ಕೆರೂರನಲ್ಲಿ ಗುಂಪು ಘರ್ಷಣೆ: ಜು. 11 ರಂದು ಬಾಗಲಕೋಟೆ ಬಂದ್ ಕರೆ ನೀಡಿದ ಜಗದೀಶ ಕಾರಂತ

By Girish Goudar  |  First Published Jul 9, 2022, 3:00 AM IST

*  ಬಾಗಲಕೋಟೆಯಲ್ಲಿ ನಡೆದ ಹಿಂದೂ ಜಾಗರಣ ವೇದಿಕೆ ಸಭೆ
*  ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲೂ ಪ್ರತಿಭಟನೆ, ಬಂದ್ ಕರೆಗೆ ನಿರ್ಧಾರ 
*  ಭವಿಷ್ಯದಲ್ಲಿ ಬದುಕಬೇಕಾದರೆ ಹಿಂದೂ ಸಮಾಜದ ಜಾಗೃತಿ ಅತ್ಯಗತ್ಯ 


ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ 

ಬಾಗಲಕೋಟೆ(ಜು.09):  ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ ಪಟ್ಟಣದಲ್ಲಿ ನಡೆದ ಗುಂಪು ಘರ್ಷಣೆಯ ಹಿನ್ನೆಲೆಯಲ್ಲಿ ನಿನ್ನೆ(ಶುಕ್ರವಾರ) ಬಾಗಲಕೋಟೆಯಲ್ಲಿ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಮಟ್ಟದ ಸಭೆಯನ್ನು ಆಯೋಜಿಸಿತ್ತು. ಹಿಂದೂ ಜಾಗರಣ ವೇದಿಕೆಯ ಪ್ರಮುಖ ಜಗದೀಶ ಕಾರಂತ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆ ವಿವಿದೆಡೆಯಿಂದ ಹಿಂದೂ ಜಾಗರಣ ವೇದಿಕೆ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.  ಹಳೇ ಬಾಗಲಕೋಟೆ ಪಟ್ಟಣದ ಚರಂತಿಮಠ ಶಿವಾನುಭವ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಕೆರೂರ ಘಟನೆ ಖಂಡಿಸಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.

Tap to resize

Latest Videos

undefined

ಜುಲೈ 11ರಂದು ಬಾಗಲಕೋಟೆ ಬಂದ್ ಕರೆಗೆ ನಿರ್ಧಾರ

ಕೆರೂರ ಪಟ್ಟಣದಲ್ಲಿ ನಡೆದ ಗುಂಪು ಘರ್ಷಣೆ ಬಗ್ಗೆ ಚರ್ಚೆ ನಡೆಸಿದ ಹಿಂದೂ ಜಾಗರಣ ವೇದಿಕೆ ಸಭೆಯಲ್ಲಿ ಕೆಲವು ನಿರ್ಣಯ ಕೈಗೊಳ್ಳಲಾಯಿತು. ಇನ್ನು ಸಭೆಯ ನಿರ್ಣಯದಂತೆ ಜು. 11ರ ಸೋಮವಾರದಂದು ಬಾಗಲಕೋಟೆ ಬಂದ್ ಕರೆ ನೀಡಲು ನಿರ್ಧರಿಸಲಾಯಿತು. ಅಂದು ಜಿಲ್ಲೆಯ ಬಾದಾಮಿ, ಹುನಗುಂದ, ಬೀಳಗಿ, ಮುಧೋಳ, ಇಲಕಲ್, ಗುಳೇದಗುಡ್ಡ, ರಬಕವಿ ಬನಹಟ್ಟಿ ತಾಲೂಕು ಕೇಂದ್ರಗಳಲ್ಲಿಯೂ ಬಂದ್ ಕರೆ ನೀಡಲು ನಿರ್ಧರಿಸಲಾಯಿತು. ಆದರೆ ಜಮಖಂಡಿಯಲ್ಲಿ ಮಾತ್ರ ಜುಲೈ 12ರಂದು ಬಂದ್ ಕರೆ ನೀಡಲು ನಿರ್ಧಾರ ಮಾಡಲಾಯಿತು. ಈ ಮೂಲಕ ಒಗ್ಗಟ್ಟು ಪ್ರದಶ೯ನ ಮಾಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮವಾಗಬೇಕೆಂದು ಆಗ್ರಹಿಸಲು ನಿರ್ಧರಿಸಲಾಯಿತು.
ಕೆರೂರ ಗಲಾಟೆ ಪ್ರಕರಣದಲ್ಲಿ ಪೋಲಿಸರು ದಿಕ್ಕು ತಪ್ಪಿಸುತ್ತಿದ್ದಾರೆ ಅಂತ ಹೇಳಿದ್ದಾರೆ. 

ಬಾಗಲಕೋಟೆ: ಎರಡು ಅನ್ಯಕೋಮಿನ ಗುಂಪುಗಳ ಮಧ್ಯೆ ಗಲಾಟೆ, ಅಂಗಡಿಗಳಿಗೆ ಬೆಂಕಿ , ಸ್ಥಳದಲ್ಲಿ ಉದ್ವಿಘ್ನ ಪರಿಸ್ಥಿತಿ

ಭವಿಷ್ಯದಲ್ಲಿ ಬದುಕಬೇಕಾದರೆ ಹಿಂದೂ ಸಮಾಜದ ಜಾಗೃತಿ ಅತ್ಯಗತ್ಯ...ಜಗದೀಶ ಕಾರಂತ

ಕೆರೂರು ಪಟ್ಟಣದಲ್ಲಿ ನಡೆದ ಘರ್ಷಣೆಯಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಗೆ ಚಾಕು ಇರಿಯಲಾಗಿದೆ. ಇದರಿಂದ ಅರುಣ ಕಟ್ಟಿಮನಿ,ಲಕ್ಷ್ಮಣ ಕಟ್ಟಿಮನಿ,ಯಮನೂರು ಮತ್ತು ಗೋಪಾಲ ದಾಸ್ಮನಿ ಅವರು ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಂದ ಮಾಹಿತಿಯನ್ನ ಪಡೆದಿದ್ದೇನೆ. ಆದರೆ  ಇದು ವೈಯಕ್ತಿಕ ದ್ವೇಷವಲ್ಲ. ಪೊಲೀಸರು ವೈಯಕ್ತಿಕ ದ್ವೇಷ ಅಂತ ಹೇಳಿದಾರೆ. ಸಿಎಮ್ ಬೊಮ್ಮಾಯಿ ಅವರು ಪೊಲೀಸರ ವರದಿ ಪ್ರಕಾರ ವೈಯಕ್ತಿಕ ದ್ವೇಷ ಅಂತ ಹೇಳಿದಾರೆ. ಇದು ವೈಯಕ್ತಿಕ ದ್ವೇಷವಲ್ಲ. ಇದು ಹಿಂದುಗಳ‌ ಮೇಲೆ ನಡೆದ ದಬ್ಬಾಳಿಕೆ ಆಗಿದೆ, ಈ ಘಟನೆ ಹಿಂದೆ ಕೆರೂರ ಪೊಲೀಸ್ ಠಾಣೆಯ  ಪಿಎಸ್ ಐ ಹಾಗೂ ಐವರು ಪೊಲೀಸರ ಕೈವಾಡವಿದೆ. ಈ ಮಧ್ಯೆ ಐದು ಜನ ಪೊಲೀಸರು ಸ್ಥಳದಲ್ಲೇ ಇದ್ದರೂ ಸಹ ಅಂದು ಕೇರ್‌ಮಾಡಿಲ್ಲ. ಮೇಲಾಗಿ ಸುಮೊಟೊ ಕೇಸ್ ಹಾಕಿದಾರೆ ಆದರೆ 307 ಸೆಕ್ಷನ್ ಹಾಕಿಲ್ಲ. ಪೊಲೀಸರು ಇಂತಹ  ಕೆಲಸ ಮಾಡೋದಾ? ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ದೇಶದಲ್ಲಿ ಕನ್ಹಯ್ಯಲಾಲ್ ,ರುದ್ರೇಶ್,ಶರತ್ ಮಡಿವಾಳರಂತಹ ಇನ್ನೆಷ್ಟು ಜನರ ಹಿಂದೂಗಳ ಹತ್ಯೆಯಾಗಬೇಕು ಎಂದು ಆಕ್ರೋಶ ಹೊರ ಹಾಕಿದರು.

