ಅಕಾಲಿಕ ಮಳೆಗೆ ಧಾರವಾಡ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ಅನ್ನದಾತರ ಪಾಡಂತು ಹೇಳಲಾರದಷ್ಟು ಕಷ್ಟ ವನ್ನ ಅನುಭವಿಸುತ್ತಿದ್ದಾರೆ.
ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ(ಅ.11): ನಿನ್ನೆ ಸುರಿದ ಅಕಾಲಿಕ ಮಳೆಗೆ ಧಾರವಾಡ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ಅನ್ನದಾತರ ಪಾಡಂತು ಹೇಳಲಾರದಷ್ಟು ಕಷ್ಟವನ್ನ ಅನುಭವಿಸುತ್ತಿದ್ದಾರೆ. ಅನ್ನದಾತರಿಗೆ ಮಳೆರಾಯ ಅಕ್ಷರಶಹಃ ಶನಿ ಮಹಾತ್ಮನಕ್ಕೆ ಹಗಲು ರಾತ್ರಿ ಎನ್ನದೆ ಕಾಡುತ್ತಿದ್ದಾನೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಅಂತ ಅನ್ನದಾತರು ಏಷ್ಯಾನೆಟ್ ಸುವರ್ಣ ನ್ಯೂಸ್ ಮುಂದೆ ಕಣ್ಣೀರು ಹಾಕಿದ್ದಾರೆ.
ಧಾರವಾಡ ಜಿಲ್ಲೆಯಾದ್ಯಂತ ರಾತ್ರಿ ಸುರಿದ ಮಳೆಯಿಂದ ರೈತರು ಬೆಳೆದ ಸೋಯಾಬಿನ್ ಬೇಳೆ ನೀರು ಪಾಲಾಗಿದೆ. ತಾಲೂಕಿನ ಮಾರಡಗಿ ಗ್ರಾಮದ ರೈತರಾದ ಮಕ್ತುಮ್‌ಸಾಬ್ ಮತ್ತು ಗುರುನಾಥ್ ಬಳ್ಳಾರಿ ಈ ಇಬ್ಬರ ರೈತರ ಕಣ್ಣೀರು ಕೋಡಿ ಹರದಿದೆ. ಕಳೆದ ಜೂನ್ ತಿಂಗಳಲ್ಲಿ ಹಾಕಿದ್ದ ಸೋಯಾಬಿಬ್‌ಗ ಬೆಳೆ ಸದ್ಯ ಮಳೆಗೆ ಸಿಲುಕಿ ಮಳೆ ನೀರಿನಿಂದ ಕೊಚ್ಚಿಕ್ಕೊಂಡು ಹೋಗಿದೆ. ಇನ್ನು ಈ ಇಬ್ಬರು ಅನ್ನದಾತರು ಆ ಇದ್ದ ಅರ್ದಮರ್ಧ ಸೋಯಾಬಿನ್ ಕಾಳುಗಳನ್ನ ಕೂಲಿ ಆಳುವಳನ್ನ ಹಚ್ಚಿ ಆರಿಸಿಕೊಳ್ಳುತ್ತಿದ್ದಾರೆ.
ಮಳೆರಾಯನ ಕಾಟಕ್ಕೆ ಹಿಂದಾಯ್ತು ಹಿಂಗಾರಿ!
ರೈತ ಮಕ್ತುಮ್ ಸಾಬ್ ಇವರು ಮಾರಡಿಗಿ ಗ್ರಾಮದಲ್ಲಿ 8 ಎಕರೆ ಸೋಯಾಬಿನ್ ಬೆಳೆ ಬೆಳೆದಿದ್ದನು.ಕಳೆದ ಮೂರು ದಿನದ ಹಿಂದೆ ಕಟಾವು ಮಾಡಿಸಿ ಮಶಿನ್ ಹಾಕಿಸಿ ಬರೋಬ್ಬರಿ 100 ಕ್ಚಿಂಟಲ್ ಸೋಯಾಬಿನ್ ಬೆಳೆ ರಾಶಿ ಮಾಡಿದ್ದರು. ಆದರೆ ನಿನ್ನೆ ಸುರಿದ ಅಕಾಲಿಕ ಮಳೆಗೆ ಇಡಿ ಸೋಯಾಬಿನ್ ಬೆಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.
ಇನ್ನು ನಾನು ಅಂದಾಜು ನಾಲ್ಕರಿಂದ ಐದು ಲಕ್ಷದಷ್ಟು ಸೋಯಾಬಿನ್ ಬೆಳೆ ಕೊಚ್ಚಿಕೊಂಡು ಹೋಗಿದೆ. ಇನ್ನು ಗರುನಾಥ್ ಬಳ್ಳಾರಿ ರೈತ ಐದು ಎಕರೆಯಲ್ಲಿ ಸೂಯಾಬಿನ್ ಬೆಳೆ ಬೆಳೆದು ಮಶಿನ್ ಹಾಕಿಸಿ ರಾಶಿ ಮಾಡಿದ್ದರು. ಸದ್ಯ ಮಳೆಯಿಂದ ಇವರದ್ದು ಕೂಡಾ 3 ಲಕ್ಷದಷ್ಟು ಸೋಯಾಬಿನ್ ಬೆಳೆ ನೀರಿನಲ್ಲಿ ತೇಲಿಕೊಂಡು ಹೋಗಿದೆ. ಸದ್ಯ ಇಡೀ ಜಿಲ್ಲೆಯಲ್ಲಿ ಇವರಿಬ್ಬರ ರೈತರಿಗೆ ಮಳೆಯಾಯ ಕಂಟಕವಾಗಿ ಪರಿಣಮಿಸಿದೆ. ನಮಗೆ ಸರ್ಕಾರ ಪರಿಹಾರವನ್ನ ಕೊಡಬೇಕು ಅಂತ ಕಣ್ಣೀರು ಹಾಕಿದರು.
ಇನ್ನು ಸ್ಥಳಕ್ಕೆ ಬಂದ ಗ್ರಾಮ ಲೆಕ್ಕಾಧಿಕಾರಿ ಬೆಳೆಯನ್ನ ವೀಕ್ಷಣೆ ಮಾಡಿ ವರದಿಯನ್ನ ತೆಗೆದುಕೊಂಡು ಹೋಗಿದ್ದಾರೆ. ಇಬ್ಬರೂ ರೈತರಿಗೆ ಕೂಡಲೇ ಜಿಲ್ಲಾಡಳಿತ ಪರಿಹಾರವನ್ನ ನೀಡಬೇಕು ಮತ್ತು ಜಿಲ್ಲೆಯಲ್ಲಿ ಎಲ್ಲೆಲ್ಲಿ ಬೆಳೆ ಹಾನಿಯಾಗಿದೆ ಅದರ ಬಗ್ಗೆ ವರದಿ ತಯಾರಿಸಿ ಕೂಡಲೇ ಬೆಳೆ ಹಾನಿಯಾದ ರೈತರಿಗೆ ಕೂಡಲೇ ಸರ್ಕಾರ ಪರಿಹಾರವನ್ನ ನೀಡಬೇಕು ಅಂತ ಅಳಲು ತೋಡಿಕೊಂಡಿದ್ದಾರೆ.