
ದಾವಣಗೆರೆ(ಸೆ.21): ದಾವಣಗೆರೆ ಜಿಲ್ಲೆಯಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ . ಭದ್ರಾ ಜಲಾಶಯದಿಂದ ನೀರು ಹಠಾತ್ ನಿಲುಗಡೆ ಮಾಡಿದ್ದರಿಂದ ಸರ್ಕಾರದ ವಿರುದ್ಧ ದಾವಣಗೆರೆ ಜಿಲ್ಲೆಯ ರೈತರು ಸಿಡಿದೆದ್ದಿದ್ದಾರೆ. ಇಂದು ನೀರಾವರಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ನಾಳೆ ರಾಷ್ಟ್ರೀಯ ಹೆದ್ದಾರಿ ತಡೆ ಗೆ ಕರೆ ಕೊಟ್ಟಿದ್ದಾರೆ.
ದಾವಣಗೆರೆ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಭದ್ರಾ ಜಲಾಶಯದಿಂದ ಭದ್ರಾ ಬಲದಂಡೆ ಕಾಲುವೆಗೆ ಹರಿಯುವ ನೀರು ನಿಲುಗಡೆಯಾಗಿ ಎರಡು ದಿನ ಕಳೆದಿದೆ. ಇದರಿಂದ ದಾವಣಗೆರೆ ಜಿಲ್ಲೆಯ ರೈತ ಸಮೂಹ ಬೆಳೆ ಕಳೆದುಕೊಳ್ಳುವ ಆತಂಕಕ್ಕೆ ಸಿಲುಕಿದೆ. ಮಳೆಗಾಲದ ಭತ್ತದ ಬೆಳೆಗೆ ನೂರು ದಿನಗಳ ನೀರು ಬಿಡುತ್ತೇವೆಂದು ಹೇಳಿದ್ದ ಸರ್ಕಾರ ಒತ್ತಡಕ್ಕೆ ಮಣಿದು ಏಕಾಏಕಿ ತನ್ನ ನಿಲುವು ಬದಲಿಸಿದೆ. ಭದ್ರಾವತಿ ಶಿವಮೊಗ್ಗ ರೈತರು ಕಳೆದ ಎರಡು ವಾರಗಳಿಂದ ಪ್ರತಿಭಟನೆ ನಡೆಸಿದಕ್ಕೆ ಕಾಡಾ ಸಮಿತಿ ನೂರು ದಿನದಲ್ಲಿ 20 ದಿನ ಆಪ್ ಅಂಡ್ ಆನ್ ಮಾಡಲು ನಿರ್ಧರಿಸಿದೆ. ಪರಿಣಾಮ ಇಂದಿನಿಂದಲೇ ಜಲಾಶಯದಿಂದ ಹರಿಯುತ್ತಿದ್ದ 2500 ಕ್ಯೂಸಕ್ ನೀರಿಗೆ ಬ್ರೇಕ್ ಹಾಕಿದೆ. ಇದರಿಂದ ಆಕ್ರೋಶಗೊಂಡ ದಾವಣಗೆರೆ ಜಿಲ್ಲಾ ರೈತರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.
DAVANAGERE: ಕಾಲೇಜು ಹುಡ್ಗೀರನ್ನ ಪೀಡಿಸುತ್ತಿದ್ದ ರೋಡ್ ರೋಮಿಯೋಗೆ ಚಪ್ಪಲಿ ಏಟು
ಭದ್ರಾ ಜಲಾಶಯದಿಂದ ನೀರನ್ನು ಉಪಯೋಗಿಸಿಕೊಳ್ಳುವ ರೈತರಲ್ಲಿ ಶೇ 75 ರಷ್ಟು ದಾವಣಗೆರೆ ಜಿಲ್ಲೆಯಲ್ಲೇ ಇದ್ದಾರೆ. ಶೇ 75 ರಷ್ಟು ರೈತರು ಜಲಾಶಯದ ನೀರನ್ನು ಪ್ರತಿ ಎಕರೆಗೆ 35- 40 ಸಾವಿರ ಖರ್ಚು ಮಾಡಿ ಭತ್ತ ನಾಟಿ ಮಾಡಿದ್ದಾರೆ.ಎರಡು ಕಳೆ ತೆಗೆದ ಮೇಲೆ ಭದ್ರಾ ನೀರಿಲ್ಲ ಎಂಬ ನಿರ್ಧಾರ ರೈತರನ್ನು ಅಕ್ಷರಶಃ ಕೆರಳಿಸಿದೆ. ಇದರಿಂದ ಆಕ್ರೋಶಗೊಂಡ ರೈತರು ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರ ನಿಲುವು ಬದಲಿಸಲೇಬೇಕೆಂದು ಹಠ ಹಿಡಿದಿರುವ ರೈತರು ನಾಳೆ ಕುಂದವಾಡ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟಿಸಲು ನಿರ್ಧರಿಸಿದ್ದಾರೆ.
