ಬೆಳಗಾವಿ: ಹುಕ್ಕೇರಿ ವಿದ್ಯುತ್‌ ಸಹಕಾರಿ ಸಂಘಕ್ಕೆ ‘ಗ್ಯಾರಂಟಿ’ ಹೊರೆ

By Kannadaprabha News  |  First Published May 24, 2023, 8:03 PM IST

ನಾಲ್ಕು ವರ್ಷ ಗತಿಸಿದರೂ ಮಂಜೂರಾಗದ ನೆರೆ ಹಾವಳಿಯ ಕೋಟ್ಯಂತರ ರೂಪಾಯಿ ಪರಿಹಾರದ ನಡುವೆಯೇ ಇದೀಗ ಕಾಂಗ್ರೆಸ್‌ ಗ್ಯಾರಂಟಿ ಯೋಜನೆ ಸಂಸ್ಥೆಯನ್ನು ಸಾಕಷ್ಟುಆರ್ಥಿಕ ಸಂಕಷ್ಟಕ್ಕೆ ನೂಕುವ ಸಾಧ್ಯತೆ ದಟ್ಟವಾಗಿದೆ. ಈ ವಿದ್ಯುತ್‌ ಸಂಘದಿಂದ ವಿದ್ಯುತ್‌ ಸಂಪರ್ಕ ಪಡೆದಿರುವ ಗ್ರಾಹಕರು ಉಚಿತ ವಿದ್ಯುತ್‌ ಪೂರೈಕೆ ಎದುರು ನೋಡುತ್ತಿದ್ದಾರೆ.


ರವಿ ಕಾಂಬಳೆ

ಹುಕ್ಕೇರಿ(ಮೇ.24): ಸಹಕಾರಿ ತತ್ವದ ಮೂಲಕ ಕಳೆದ ಐದು ದಶಕಗಳಿಗೂ ಹೆಚ್ಚು ಕಾಲ ಹುಕ್ಕೇರಿ ತಾಲೂಕಿನಲ್ಲಿ ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್‌ ಪೂರೈಸುತ್ತಿರುವ ಹುಕ್ಕೇರಿ ಗ್ರಾಮೀಣ ವಿದ್ಯುತ್‌ ಸಹಕಾರಿ ಸಂಘಕ್ಕೆ ಇದೀಗ ರಾಜ್ಯ ಸರ್ಕಾರ ಪ್ರತಿ ಮನೆಗೆ 200 ಯುನಿಟ್‌ ವಿದ್ಯುತ್‌ ಉಚಿತ ನೀಡುವುದಾಗಿ ಘೋಷಣೆ ಮಾಡಿರುವುದು ಹೊರೆಯಾಗುವ ಸಾಧ್ಯತೆಯಿದೆ.

Latest Videos

undefined

ನಾಲ್ಕು ವರ್ಷ ಗತಿಸಿದರೂ ಮಂಜೂರಾಗದ ನೆರೆ ಹಾವಳಿಯ ಕೋಟ್ಯಂತರ ರೂಪಾಯಿ ಪರಿಹಾರದ ನಡುವೆಯೇ ಇದೀಗ ಕಾಂಗ್ರೆಸ್‌ ಗ್ಯಾರಂಟಿ ಯೋಜನೆ ಸಂಸ್ಥೆಯನ್ನು ಸಾಕಷ್ಟುಆರ್ಥಿಕ ಸಂಕಷ್ಟಕ್ಕೆ ನೂಕುವ ಸಾಧ್ಯತೆ ದಟ್ಟವಾಗಿದೆ. ಈ ವಿದ್ಯುತ್‌ ಸಂಘದಿಂದ ವಿದ್ಯುತ್‌ ಸಂಪರ್ಕ ಪಡೆದಿರುವ ಗ್ರಾಹಕರು ಉಚಿತ ವಿದ್ಯುತ್‌ ಪೂರೈಕೆ ಎದುರು ನೋಡುತ್ತಿದ್ದಾರೆ.

