ಪಿತೃಪಕ್ಷ ಮಾಸಕ್ಕೆ ಮುದುಡಿದ ವ್ಯಾಪಾರ : ತಿಪ್ಪೆ ಸೇರಿದ ರಾಶಿ ರಾಶಿ ಹೂ

By Kannadaprabha News  |  First Published Sep 27, 2021, 10:45 AM IST
  • ಪಿತೃಪಕ್ಷಗಳ ಮಾಸ ಜಿಲ್ಲೆಯ ಹೂ ