ಬೀದರ್ ರೈತರಿಗೆ ಮತ್ತೊಂದು ಸಂಕಷ್ಟ: ಶಂಕದ ಹುಳಕ್ಕೆ ಹೈರಾಣಾದ ರೈತರು..!

Published : Jul 09, 2022, 03:30 AM IST
ಬೀದರ್ ರೈತರಿಗೆ ಮತ್ತೊಂದು ಸಂಕಷ್ಟ: ಶಂಕದ ಹುಳಕ್ಕೆ ಹೈರಾಣಾದ ರೈತರು..!

ಸಾರಾಂಶ

*  ಹೊಲದಲ್ಲಿನ ಮೊಳಕೆಗಳನ್ನ ಬುಡ ಸಮೇತ ತಿಂದು ಹಾಕುತ್ತಿರುವ ಹುಳಗಳು *  ಹುಳಗಳ ಹಾವಳಿಯಿಂದ ದಿಕ್ಕುತೋಚದಂತಾದ ರೈತರು *  ಒಳ್ಳೆಯ ಫಸಲು ಬರುವ ನಿರೀಕ್ಷೆಯಲ್ಲಿದ್ದ ರೈತರಿಗೆ ಈಗ ಮತ್ತೊಂದು ಕಂಠಕ  

ವರದಿ- ಲಿಂಗೇಶ್ ಮರಕಲೆ ಏಷ್ಯಾನೆಟ್ ಸುವರ್ಣ ನ್ಯೂಸ್, ಬೀದರ್

ಬೀದರ್(ಜು.09):  ಗಡಿ ಜಿಲ್ಲೆ ಬೀದರ್ ಅಂದ್ರೆ ಬರದ ನಾಡು ಅಂತಾರೆ ಒಮ್ಮೆ ಅತಿವೃಷ್ಠಿ ಮತ್ತೊಮ್ಮೆ ಅನಾವೃಷ್ಠಿ ಹೀಗೆ ಒಂದಿಲ್ಲ ಒಂದು ಸಂಕಷ್ಟಕ್ಕೆ ಸಿಲುಕಿ ಕಂಗಾಲಾಗುವ ರೈತರಿಗೆ ಈಗ ಮತ್ತೊಂದು ಭಾದೆ ಎದುರಾಗಿದೆ,. ಆ ಮತ್ತನೇಯ ಭಯಾನಕ ಹುಳುಗಳ ಕಾಟಕ್ಕೆ ರೈತರು ಹೈರಾಣ್ ಆಗಿ ಹೋಗಿದ್ದಾರೆ.

ಹೌದು, ಈ ಬಾರಿ ಗಡಿ ಜಿಲ್ಲೆ ಬೀದರ್‌ನಲ್ಲಿ ಮುಂಗಾರು ಮಳೆ ಸರಿಯಾಗಿ ಆಗಿದ್ದಕ್ಕೆ ರೈತರು ಬಿತ್ತನೆ ಮಾಡಿದ್ದಾರೆ.  ಸಾಲು ಸಾಲಾಗಿ ಉತ್ತಮ ಮೊಳಕೆ ಕೂಡ ಬಂದಿದೆ. ಆದರೆ ಒಳ್ಳೆಯ ಫಸಲು ಬರುವ ನಿರೀಕ್ಷೆಯಲ್ಲಿದ್ದ ರೈತರಿಗೆ ಈಗ ಮತ್ತೊಂದು ಕಂಠಕ ಎದುರಾಗಿದ್ದು ರೈತರಿಗೆ ದಿಕ್ಕುತೋಚದಂತಾಗಿದೆ. ಮಳೆಯ ಜೊತೆ ಬಂದ ಶಂಕದ ಹುಳಗಳು ಹೊಲದಲ್ಲಿ ಸಾಲುಸಾಲಾಗಿ ಬಂದ ಮೊಳಕೆಗಳನ್ನ ಸಂಪೂರ್ಣವಾಗಿ ತಿಂದು ಹಾಕುತ್ತಿವೆ. ಜಿಲ್ಲೆಯ ಭಾಲ್ಕಿ ತಾಲೂಕಿನ ಭಾತಂಬ್ರಾ, ಮರಖಲ‌, ಕಮಲನಗರ ತಾಲೂಕಿನ ಹಲವು ಗ್ರಾಮಗಳ ಜಮೀನುಗಳಲ್ಲಿ ಇಂತಹ ಭಾದೆ ಕಂಡು ಬಂದಿದ್ದು ರೈತರು ಕಂಗಾಲಾಗಿ ಹೋಗಿದ್ದಾರೆ.