BUS ACCIDENT: ರಾಮದುರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ, 7 ಜನ ಆಸ್ಪತ್ರೆಗೆ ದಾಖಲು

ಗ್ರಾಹಕ ಸ್ನೇಹಿ ಎಂದೇ ಕರೆಯಲ್ಪಡುವ ಹುಕ್ಕೇರಿ ವಿದ್ಯುತ್‌ ಸಂಘವು ಸಹಕಾರಿ ಕ್ಷೇತ್ರದಡಿ ಸೇವೆ ಸಲ್ಲಿಸುತ್ತಿರುವ ರಾಜ್ಯದ ಏಕೈಕೆ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ನೂತನ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಉಚಿತ ವಿದ್ಯುತ್‌ ಪೂರೈಕೆಯಿಂದ ಮತ್ತಷ್ಟುಆರ್ಥಿಕ ಹೊರೆಯಾಗಲಿದೆ.

ಪ್ರಮುಖವಾಗಿ ಈ ಭಾಗದ ರೈತರ ಜೀವನಾಡಿ ಎನಿಸಿರುವ ಈ ಸಂಸ್ಥೆಗೆ ನೆರೆ ಹಾವಳಿಯಿಂದ 2019ರಲ್ಲಿ . 10 ಕೋಟಿ, 2021ರಲ್ಲಿ .7.60 ಕೋಟಿ ವಿದ್ಯುತ್‌ ಪರಿವರ್ತಕ, ಸಾಧನ, ಸಲಕರಣೆ, ಪರಿಕರಗಳ ನಷ್ಟವಾಗಿತ್ತು. ಆದರೆ, ಇದುವರೆಗೆ ನೆರೆ ಹಾವಳಿಯ ನಯಾ ಪೈಸೆ ಪರಿಹಾರ ನಿಧಿ ಸಂಸ್ಥೆಗೆ ಬಿಡುಗಡೆಯಾಗಿಲ್ಲ. ಜತೆಗೆ ಈ ಸಂಸ್ಥೆ 12500 ಭಾಗ್ಯಜ್ಯೋತಿ, ಕುಟೀರಜ್ಯೋತಿ ಸೇರಿ ಒಟ್ಟು 99,419 ಗೃಹ ಬಳಕೆ ಸಂಪರ್ಕ ಗ್ರಾಹಕರಿದ್ದು, ಇದರಿಂದ ಪ್ರತಿ ತಿಂಗಳು .2.20 ಕೋಟಿ ವಿದ್ಯುತ್‌ ಶುಲ್ಕ ಬಾಕಿಯಿದೆ.

ಇದೇ ವೇಳೆ ಗೃಹ ಬಳಕೆ ಸಂಪರ್ಕಗಳ .18 ಕೋಟಿ ವಿದ್ಯುತ್‌ ಬಿಲ್‌ ಬಾಕಿ ಉಳಿದಿದೆ. ಇದೆಲ್ಲದರ ಮಧ್ಯೆ ಉಚಿತ ವಿದ್ಯುತ್‌ ನೀಡಿದರೆ ಸಂಸ್ಥೆಯ ಆರ್ಥಿಕ ಸ್ಥಿತಿಗತಿ ಏನಾಗಬಹುದು? ಎಂಬುದರ ಕುರಿತು ಅವಲೋಕನ ಶುರುವಾಗಿದೆ.
ಕಾಂಗ್ರೆಸ್‌ ಚುನಾವಣೆಯಲ್ಲಿ ಗೆದ್ದ ಬೆನ್ನಲ್ಲೇ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ವಿದ್ಯುತ್‌ ಬಿಲ್‌ ಕಟ್ಟಲು ನಾಗರಿಕರು ಹಿಂದೇಟು ಹಾಕುತ್ತಿದ್ದಾರೆ. ಆದರೆ, ಹುಕ್ಕೇರಿ ತಾಲೂಕಿನಲ್ಲಿ ಇಂಥ ವಿದ್ಯಮಾನಗಳು ಹೆಚ್ಚಾಗಿ ನಡೆಯುತ್ತಿಲ್ಲ. ಮೊದಲಿನಂತೆಯೇ ಸಾಮಾನ್ಯ ರೀತಿಯಲ್ಲಿ ಜನರು ವಿದ್ಯುತ್‌ ಬಿಲ್‌ ಕಟ್ಟುತ್ತಿದ್ದಾರೆ. ಬಿಲ್‌ ಕಟ್ಟುವುದೇ ಇಲ್ಲ ಎಂದು ಹಠ ಹಿಡಿದ, ತೀರಾ ಸಮಸ್ಯೆ ಎನಿಸಿರುವ ಘಟನೆಗಳು ಕಂಡು ಬರುತ್ತಿಲ್ಲ.