ಆಸ್ಪತ್ರೆಗೆ ಸಚಿವ ಶ್ರೀರಾಮುಲು ಭೇಟಿ ,ಗಾಯಾಳುಗಳ ಸಂತೈಸಿ ಚೆಕ್ ವಿತರಿಸಿದ ಸಚಿವ ರಾಮುಲು

ಕೆರೂರ ಗಲಾಟೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರನ್ನ ಭೇಟಿಗಾಗಿ ಸಚಿವ ಶ್ರೀರಾಮುಲು ನಗರದ ಕೆರೂಡಿ ಆಸ್ಪತ್ರೆಗೆ ಭೇಟಿ ನೀಡಿದರು. ಅಲ್ಲದೆ ಗಾಯಗೊಂಡಿದ್ದ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿ ಅರುಣ ಕಟ್ಟಿಮನಿ, ಲಕ್ಷ್ಮಣ ಕಟ್ಟಿಮನಿ, ಯಮನೂರು ಚುಂಗಿನ ಅವರನ್ನು ಭೇಟಿ ಮಾಡಿ ಘಟನೆ ಬಗ್ಗೆ ಮಾಹಿತಿ ಪಡೆದರು, ಅಲ್ಲದೆ ವೈದ್ಯರಿಂದ ಗಾಯಾಳುಗಳ ಆರೋಗ್ಯ ಸ್ಥಿತಿಗತಿ ತಿಳಿದರು. ನಂತರ  ಗಾಯಗೊಂಡವರಿಗೆ ಸಕಾ೯ರದ ಸಮಾಜ ಕಲ್ಯಾಣ ಇಲಾಖೆಯಿಂದ ತಲಾ 50 ಸಾವಿರ ಧನಸಹಾಯ ಚೆಕ್  ನೀಡಿದರು. ನಂತರ ಮಿರ್ಜಿ ಆಸ್ಪತ್ರೆಗೆ ತೆರಳಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಗೋಪಾಲ ದಾಸಮನಿ ಅವರ ಯೋಗಕ್ಷೇಮ ವಿಚಾರಿಸಿದರು.

ನಂತರ ಮಾತನಾಡಿದ ಅವರು, ಕೆರೂರು ಗುಂಪು ಗಲಾಟೆ ಪ್ರಕರಣ ವಿಚಾರವಾಗಿ ಪ್ರತಿಕ್ರಿಯಿಸಿ, ಘಟನೆಯಲ್ಲಿ ಗಾಯಾಳುಗಳು ಉಳಿದಿರುವುದೇ ಹೆಚ್ಚು. ದೇವರ ಆಶೀರ್ವಾದದಿಂದ ಉಳಿದಿದ್ದಾರೆ. ಅದೇ ಪೆಟ್ಟು ಬೇರೆಯವರಿಗೆ ಬಿದ್ದಿದ್ರೆ ಉಳಿತಿರಲಿಲ್ಲ. ಹೋರಾಟ ಮಾಡುವ ವ್ಯಕ್ತಿಗಳ ಮೇಲೆ ಈ ರೀತಿ ಹಲ್ಲೆ ನಡೆದ್ರೆ ಕುಗ್ಗಬಹುದು ಅಂತಾ ಅನ್ಕೊಂಡಿರಬಹುದು. ಆದ್ರೆ ನಾವೆಲ್ಲರೂ ಕೂಡಾ ಗಾಯಾಳುಗಳ ಹಿಂದೆ ಇರ್ತೀವಿ. ನಮ್ಮ ಬಿಜೆಪಿ ಕೂಡಾ ಅವರ ಹಿಂದೆ ಇರುತ್ತದೆ. ಬಿಜೆಪಿ ಕಾರ್ಯಕರ್ತರು, ಸಂಘಟಕರು ಕುಗ್ಗುವಂತಹ ವ್ಯಕ್ತಿಗಳಲ್ಲ. ಗಾಯಾಳುಗಳಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೀನಿ. ಸರ್ಕಾರದಿಂದ ಕೊಡಬೇಕಾದ ಪರಿಹಾರವನ್ನು ಕೊಟ್ಟಿದ್ದೇನೆ. ಗಾಯಾಳುಗಳಿಗೆ ಧೈರ್ಯ ನೀಡುವ ಕೆಲಸ ಮಾಡಿದ್ದೇನೆ. ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಿ, ಈ ರೀತಿಯ ಕೃತ್ಯಗಳು ಮರುಕಳಿಸದಂತೆ ನೋಡಿಕೊಳ್ಳಬೇಕೆಂದು, ಪೊಲೀಸರಿಗೆ ಆದೇಶವನ್ನು ಕೂಡಾ ನಾನು ಮಾಡುತ್ತೇವೆ ಎಂದ ರಾಮುಲು ಹೇಳಿದರು.

