ಯಾದಗಿರಿ: ಭತ್ತ ಧಾರಣೆ ಕುಸಿತ, ಅನ್ನದಾತ ಕಂಗಾಲು

By Kannadaprabha News  |  First Published May 24, 2023, 9:28 PM IST

75 ಕೆಜಿ ಭತ್ತದ ಒಂದು ಚೀಲಕ್ಕೆ ಎರಡು ತಿಂಗಳುಗಳ ಮುಂಚೆ 1600 ರಿಂದ 1700 ರು.ಗಳವರೆಗೆ ಮಾರಾಟವಾಗುತ್ತಿತ್ತು. ಆದರೀಗ, ಅದೇ ತೂಕದ ಭತ್ತಕ್ಕೆ 1400 ರು.ಗಳಿಂದ 1450 ರು.ಗಳ ಕೇಳುತ್ತಿದ್ದಾರೆ. ರಫ್ತು ಕಡಿಮೆಯಾಗಿದ್ದರಿಂದ ಮಾರುಕಟ್ಟೆಯಲ್ಲಿ ದಾಸ್ತಾನು ಉಳಿದಿದೆ 


ನಾಗರಾಜ್ ನ್ಯಾಮತಿ

ಸುರಪುರ(ಮೇ.24): ವಿಧಾನಸಭೆ ಚುನಾವಣೆ ಪೂರ್ವದಲ್ಲಿ ರೈತರಿಗೆ ಆಶಾದಾಯಕವಾಗಿದ್ದ ಭತ್ತದ ಬೆಲೆ ಚುನಾವಣೋತ್ತರ ಪ್ರಕ್ರಿಯೆಗಳ ನಂತರ ಕುಸಿದಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಹೊರರಾಜ್ಯಗಳಿಗೆ ರಫ್ತು ತಗ್ಗಿದ್ದರಿಂದ ಬೆಲೆಯಲ್ಲಿ ಕುಸಿತ ಕಂಡಿದೆ ಎಂದು ಹೇಳಲಾಗುತ್ತಿದೆ. ಭತ್ತದ ಗುಣಮಟ್ಟದಲ್ಲಿ ಕಂಡುಬರುತ್ತಿರುವ ಅಂಶಗಳು (ಬಣ್ಣ ಹಾಗೂ ತುಂಡಾಗುತ್ತಿರುವುದು) ಈ ರಫ್ತು ಕಡಮೆಗೆ ಕಾರಣ ಅನ್ನಲಾಗುತ್ತಿದೆ.

Latest Videos

undefined

75 ಕೆಜಿ ಭತ್ತದ ಒಂದು ಚೀಲಕ್ಕೆ ಎರಡು ತಿಂಗಳುಗಳ ಮುಂಚೆ 1600 ರಿಂದ 1700 ರು.ಗಳವರೆಗೆ ಮಾರಾಟವಾಗುತ್ತಿತ್ತು. ಆದರೀಗ, ಅದೇ ತೂಕದ ಭತ್ತಕ್ಕೆ 1400 ರು.ಗಳಿಂದ 1450 ರು.ಗಳ ಕೇಳುತ್ತಿದ್ದಾರೆ. ರಫ್ತು ಕಡಿಮೆಯಾಗಿದ್ದರಿಂದ ಮಾರುಕಟ್ಟೆಯಲ್ಲಿ ದಾಸ್ತಾನು ಉಳಿದಿದೆ ಅಂತಾರೆ ಭತ್ತ ಬೆಳೆಗಾರರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ 3 ದಿನದಲ್ಲಿ ಸಾಲಬಾಧೆಗೆ ಇಬ್ಬರು ರೈತರ ಆತ್ಮಹತ್ಯೆ