ಸಂಸ್ಥೆಯ ಹೆಚ್ಚಿನ ಸಂಖ್ಯೆಯ ಗ್ರಾಹಕರು ವಿದ್ಯುತ್‌ ಬಿಲ್‌ ಪಾವತಿಸಿ ಪ್ರಾಮಾಣಿಕತೆ ಮೆರೆಯುತ್ತಿರುವುದು ಅಂಕಿ-ಅಂಶಗಳಿಂದ ತಿಳಿದು ಬರುತ್ತಿದ್ದರೆ, ಕೆಲವರು ಉಚಿತ ಎಂದು ಗ್ಯಾರಂಟಿ ಕಾರ್ಡ್‌ ನೀಡಿದ್ದಾರಲ್ಲ ಎಂದು ಆಕಾಶ ನೋಡುತ್ತಿದ್ದಾರೆ.

ಅತಿವೃಷ್ಟಿ: ಜೀವಹಾನಿ ತಡೆಗೆ ಕಟ್ಟು ನಿಟ್ಟಿನ ಕ್ರಮಕ್ಕೆ ಸಿಎಂ ಸಿದ್ದು ಸೂಚನೆ

ರಾಜ್ಯ ಕಾಂಗ್ರೆಸ್‌ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ರಾಜ್ಯಾದ್ಯಂತ ಪ್ರತಿ ಮನೆಗೆ 200 ಯುನಿಟ್‌ ವಿದ್ಯುತ್‌ ಅನ್ನು ಉಚಿತವಾಗಿ ನೀಡುವುದಾಗಿ ಹೇಳಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರ ವಸಿಸಿಕೊಳ್ಳುತ್ತಿದ್ದಂತೆ ಈ ಕುರಿತು ಪ್ರಸ್ತಾಪಿಸುವ ಮೂಲಕ ರಾಜ್ಯದ ಜನರಲ್ಲಿ ಒಂದಷ್ಟುಆಶಾಭಾವ ಮೂಡಿಸಿದ್ದಾರೆ.

ಗೃಹ ಬಳಕೆ ಸಂಪರ್ಕಗಳಿಗೆ ಉಚಿತ ವಿದ್ಯುತ್‌ ಪೂರೈಕೆ ಕುರಿತು ಸರ್ಕಾರದಿಂದ ಸಂಸ್ಥೆಗೆ ಯಾವುದೇ ರೀತಿಯ ಅಧಿಕೃತ ಸೂಚನೆ ಬಂದಿಲ್ಲ. ಸರ್ಕಾರಕ್ಕೆ ಸಮಗ್ರ ಮಾಹಿತಿ ಒದಗಿಸಲು ಪರಿಷ್ಕೃತ ವರದಿ ಸಿದ್ಧಪಡಿಸಲಾಗಿದೆ ಅಂತ ಸ್ಥಾನಿಕ ಎಂಜನಿಯರ್‌ ನೇಮಿನಾಥ ಖೆಮಲಾಪುರೆ ತಿಳಿಸಿದ್ದಾರೆ.  

click me!