ವಿಜಯಪುರ ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರು ಕಂಗಾಲಾಗಿದ್ದರು. ಹೊಲದಲ್ಲಿ ಬೆಳೆದು ನಿಂತಿದ್ದ ಬೆಳೆಗಳು ಮಳೆ ಇಲ್ಲದೆ ಒಣಗಿ ಹೋಗಿದ್ದವು. ಈ ನಡುವೆ ರೈತರು ಮಳೆಗಾಗಿ ಮೊರೆ ಇಡುತ್ತಿದ್ದರು. ಆದ್ರೆ ಜುಲೈ ತಿಂಗಳಾರ್ಧದಲ್ಲಿ ಶುರುವಾಗ ಜಿಟಿಜಿಟಿ ಮಳೆ ನಿರಂತರವಾಗಿ ಸುರಿದಿದೆ. ಅಲ್ಲದೆ ಆಗಾಗ್ಗ ಜೋರಾದ ಮಳೆಯು ಸುರಿದಿದೆ. ಈ ನಡುವೆ ನಿರಂತರ ಜಿಟಿಜಿಟಿ ಮಳೆ ಹಾಗೂ ಹವಾಮಾನದಲ್ಲಾದ ಭಾರಿ ಬದಲಾವಣೆಯಿಂದ ದಾಳಿಂಬೆ ಬೆಳೆಗಾರರು ಕಂಗಾಲಾಗಿದ್ದಾರೆ.
- ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ(ಆ.01): ವಿಜಯಪುರ ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದ ನಿರಂತರ ಮಳೆ ಸುರಿದಿದೆ. ಈಗಲೂ ಜಿಟಿಜಿಟಿ ಮಳೆ ಮುಂದುವರೆದಿದೆ. ನಿರಂತರ ಮಳೆಯಿಂದಾಗಿ ದ್ರಾಕ್ಷಿ ಹಾಗೂ ದಾಳಿಂಬೆ ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ. ಕೆಲವೆಡೆ ದಾಳಿಂಬೆ ದುಂಡಾಣು ರೋಗ ಕಾಣಿಸಿಕೊಂಡಿದ್ದು ದಾಳಿಂಬೆ ಬೆಳೆಗಾರರು ಕಂಗಾಲಾಗಿದ್ದಾರೆ..
ದಾಳಿಂಬೆಗೆ ಒಕ್ಕರಿಸಿದ ಅಂಗಮಾರಿ-ದುಂಡಾಣು..!
ವಿಜಯಪುರ ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರು ಕಂಗಾಲಾಗಿದ್ದರು. ಹೊಲದಲ್ಲಿ ಬೆಳೆದು ನಿಂತಿದ್ದ ಬೆಳೆಗಳು ಮಳೆ ಇಲ್ಲದೆ ಒಣಗಿ ಹೋಗಿದ್ದವು. ಈ ನಡುವೆ ರೈತರು ಮಳೆಗಾಗಿ ಮೊರೆ ಇಡುತ್ತಿದ್ದರು. ಆದ್ರೆ ಜುಲೈ ತಿಂಗಳಾರ್ಧದಲ್ಲಿ ಶುರುವಾಗ ಜಿಟಿಜಿಟಿ ಮಳೆ ನಿರಂತರವಾಗಿ ಸುರಿದಿದೆ. ಅಲ್ಲದೆ ಆಗಾಗ್ಗ ಜೋರಾದ ಮಳೆಯು ಸುರಿದಿದೆ. ಈ ನಡುವೆ ನಿರಂತರ ಜಿಟಿಜಿಟಿ ಮಳೆ ಹಾಗೂ ಹವಾಮಾನದಲ್ಲಾದ ಭಾರಿ ಬದಲಾವಣೆಯಿಂದ ದಾಳಿಂಬೆ ಬೆಳೆಗಾರರು ಕಂಗಾಲಾಗಿದ್ದಾರೆ. ಇನ್ನೇನು ಫಸಲು ಕೈಗೆ ಬಂತು ಅನ್ನೋವಾಗಲೇ ಕೆಲವೆಡೆ ದಾಳಿಂಬೆಗೆ ದುಂಡಾಣು ರೋಗ ಕಾಣಿಸಿಕೊಂಡಿದ್ದು ರೈತರು ಆತಂಕದಲ್ಲಿದ್ದಾರೆ.