ಸುರಪುರ ಮತ್ತು ಹುಣಸಗಿ ತಾಲೂಕುಗಳಲ್ಲಿ ಹಿಂಗಾರಿನಲ್ಲಿ 25 ಸಾವಿರ ಹೆಕ್ಟೇರ್‌ ಗುರಿ ಹೊಂದಲಾಗಿತ್ತು. ಹೀಗಾಗಿ, 22 ಸಾವಿರ ಹೆಕ್ಟೇರಿನಲ್ಲಿ ಭತ್ತ ಬಿತ್ತನೆ ಮಾಡಲಾಗಿದೆ. 1 ಹೆಕ್ಟೆರ್‌ಗೆ (2.5 ಎಕರೆ) ಅಂದಾಜು ಭತ್ತದ 100 ಚೀಲಗಳನ್ನು (75ಕೆ.ಜಿ.) ತೆಗೆಯಲಾಗುತ್ತದೆ. 22 ಸಾವಿರ ಹೆ. ಪ್ರದೇಶದಲ್ಲಿ ಮಾಡಿದ ಬಿತ್ತನೆ ಶೇ.30 ರಷ್ಟುಮಾತ್ರ ಮಾರಾಟ ಆಗಿದೆ. ಚುನಾಣೆಯ ನಂತರ, ಶೇ.70 ರಷ್ಟು14-15 ಲಕ್ಷ ಚೀಲಗಳ ದಾಸ್ತಾನು ಮಾರಾಟವಾಗದೆ ಹಾಗೆಯೇ ಉಳಿದಿದೆ.
ಆರ್‌.ಎನ್‌.ಆರ್‌., ಕಾವೇರಿ ಸೋನಾ ಸೇರಿದಂತೆ ವಿವಿಧ ತಳಿಗಳಿವೆ. ಹೊಸದಾಗಿ ಕಟಾವ್‌ ಆದ ಭತ್ತದ ಬೆಳೆ 45 ದಿನಗಳಾಗಿದ್ದರೂ ಉತ್ತಮ ಧಾರಣೆ ಸಿಗುತ್ತಿಲ್ಲ ಅನ್ನೋದು ರೈತರ ಅಳಲು. ಶೇ.30 ರಷ್ಟುಬೆಳೆ ಮಾತ್ರ ಮಾರಾಟವಾಗಿದ್ದು, ಇನ್ನುಳಿದ ಶೇ.70 ರಷ್ಟುಬೆಳೆ ಮಾರಾಟವಾಗಿಲ್ಲ. ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆ ಹೆಚ್ಚಾದರೆ ಮಾತ್ರ ಭತ್ತದ ಬೆಲೆ ಹೆಚ್ಚಾಗುವ ಸಾಧ್ಯತೆಯಿದ್ದು, ಇನ್ನೆರಡು ತಿಂಗಳ ನಂತರ ಬೆಲೆಯೇರಿಕೆ ಆಗಬಹುದು ಅಂತಾರೆ ಉದ್ಯಮಿ ಶಿವರಾಜ ಕಲಕೇರಿ.

ಉತ್ಪದನಾ ವೆಚ್ಚ:

ಒಂದು ಎಕರೆ ಭತ್ತ ಬೆಳೆಯಲು ಬೇಸಾಯ, ನಾಟಿ, ಎರಡು ಗೊಬ್ಬರ, ಎರಡು ಬಾರಿ ಕಳೆ ಸ್ವಚ್ಛ, ಕೊಯ್ಲು, ಒಕ್ಕಲು ಸೇರಿ ರೈತರಿಗೆ ಸರಾಸರಿ 25 ಸಾವಿರ ರು.ಗಳಿಗಿಂತಲೂ ಅ​ಧಿಕ ಖರ್ಚು ಬರುತ್ತದೆ. 6 ತಿಂಗಳ ಕಾಲ ಅಷ್ಟೊಂದು ಬಂಡವಾಳ ಹಾಕಿ ಸರಾಸರಿ 20 ರಿಂದ 22 ಕ್ವಿಂಟಾಲ್‌ ಬಂದರೂ ಈಗಿನ ಧಾರಣೆಗೆ 30 ಸಾವಿರ ರು. ದೊರೆಯುತ್ತದೆ. ರೈತನ ಕುಟುಂಬದ ಕೂಲಿ ಲೆಕ್ಕ ಬಿಟ್ಟು 6 ತಿಂಗಳ ದುಡಿಮೆಗೆ ಆತನಿಗೆ ಸಿಗುವುದು 5 ಸಾವಿರ ಮಾತ್ರ ದೊರೆಯುತ್ತದೆ ಎಂದು ಯುವ ರೈತ ಗುಡುದಪ್ಪ ತಳವಾರಗೇರಾ ತಿಳಿಸಿದ್ದಾರೆ.