ಏನ್ ಅದೃಷ್ಟ ಗುರು ಈ ಶಿಕ್ಷಕನದು; ಇನ್ನೇನು ಸತ್ತೇಹೋದ ಅನ್ನುವಷ್ಟರಲ್ಲಿ ನಡೀತು ಪವಾಡ!
ನಾಗೇಶ್ವರ ರಾವ್ ಎಂಬ ರೈತ ಮುಖಂಡ ಸರ್ಕಾರದ ನಿರ್ಧಾರ ಖಂಡಿಸಿ ಕಳೆದ ನಾಲ್ಕು ದಿನಗಳಿಂದ ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ.ನೀರು ಬಿಡದ ಹೊರತು ನಾನು ಬಟ್ಟೆ ಧರಿಸುವುದಿಲ್ಲವೆಂದು ಎಂದು ಪ್ರತಿಜ್ನೆ ಮಾಡಿದ್ದಾರೆ. ಕಳೆದ ನಾಲ್ಕು ದಿನವು ಪೂರ್ಣ ಬಟ್ಟೆ ಧರಿಸದೇ ಹಸಿರು ಟವಲ್ ಹೊದ್ದು ಪ್ರತಿಭಟನೆ ನಡೆಸಿದ್ದಾರೆ. ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಶಿವಮೊಗ್ಗ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರ ಸಮ್ಮುಖದಲ್ಲಿ ನಡೆದ ಸಭೆ ಯಾವುದೇ ತೀರ್ಮಾನ ತೆಗೆದುಕೊಳ್ಳದೇ ಮುಂದೂಡಲಾಗಿದೆ. ಇದೀಗ ಬಲದಂಡೆಯಲ್ಲಿ ನೀರು ನಿಲುಗಡೆ ರೈತರಲ್ಲಿ ಆಕ್ರೋಶದ ಕಿಚ್ಚು ಹತ್ತಿಸಿದೆ.
ಇದೇ ಸಂದರ್ಭದಲ್ಲಿ ರೈತರು ಭದ್ರಾ ಕಾಲುವೆ ಅಕ್ಕಪಕ್ಕ ಅನಧಿಕೃತವಾಗಿ ಹಾಕಲಾಗಿರುವ ಅಕ್ರಮ ಪಂಪ್ ಸೆಟ್ ಗಳಲ್ಲಿ ಸರ್ಕಾರ ತೆರವು ಮಾಡಬೇಕು.. ಈ ಅಕ್ರಮ ಪಂಪ್ ಸೆಟ್ ಗಳಿಂದ ಬಲದಂಡೆ ಕೊನೆ ಭಾಗದ ಹಳ್ಳಿಗಳಿಗೆ ನೀರು ಬರುತ್ತಿಲ್ಲ. ಇದರ ಹಿಂದೆ ಬೆಸ್ಕಾಂ ನೀರಾವರಿ ಇಲಾಖೆಯ ಕೋಟ್ಯಾಂತರ ಲಾಭಿ ಇದೆ.. ಸರ್ಕಾರ ದಾವಣಗೆರೆ ಜಿಲ್ಲೆಯ ರೈತರನ್ನು ಕಡೆಗಣಿಸಿ ಸರಿಯಾದ ನಿಲುವು ತೆಗೆದುಕೊಳ್ಳದಿದ್ದರೆ ಪ್ರತಿಭಟನೆ ಯಾವ ಸ್ವರೂಪವನ್ನಾದ್ರು ಮುಟ್ಟಬಹುದೆಂದು ಎಚ್ಚರಿಸಿದ್ದಾರೆ.