Vijayapura: ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯ 11.94 ಲಕ್ಷ ಪಡಿತರ ಸದಸ್ಯರಿಗೆ ಹಣ ಸಂದಾಯ!
ಜಂಬಗಿ-ನಾಗಠಾಣದಲ್ಲಿ ಅಂಗಮಾರಿ ದಾಳಿ..!
ಜಿಲ್ಲೆಯ ಜಂಬಗಿ, ನಾಗಠಾಣ, ಅಥರ್ಗ ಸೇರಿದಂತೆ ಆ ಭಾಗದಲ್ಲಿ ಈಗಾಗಲೇ ದಾಳಿಂಬೆಗೆ ರೋಗ ಆವರಿಸಿಕೊಂಡಿದೆ. ದಾಳಿಂಬೆಗೆ ಮಾರಕ ರೋಗ ಎನ್ನಲಾದ ಅಂಗಮಾರಿ ದೊಡ್ಡ ಮಟ್ಟದಲ್ಲಿ ದಾಳಿ ಇಟ್ಟಿದೆ. ಇದರಿಂದ ದಾಳಿಂಬೆ ಬೆಳೆದು ಫಸಲಿನ ನಿರೀಕ್ಷೆಯಲ್ಲಿದ್ದ ಬೆಳೆಗಾರರು ಕಂಗಾಲಾಗಿದ್ದಾರೆ. ಅನೇಕ ಜಮೀನುಗಳಲ್ಲಿ ಶೇ.90ರಷ್ಟು ಹಣ್ಣು ಸಂಪೂರ್ಣ ಹಾಳಾಗಿದೆ. ಫಸಲು ಬಂದಿದ್ದ ದಾಳಿಂಬೆ ಬಣ್ಣ ಕಪ್ಪು ಬಣ್ಣಕ್ಕೆ ತಿರುಗಿದ್ದು ಗಿಡದಿಂದ ಉದುರಿ ಬೀಳುತ್ತಿದೆ. ಒಳಗೆ ಕಾಯಿ ಕೊಳೆಯು ಹೋಗ್ತಿದೆ. ಇನ್ನೇನು ಮಾರಾಟಕ್ಕೆ ಹೋಗುತ್ತೆ ಎನ್ನುವಾಗಲೇ ಎಡೆಬಿಡದೆ ಸುರಿದ ಮಳೆಯಿಂದಾಗಿ ದಾಳಿಂಬೆ ರೋಗಕ್ಕೆ ತುತ್ತಾಗಿದೆ.
ಲಕ್ಷ-ಲಕ್ಷ ಹಾನಿ, ಬೆಳೆನಾಶ ಮಾಡ್ತಿರೋ ರೈತರು..!
ಏಕಾಏಕಿ ದಂಡಾಣು ಹಾಗೂ ಅಂಗಮಾರಿ ರೋಗ ದಾಳಿ ಇಟ್ಟಿರುವುದರಿಂದ ಹೊಲದಲ್ಲಿನ ದಾಳಿಂಬೆ ಬೆಳೆ ಹಾಳಾಗಿ ಹೋಗಿದೆ. ಹೀಗಾಗಿ ಅನೇಕ ದಾಳಿಂಬೆ ಬೆಳೆಗಾರರು ಗಿಡಗಳನ್ನು ಕಿತ್ತುಹಾಕ್ತಿದ್ದಾರೆ. ರೋಗಕ್ಕೆ ಸಿಲುಕಿದ ಹಣ್ಣು ಕಟ್ ಮಾಡಿ ಗ್ರಾಮದ ಹೊರವಲಯದಲ್ಲಿ ರಾಶಿ ರಾಶಿ ಗುಡ್ಡೆ ಹಾಕಿ ಸುಡುತ್ತಿದ್ದಾರೆ. ಇನ್ನು ಬರಿ ೫೦ ದಿನಗಳು ಕಳೆದಿದ್ದರೆ ಸಾಕಿತ್ತು ಫಸಲು ಕೈಗೆ ಬರ್ತಿತ್ತು, ನಿರಂತರವಾಗಿ ಸುರಿದ ಜಿಟಿಜಿಟಿ ಮಳೆ, ಹವಾಮಾನದಲ್ಲಿನ ಭಾರೀ ಬದಲಾವಣೆ ಬೆಳೆಹಾನಿ ಮಾಡಿದೆ ಇದರಿಂದ ಲಕ್ಷ-ಲಕ್ಷ ನಷ್ಟವಾಗಿದೆ ಎಂದು ರೈತರು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಮ್ ಎದುರು ಅಳಲು ತೋಡಿಕೊಂಡಿದ್ದಾರೆ..