BIDAR: ಹಳಿ ಮೇಲೆ ನಿಂತ ಲಾರಿಗೆ ರೈಲು ಡಿಕ್ಕಿ: ತಪ್ಪಿದ ಭಾರಿ ಅನಾಹುತ

ಈ ಶಂಖದ ಹುಳಗಳು ಬೆಳೆಯುತ್ತಿರುವ ಗಿಡದ ದೇಟ್ಟುಗಳನ್ನು ಹಾಗೂ ಕಾಂಡಗಳನ್ನು ಕೆರೆದು ತಿನ್ನುವುದು ಕಂಡುಬರುತ್ತದೆ ಕಾಂಡ ಅಲ್ಲದೆ ಎಲೆ ಕಾಂಡದ ತೊಗಟೆಗಳನ್ನು ಸಹ ತಿನ್ನುವುದು ಕಂಡುಬರುತ್ತಿದೆ ಈ ಪೀಡೆ ದಿನದಿಂದ ದಿನಕ್ಕೆ ಹೆಚ್ಚುತಲೆ ಇದ್ದು ರೈತರಿಗೆ ತಲೆನೋವಾಗಿ ಪರಿಣಮಿಸಿದೆ,.. ರಾತ್ರಿ ಬೆಳೆ ತಿನ್ನಲೂ ಪ್ರಾರಂಭಿಸಿದರೇ ಬೆಳಗಿನ ಜಾವದ ವರೆಗೂ ಬೆಳೆಗಳನ್ನು ತಿಂದು ಪುನಃ ಬೆಳಗಾದ ಕೂಡಲೇ ಅಡಗು ಸ್ಥಾನಗಳಿಗೆ ಹೋಗುತ್ತಿವೆ ಈ ಹುಳಗಳು,. ಇದರಿಂದ ದಿನೆದಿನೆ ಬೆಳೆಗಳನ್ನು ನಸಿಸಿತ್ತಿರುವುದು ಹೆಚ್ಚಾಗಿದೆ ಇತ್ತಕಡ್ಡೆ ಸರ್ಕಾರದ ಅಧಿಕಾರಿಗಳು ಯಾರು ಬಂದು ಸಹಾಯ ಮಾಡುತ್ತಿಲ್ಲ ಸಂಕಷ್ಟದಲ್ಲಿದ ರೈತರಿಗೆ ಸರ್ಕಾರ ದಿಂದ ಉಚಿತ ಔಷದಿ ನೀಡಬೇಕು ಎಂದು ರೈತರು ಅಂಗಲಾಚುತ್ತಿದ್ದಾರೆ. 
ಬರದ ನಾಡು ಬೀದರ್ ಜಿಲ್ಲೆಯ ರೈತರಿಗೆ ಪ್ರತಿವರ್ಷ ಒಂದಿಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇರುತ್ತವೆ,. ಈ ವರ್ಷ ಹೆಚ್ಚು ದರದಲ್ಲಿ ಬೀಜ ಗೊಬ್ಬರ ಹಾಕಿ‌ ಬಿತ್ತನೆ ಮಾಡಿದ ರೈತರಿಗೆ ಶಂಖದ ಹುಳುವಿನ ಕಾಟ ಶುರುವಾಗಿದೆ,. ಬೆಳೆದು ನಿಂತ ಮೊಳಕೆಗಳನ್ನ ರಾಕ್ಷಸರಂತೆ ಸಂವಾರ 

PREV
Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC