* ಮಳೆಯಿಂದ ಜನರ ಜೀವ ಕೈಯಲ್ಲಿ
* ಅಪಾಯದ ಸ್ಥಿತಿಯಲ್ಲೇ ಮೂರು ಕುಟುಂಬಗಳು ವಾಸ
* ಪರ್ಯಾಯ ಜಾಗ ಗುರುತು ಮಾಡದ ಗ್ರಾ.ಪಂ
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಜು.09): ಮುಂಗಾರು ಮಳೆ ಅರ್ಭಟಕ್ಕೆ ಮಲೆನಾಡಿನ ಗ್ರಾಮಗಳು ತತ್ತರಿಸಿ ಹೋಗಿದೆ. ಮಳೆಯಿಂದ ಗುಡ್ಡಕುಸಿತ, ಮನೆ ಕುಸಿತ ಉಂಟಾಗುತ್ತಿದೆ. ಮಳೆ ಅಬ್ಬರದಿಂದ ಮಲೆನಾಡಿನ ಕೊಪ್ಪ ತಾಲ್ಲೂಕಿನ ಗುಡ್ಡೆ ತೋಟದಲ್ಲಿ ಇರುವ ಜನರ ಜೀವವನ್ನು ಕೈಯಲ್ಲಿ ಜೀವ ಹಿಡಿದು ಜೀವನ ನಡೆಸುತ್ತಿದ್ದಾರೆ.ಜಿಲ್ಲಾಡಳಿತ ಈ ಕುಟುಂಬಗಳಿಗೆ ಬದಲಿ ಜಾಗದ ಭರವಸೆಯನ್ನು ಕಳೆದ ಮೂರು ವರ್ಷಗಳ ಹಿಂದಯೇ ನೀಡಿತ್ತು. ಆ ಭರವಸೆಯಾಗಿಯೇ ಉಳಿದ್ದು ಜೀವ ಭಯದಲ್ಲಿ ಮಲೆನಾಡಿನ ಆ ಕುಟುಂಬಗಳು ವಾಸ ಮಾಡುತ್ತಿವೆ.
undefined
ಮಳೆ ಅರ್ಭಟ : ಅಪಾಯದ ಸ್ಥಳದಲ್ಲಿ ಕುಟುಂಬಗಳ ವಾಸ
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಗುಡ್ಡೆತೋಟದ ಗ್ರಾಮದಲ್ಲಿ ದೊಡ್ಡ ಅನಾಹುತ ನಡೆಯುವತನಕ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೇತುಕೊಳ್ಳುವುದಿಲ್ಲ. ಮೂರು ಬಡ ಕುಟುಂಬಗಳು ಅಪಾಯದ ಸ್ಥಿತಿಯಲ್ಲಿ ವಾಸ ಮಾಡುತ್ತಿವೆ.ಪರಿಸ್ಥಿತಿಯ ಮಾಹಿತಿ ಇದ್ದರೂ ಜಿಲ್ಲಾಡಳಿತ, ಜನಪ್ರತಿನಿಧಿಗಳು ದಿವ್ಯ ನಿರ್ಲಕ್ಷ್ಯವನ್ನು ಅನುಸರಿಸುತ್ತಿದ್ದಾರೆ. ಹೌದು ಮನೆ ಮುಂಭಾಗದಲ್ಲೇ ಭೂ ಕುಸಿತವಾಗಿದ್ದು ಯಾವಾಗ ಗುಡ್ಡ ಕುಸಿತವಾಗುತ್ತೋ ಎನ್ನುವ ಆತಂಕ , ಜೀವ ಭಯದಲ್ಲಿ ಆ ಕುಟುಂಬಗಳ ಶಿಥಿಲಾವಸ್ಥೆಯಲ್ಲಿರುವ ಮನೆಗಳೇ ವಾಸ ಮಾಡುತ್ತಿವೆ. ಗುಡ್ಡೆತೋಟದಲ್ಲಿ 17 ಕುಟುಂಬಗಳು ವಾಸ ಮಾಡುತ್ತಿವೆ... ಹಲವು ದಶಕಗಳಿಂದ ಇಲ್ಲಿ ಚಂದದೊಂದು ಮನೆಕಟ್ಟಿಕೊಂಡು ಜೀವನ ಮಾಡುತ್ತಿದ್ದರು ಇಲ್ಲಿನ ನಿವಾಸಿಗಳು.ಆದ್ರೆ ಕಳೆದ ಎರಡು, ಮೂರು ವರ್ಷಗಳಿಂದ ಮಳೆಗಾಲದಲ್ಲಿ ಸುರಿಯುವಂತಹ ಮಹಾಮಳೆಗೆ ಇಲ್ಲಿನ ಜನರು ತತ್ತರಿಸಿ ಹೋಗಿದ್ದಾರೆ. ಮಹಾಮಳೆಗೆ ಗುಡ್ಡ ಕುಸಿತ ಹೆಚ್ಚಾಗುತ್ತಿದೆ. 2019ರಲ್ಲೇ ಸ್ಥಳಕ್ಕೆ ಭೇಟಿ ನೀಡಿದ ಅಂದಿನ ಜಿಲ್ಲಾಧಿಕಾರಿಗಳು ವಾಸಕ್ಕೆ ಯೋಗ್ಯವಾದ ಸ್ಥಳವಲ್ಲ ಎಂದು ಜನರನ್ನು ಬೇರೆಡೆಗೆ ಸ್ಥಳಾಂತರ ಮಾಡಿದ್ರು. 13 ಕುಟುಂಬಗಳಿಗೆ ಜಿಲ್ಲಾಡಳಿತ ಸರ್ಕಾರದಿಂದ ನೀಡುವ ಬಾಡಿಗೆ ಹಣವನ್ನು ಕೆಲ ತಿಂಗಳು ನೀಡಿ ಕೈತೊಳೆದುಕೊಂಡಿತು. ಅಲ್ಲದೆ ಎರಡು ಕುಟುಂಬಗಳು ಇಂದಿಗೂ ಗ್ರಾಮಪಂಚಾಯಿತಿಯ ನೌಕರ ಭವನದಲ್ಲೇ ವಾಸ್ತವ್ಯ ಹೂಡಿವೆ. ಕಳೆದ ಮೂರುವರೆ ವರ್ಷಗಳಿಂದಲೂ ಅಧಿಕಾರಿಗಳು ಇವರಿಗೆ ಪರ್ಯಾಯ ಜಾಗವನ್ನು ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ.
ಚಿಕ್ಕಮಗಳೂರು: ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿರುವ ತೀರ್ಥಕೆರೆ ಜಲಪಾತ
ಪರ್ಯಾಯ ಜಾಗಕ್ಕೆ ಸೆಕ್ಷನ್ 4 ಎನ್ನುವ ನೆಪ
ಭೂ ಕುಸಿತವಾಗಿರುವ ಅಪಾಯದ ಸ್ಥಿತಿಯಲ್ಲೇ 13 ಕುಟುಂಗಳು ವಾಸ್ತವ್ಯ ಹೂಡಿವೆ..ಅದರಲ್ಲೂ ಮೂರು ಕುಟುಂಬಗಳು ಪರಿಸ್ಥಿತಿ ನಿಜಕ್ಕೂ ಶೋಚನೀಯ ಎನ್ನುವಂತಿದೆ.ನೆತ್ತಿಯ ಮೇಲೆ ಯುಮ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದ್ದು ಯಾವಾಗ ಅಪಾಯ ಎದುರಾಗುತ್ತೋ ಎನ್ನುವ ಭಯ ಆವರಿಸಿದೆ. ಆ ಮೂರು ಕುಟುಂಬಗಳು ರಸ್ತೆಯ ಮೇಲ್ಬಾಗದಲ್ಲೇ ವಾಸ ಮಾಡುತ್ತಿದ್ದು ಈಗಾಗಲೇ ನಾಗೇಶ್ ಎನ್ನುವ ಮನೆ ಮುಂಭಾಗದಲ್ಲಿ ಭೂ ಕುಸಿತ ಉಂಟಾಗಿದೆ. ಇದರ ನಡುವೆಯೇ ಮೂರು ಕುಟುಂಬಗಳು ಜೀವ ಭಯದಲ್ಲೇ ವಾಸ ಮಾಡುತ್ತಿವೆ. ಈ ಪರಿಸ್ಥಿತಿ ಬಗ್ಗೆ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಹೇಳುವುದೇ ಬೇರೆ ಈಗಾಗಲೇ ನಿವೇಶನವನ್ನು ಗುರುತಿಸುವ ಜಾಗದ ಪ್ರಕ್ರಿಯೆ ಪೂರ್ಣಗೊಂಡಿದೆ. ಆದ್ರೆ ಸೆಕ್ಷನ್4 ಎನ್ನುವ ಕಾರಣವನ್ನು ನೀಡಿ
ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿಪಡಿಸುತ್ತಿದ್ದಾರೆ ಎನ್ನುವ ನೆಪವನ್ನು ಹೇಳುತ್ತಿದ್ದಾರೆ.ಇದರಿಂದ ಇಲ್ಲಿನ ನಿವಾಸಿಗಳಿಗೆ ಯಾವಾಗ ಗುಡ್ಡ ಕುಸಿಯುವುದು ಅನ್ನೋ ಭಯ ಆವರಿಸಿದೆ, ಮೂರು ವರ್ಷದಿಂದ ಸ್ಥಳಾಂತರ ಮಾಡಿಲ್ಲ, ಬದಲಿ ಜಾಗವನ್ನು ನೀಡುತ್ತಿಲ್ಲ ಎಂದು ಸ್ಥಳೀಯರಾದ ನೀಲಾ ಆಕ್ರೋಶವನ್ನು ಹೊರಹಾಕಿದ್ದಾರೆ.
ಜಿಲ್ಲಾಡಳಿತ, ಜನಪ್ರತಿನಿಧಿಗಳು ಗಾಡ ನಿದ್ದೆಯಲ್ಲಿ
ಸಣ್ಣ ಸಣ್ಣ ಮಕ್ಕಳದೊಂದಿಗೆ ಆ ಕುಟುಂಬಗಳು ವಾಸ ಮಾಡುತ್ತಿವೆ.ಮಳೆ ಅರ್ಭಟವೂ ಜೋರಾಗಿದ್ದು ವಾಸ ಸ್ಥಾನ ಎಲ್ಲಿ ಎಂಬ ಪ್ರಶ್ನೆ ಇದೀಗ ಆ ಕುಟುಂಬಗಳಿಗೆ ಎದುರಾಗಿದೆ.ಅನಾಹುತ ನಡೆದಾಗ ಎಚ್ಚೇತುಕೊಳ್ಳುವ ಜಿಲ್ಲಾಡಳಿತ. ಇದೀಗ ಗಾಡ ನಿದ್ದೆಗೆ ಜಾರಿದ್ದು ಈ ಕುಟುಂಬಗಳಿಗೆ ಬದಲಿ ಜಾಗದ ಜೊತೆಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವ ನಿಟ್ಟಿನಲ್ಲಿ ಗಮನಹರಿಸಬೇಕಾಗಿದೆ.