ಚಿತ್ರದುರ್ಗ: ಬಿಸಿಲಿನ ತಾಪದಿಂದ ಹೂವಿನ ಬೆಳೆ ರಕ್ಷಿಸಲು ಸೀರೆಗಳ ಮೊರೆ ಹೋದ ರೈತ!

By Suvarna NewsFirst Published Mar 13, 2024, 7:00 PM IST
Highlights

ಕೋಟೆನಾಡಿನಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಗಗನಕ್ಕೆ ಏರುತ್ತಿದ್ದು, ಬೆಳೆದ ಬೆಳೆಯನ್ನು ಕಾಪಾಡಿಕೊಳ್ಳಲು ರೈತರು ಮನೆಯಲ್ಲಿರುವ ಸೀರೆಗಳ ಮೊರೆ ಹೋಗ್ತಿದ್ದಾರೆ.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಮಾ.13): ಕೋಟೆನಾಡಿನಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಗಗನಕ್ಕೆ ಏರುತ್ತಿದ್ದು, ಬೆಳೆದ ಬೆಳೆಯನ್ನು ಕಾಪಾಡಿಕೊಳ್ಳಲು ರೈತರು ಮನೆಯಲ್ಲಿರುವ ಸೀರೆಗಳ ಮೊರೆ ಹೋಗ್ತಿದ್ದಾರೆ.  ಹೀಗೆ ಜಮೀನನ ಸುತ್ತಲೂ ಸೀರೆಗಳನ್ನು ಕಟ್ಟಿರೋ ರೈತ. ಮತ್ತೊಂದೆಡೆ ಬಿಸಿಲಿನಿಂದ ಯಾವುದೇ ಕಾರಣಕ್ಕೂ ಬಾಡದಿರಲಿ ಎಂದು ಮನೆಯಲ್ಲಿರೋ ಸೀರೆಗಳ ಮೊರೆ ಹೋಗಿರುವ ದೃಶ್ಯ. ಇಂತಹ ಅಪರೂಪದ ಸಂದರ್ಭಕ್ಕೆ ಸಾಕ್ಷಿಯಾಗಿದ್ದು, ಚಿತ್ರದುರ್ಗ ತಾಲ್ಲೂಕಿನ ಮದಕರಿಪುರ ಗ್ರಾಮದ ರೈತ ಮಂಜುನಾಥ್ ಜಮೀನಿನ ಬಳಿ.

ಈ ವರ್ಷ ರಾಜ್ಯದಲ್ಲಿ ಬಂದಿರುವ ಭೀಕರ ಬರಗಾಲದಿಂದ ಈಗಾಗಲೇ ಅನ್ನದಾತರಯ ಹೈರಾಣಾಗಿ ಹೋಗಿದ್ದಾರೆ. ಒಂದ್ಕಡೆ ಸೂಕ್ತ ಮಳೆ ಆಗದೇ ಕಂಗಾಲಾಗಿದ್ರೆ, ಇನ್ನೊಂದ್ ಕಡೆ ಬರದಿಂದ ಬೋರ್ ವೆಲ್ ಗಳು ಬತ್ತಿ ಹೋಗಿದ್ದು ನೀರು ಸರಿಯಾದ ಪ್ರಮಾಣದಲ್ಲಿ ಬಾರದೇ ಜಮೀನಿನಲ್ಲಿ ಬೆಳೆದಿರೋ ಬೆಳೆಗಳನ್ನು ಕಷ್ಟಪಟ್ಟು ಉಳಿಸಿಕೊಳ್ಳಲು ಹರಸಹಾಸ ಪಡ್ತಿದ್ದಾರೆ. ಅದ್ರಲ್ಲಂತೂ ಹೂವಿನ ಬೆಳೆ ಮಾರುಕಟ್ಟೆಯಲ್ಲಿ ದರ ಕುಸಿತದಿಂದ ರೈತ ನಷ್ಟಕ್ಕೆ ಒಳಗಾಗಿದ್ದಾನೆ. ಇರುವ ಅಲ್ಪ ಸ್ವಲ್ಪ ಸೇವಂತಿಗೆ, ಕನಕಾಂಬರ ಹೂವಗಳನ್ನು ಕಾಪಾಡಿಕೊಳ್ಳಲು ಜಮೀನ ಸುತ್ತಲೂ ಸೀರೆಗಳನ್ನು ಕಟ್ಟೋದ್ರಿಂದ ಬಿಸಿಲಿನ ತಾಪಮಾನವನ್ನು ತಡೆಗಟ್ಟಲು ರೈತ ನೂತನ‌ ಪ್ಲಾನ್ ರೂಪಿಸಿದ್ದು ವಿಶೇಷ ಎನಿಸಿದೆ.

ಸೊಸೆಯಾಗಿ ಆಯ್ಕೆ ಮಾಡಿದ್ದ ಮಾವ ಧೀರೂಭಾಯಿ ಮೇಲೆ ಆಕ್ರೋಶಗೊಂಡಿದ್ದ ನೀತಾ ಅಂಬಾನಿ!

ಇನ್ನೂ ಈ ಬಾರಿ ಬಿಸಿಲಿನ ತಾಪಮಾನ ಜೂನ್ ತಿಂಗಳಿಗೆ ಇರಬೇಕಾದದ್ದು, ಮಾರ್ಚ್ ತಿಂಗಳಲ್ಲಿಯೇ ಬಂದಿದೆ. ಇದ್ರಿಂದಾಗಿ ಮದಕರಿಪುರ ಭಾಗದ ರೈತರು ಹೆಚ್ಚು ಹೂವಿನ ಬೆಳೆಯನ್ನೇ ನಂಬಿಕೊಂಡು ಜೀವನ ಸಾಗಿಸ್ತಾರೆ. ಬಿಸಿಲಿನ ಬೇಗೆಯಿಂದ ಜನರು ತತ್ತರಿಸ್ತಿರೋ ರೀತಿ ಹೂವಿನ ಬೆಳೆಯೂ ಬಿಸಿಲಿಗೆ ತತ್ತರಿಸಿದ್ರೆ ರೈತ ಸಾಲ ಸೂಲ ಮಾಡಿ ಬೆಳೆದ ನಷ್ಟಕ್ಕೆ ಯಾರು ಹೊಣೆ. ಆದ್ದರಿಂದ ರೈತರು ಮನೆಯಲ್ಲಿ ಇರುವ ಬಹುತೇಕ ಸೀರೆಗಳನ್ನು ಜಮೀನಿನಲ್ಲಿ ಹೂವಿನ‌ ನಿರ್ವಹಣೆಗಾಗಿ ಕಟ್ತಿರೋದು, ಅಲ್ಪ ಸ್ವಲ್ಪ ಹಣ ಗಳಿಸುವ ನಿರೀಕ್ಷೆಯಿಂದ ಈ ರೀತಿ ಮಾಡ್ತಿದ್ದಾರೆ.

ಪ್ರತಿಭಟನೆ ಮಾಡಬೇಡಿ, ಮೋದಿಜಿ ಇಲ್ಲದೆ ನಾನಿಲ್ಲ ಇಬ್ಬರಿಗೆ ಫೋಟೋ ಟ್ಯಾಗ್ ಮಾಡಿದ ಪ್ರತಾಪ್ ಸಿಂಹ

ತೋಟಗಾರಿಕೆ ಇಕಾಖೆ ಅಧಿಕಾರಿಗಳ ಇತ್ತ ಗಮನ ಹರಿಸಿ, ರೈತರಿಗೆ ಅನುಕೂಲ ಆಗುವ ರೀತಿ ಪರಿಹಾರ ಒದಗಿಸಿದ್ರೆ ಅನುಕೂಲ ಆಗುತ್ತೆ ಅಂತಾರೆ ರೈತ ಹೋರಾಟಗಾರರು. ಒಟ್ಟಾರೆ ಹಾಕಿರುವ ಬಂಡವಾಳವಾದ್ರು ಸಿಗಲಿ ಎಂದು ರೈತರು ನೂತನ ಪ್ಲಾನ್ ಮಾಡಿದ್ದು ಅನ್ನದಾತನಿಗೆ ಇದ್ರಲ್ಲಾದ್ರು ಸಕ್ಸಸ್ ಸಿಗಲಿ, ಉತ್ತಮ ಹೂವಿನ ಬೆಳೆ ಬರಲಿ ಎಂಬುದು ಸಾರ್ವಜನಿಕರ ಹಿತಾಸಕ್ತಿಯಾಗಿದೆ..

click me!