ಭರವಸೆಗಳ ಈಡೇರಿಕೆಗೆ ಕಾಂಗ್ರೆಸ್ ಆದ್ಯತೆ: ಸಚಿವ ಶಿವಾನಂದ ಪಾಟೀಲ
ಔಷಧ ರಸಗೊಬ್ಬರ ಲಕ್ಷ-ಲಕ್ಷ ಸುರಿದ ರೈತರು..!
ಜಿಲ್ಲೆಯಲ್ಲೇ ಅತೀ ಹೆಚ್ಚು ದಾಳಿಂಬೆ ಬೆಳೆಯೋದು ನಾಗಠಾಣ, ಜಬಂಗಿ, ಅಥರ್ಗಾ ಸೇರಿದಂತೆ ನಾಗಠಾಣ ಕ್ಷೇತ್ರ-ಇಂಡಿ ಮತಕ್ಷೇತ್ರ ಕೆಲ ಭಾಗದಲ್ಲಿ. ಪ್ರತಿ ರೈತರು ಬೆಳೆಗೆ ಔಷಧ ಮತ್ತು ರಸಗೊಬ್ಬರಕ್ಕಾಗಿ 3 ಲಕ್ಷದಿಂದ 5 ಲಕ್ಷ ವ್ಯಯ ಮಾಡಿದ್ದಾರೆ. ದುಂಡಾಣು ಅಂಗ ಮಾರಿ ರೋಗಕ್ಕೆ ತುತ್ತಾಗಿ ಬೆಳೆಹಾನಿ ಆಗಿದೆ. ಇದಕ್ಕೆ ಪರಿಹಾರ ಘೋಷಣೆ ಹಾಗೂ ವಿಮಾ ಹಣ ಮಂಜೂರು ಮಾಡಬೇಕು' ಎಂದು ಗ್ರಾಮಸ್ಥರು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಶಾಸಕ ವಿಠ್ಠಲ ಕಟಕದೊಂಡ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ವಿಮೆ ಹಣ ಬಿಡುಗಡೆಗೆ ರೈತರ ಆಗ್ರಹ..!
ಇನ್ನು ರೈತರು ಬೆಳೆಯ ವಿಮಾ ಕಂತು ತುಂಬಿದ್ದಾರೆ. ಸಂಬಂಧಪಟ್ಟ ವಿಮೆ ಕಂಪನಿಗೆ ಸೂಕ್ತ ನಿರ್ದೇಶನ ನೀಡಿ ವಿಮಾ ಹಣ ಬರುವಂತೆ ಕ್ರಮ ಜರುಗಿಸಬೇಕು ಮತ್ತು ರೈತರ ಬೆಳೆಹಾನಿಗೆ ಸಂಬಂಧಿಸಿದಂತೆ ಇಲಾಖೆಗೆ ಸೂಕ್ತ ಆದೇಶ ನೀಡಿ ರೈತರಿಗೆ ಪರಿಹಾರ ನೀಡಬೇಕು' ಎಂದು ಆಗ್ರಹಿಸಿದ್ದಾರೆ. ಒಟ್ಟಾರೆ ಇನ್ನೇನು ಒಂದು ವರೆ-ಎರಡು ತಿಂಗಳಲ್ಲಿ ದಾಳಿಂಬೆ ರೈತರ ಕೈಗೆ ಬರಬೇಕಿತ್ತು. ಆದ್ರೆ ಹವಾಮಾನದಲ್ಲಿ ಉಂಟಾದ ಭಾರೀ ಬದಲಾವಣೆ ರೈತರನ್ನ ಕೈಸುಟ್ಟುಕೊಳ್ಳುವಂತೆ ಮಾಡಿದೆ.