ್ರಹಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಗುತ್ತಿಗೆ ಆಧಾರದಲ್ಲಿ ಜಮೀನು ಕೊಡುವ ನೀತಿಯನ್ನು ಕೈಬಿಡಬೇಕು. ಈ ಹಿಂದೆ ಹಂಗಾಮಿ ಸಾಗುವಳಿ ಚೀಟಿ ವಿತರಿಸಿದ್ದರೂ ಸಹ ದುರಸ್‌್ತ (ಪೋಡ್) ಆಗಿರುವುದಿಲ್ಲ. ಈ ಕಾರ್ಯವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದ ಅವರು ಬಗರ್ ಹುಕುಂ ರೈತರ ಮೇಲೆ ಹಾಕಿರುವ ಎಲ್ಲಾ ಕೇಸುಗಳನ್ನು ಕೂಡಲೇ ವಾಪಸ್ ಪಡೆಯಿರಿ, ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಮೂಲಕ ರೈತರಿಗೆ ನೀಡಿರುವ ನೋಟಿಸ್ ವಾಪಸ್ ಪಡೆಯಬೇಕು ಎಂದರು.
ರಾಜ್ಯದಲ್ಲಿ ಉಂಟಾಗಿರುವ ನೈಸರ್ಗಿಕ ವಿಕೋಪದಿಂದಾದ ಹಸಿ ಬರದಿಂದ ಲಕ್ಷಾಂತರ ಹೆಕ್ಟೇರ್‌ನಲ್ಲಿ ರೈತರು ಬೆಳೆದಿದ್ದ ಫಸಲು ನಾಶವಾಗಿದೆ. ಬೆಳೆಗಾಗಿ ಮಾಡಿದ್ದ ಕೈ ಸಾಲ, ಬ್ಯಾಂಕಿನ ಸಾಲ ತೀರಿಸಲಾಗದೇ ಇನ್ನೊಂದೆಡೆ, ಶಾಲಾ, ಕಾಲೇಜಿಗೆ ಹೋಗುವ ಮಕ್ಕಳ ಶಿಕ್ಷಣ, ಆರೋಗ್ಯ, ಸಂಸಾರದ ಹಾಗೂ ಇನ್ನಿತರ ವೆಚ್ಚಗಳನ್ನು ಭರಿಸಲು ಸಾಧ್ಯವಾಗದೇ ಹತಾಶೆಯ ಬದುಕನ್ನು ಸವೆಸುತ್ತಿದ್ದಾರೆ ಎಂದರು.
ಭÜೂ ಮಂಜೂರಾತಿ ಸಮಿತಿಯನ್ನು ಕೆಲವು ಜಿಲ್ಲೆಗಳಲ್ಲಿ ರಚಿಸಿ ಕೇವಲ ಹಂಗಾಮಿ ಸ್ವಾಧೀನ ಪತ್ರ ನೀಡಿದ್ದಾರೆ. ಇದನ್ನು ಪಡೆದು ಸಾಗುವಳಿ ಮಾಡುತ್ತಿರುವ ರೈತರ ಎಲ್ಲಾ ಜಮೀನನ್ನು ಒಟ್ಟುಗೂಡಿಸಿ ಎಲ್ಲರಿಗೂ ಒಂದೇ ಸರ್ವೇ ನಂಬರ್ ನೀಡಿದ್ದಾರೆ. ಹತ್ತಾರು ವರ್ಷಗಳು ಕಳೆದರೂ ಅವರ ಜಮೀನನ್ನು ಪೋಡ್/ದುರಸ್‌್ತ ಮಾಡಿಖಾಯಂ ಹಕ್ಕು ಪತ್ರ ನೀಡಿಲ್ಲ ಎಂದಿದ್ದಾರೆ.
ಈ ಎಲ್ಲಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇದೇ 18ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಗರ್‌ಹುಕುಂ ಸಾಗುವಳಿದಾರರ ಬೃಹತ್ ಪ್ರತಿಭಟನೆ ಸಂಘಟಿಸುತ್ತಿರುವುದಾಗಿ ತಿಳಿಸಿದರು.