ಹೆಚ್ಚಿದ ಕಟಾವ್‌ ಬೆಲೆ:

ಎಕರೆ ಭತ್ತ ಕಟಾವ್‌ ಮಾಡಲು 1800 ರಿಂದ 2000 ರು.ಗಳಿದ್ದು, ತೈಲ ಉತ್ಪನ್ನ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ 2100ರಿಂದ 2300 ರು. ವರೆಗೆ ಕಟಾವ್‌ ಮಾಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಭತ್ತದ ಕಟಾವ್‌ ಮಿಷನ್‌ಗಳನ್ನು ಸರಕಾರ ನೀಡಬೇಕು. ಪೆಟ್ರೋಲ್‌ ಖರ್ಚು ರೈತರ ನೀಡಬೇಕು ಎನ್ನುವ ಕಾನೂನುನ್ನು ಸರಕಾರ ಜಾರಿಗೆ ತರಬೇಕು ಎಂದು ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಹಣಮಂತ್ರಾಯ ಮಡಿವಾಳ ತಿಳಿಸಿದ್ದಾರೆ.

ಮೊದಲ ಬಾರಿಗೆ 43 ಡಿಗ್ರಿ ದಾಟಿದ ಉಷ್ಣಾಂಶ ಬಿಸಿಲು, ಯಾದಗಿರಿಯಲ್ಲಿ ಮತ್ತಷ್ಟುಶಿಶುಗಳು ಅಸ್ವಸ್ಥ

ವರುಣನ ಭಯ:

ಕಳೆದ ಒಂದು ವಾರದಿಂದ ಬಿರು ಬಿಸಿಲು ಮತ್ತು ಮೋಡ ಕವಿದ ವಾತಾವರಣ ಮತ್ತು ಸಣ್ಣಗೆ ಗಾಳಿ ಬೀಸುತ್ತಿದೆ. ಮಂಗಳವಾರ ಸಂಜೆ ವೇಳೆಯಲ್ಲಿ ಕೊಂಚ ವರುಣ ಆಗಮಿಸಿದ್ದು, ರೈತರಲ್ಲಿ ದುಗಡದ ವಾತಾರಣ ನಿರ್ಮಾಣವಾಗಿದೆ. ಭತ್ತ ಖರೀದಿದಾರರು ಮನೆಬಾಗಿಲಿಗೆ ಬಂದು ಖರೀದಿಸುತ್ತಿದ್ದವರು ಚುನಾವಣೆ ನಂತರ ಖರೀದಿಗೆ ಮನಸ್ಸು ಮಾಡುತ್ತಿಲ್ಲ. ಧಾರಣೆ ಮತ್ತಷ್ಟುಕುಸಿಯುವ ಭೀತಿಯಿದೆ. ಆದ್ದರಿಂದ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದೇವೆ. ಮಳೆಯ ಭಯ ಹಾಗೂ ದಾಸ್ತಾನಿಗೆ ಜಾಗದ ಕೊರತೆಯಿಂದ ಶೇ. 70ರಷ್ಟುರೈತರು ಬಂದಷ್ಟುಮಾರಲು ಚಿಂತಿಸುತ್ತಿದ್ದೇವೆ ಎಂದು ರೈತ ಶಂಕರಪ್ಪ ಹುಜರತಿ ತಿಳಿಸಿದ್ದಾರೆ.

ಪ್ರತಿ ಕ್ವಿಂಟಲ್‌ಗೆ ಸಾಮಾನ್ಯ ಭತ್ತ 2040 ಗ್ರೇಡ್‌-2060 ರು.ಯಿದೆ. ಯಾದಗಿರಿ ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರ ಆರಂಭವಾಗಿಲ್ಲ. ರಾಯಚೂರು, ಮೈಸೂರು ಭಾಗದಲ್ಲಿ ಆರಂಭಿಸಲಾಗಿದೆ. ನಮಗೂ ಜಿಲ್ಲಾಡಳಿತದಿಂದ ನಿರ್ದೇಶನ ಬಂದರೆ ಖಂಡಿತ ಬೆಂಬಲ ಬೆಲೆ ಭತ್ತ ಖರೀದಿ ಕೇಂದ್ರ ಆರಂಭಿಸುತ್ತೇವೆ ಅಂತ ಸುರಪುರ ಎಪಿಎಂಸಿ ಕಾರ್ಯದರ್ಶಿ ರಾಜಕುಮಾರ ತಿಳಿಸಿದ್ದಾರೆ.  

click me!