Bagalkot: ಕೆರೂರ ಪಟ್ಟಣ ಗಲಾಟೆಗೆ ಹಳೇ ದ್ವೇಷ ಹಾಗೂ ಯುವತಿಯರನ್ನು ಚುಡಾಯಿಸಿದ್ದೇ ಮೂಲ ಕಾರಣ!

ಕುಳಗೇರಿ ಕ್ರಾಸ್ ಹೊರವಲಯದ ಡಾಬಾದಲ್ಲಿ  ಕಿಡಿಗೇಡಿಗೇಡಿಗಳಿಂದ ಮೂವರ ಮೇಲೆ ಹಲ್ಲೆ, ಜಿಲ್ಲಾಸ್ಪತ್ರೆಗೆ ದಾಖಲು

ಕೆರೂರು ಪಟ್ಟಣದಲ್ಲಿ ನಡೆದ ಗಲಾಟೆ ಪ್ರಕರಣವು ಸ್ವಲ್ಪ ತಿಳಿಯಾಗುತ್ತಿರುವ ಬೆನ್ನಲ್ಲೆ ಕುಳಗೇರಿ ಕ್ರಾಸ್ ಬಳಿರುವ ಡಾಬಾ ವೊಂದರಲ್ಲಿ ಕೆಲ ಕಿಡಿಗೇಡಿಗಳು ದಾಳಿ ಮಾಡಿ, ಮೂವರ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಂಡ ಗಾಯಾಳುಗಳನ್ನು ತಕ್ಷಣ ಅಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕೆರೂರ ಮೂಲದ ಮಳಗಲಿ ಡಾಬಾಕ್ಕೆ ಆಗಮಿಸಿದ ಕೆಲವರಿಂದ ಹಲ್ಲೆ ನಡೆಸಿದ ಪರಿಣಾಮ,

ರಾಜೇಸಾಬ, ಹನೀಫ ಮತ್ತು ಮಲೀಕ್ ಗಾಯಗೊಂಡಿದ್ದಾರೆ. ಇನ್ನು ಗಾಯಗೊಂಡ ಮೂವರಿಗೆ ಅಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತದೆ. ಇನ್ನು ಘಟನೆ ಬೆನ್ನಲ್ಲೆ ಸ್ಥಳಕ್ಕೆ ಡಿವೈಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಡಾಬಾ ಬಳಿ ಹೆಚ್ಚುವರಿ ಪೋಲಿಸ ಭದ್ರತೆ ಏರ್ಪಡಿಸಲಾಗಿದೆ. ಬಾಗಲಕೋಟೆ ಎಸ್ಪಿ ಜಯಪ್ರಕಾಶ್ ಈ ಬಗ್ಗೆ ಪ್ರತಿಕ್ರಿಯೆ ನೀಡಿ,ಘಟನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ, ತಪ್ಪಿತಸ್ಥರನ್ನ ಆದಷ್ಟು ಬೇಗ ಬಂಧಿಸುತ್ತೇವೆ ಎಂದು ತಿಳಿಸಿದ್ದಾರೆ.
 

click me!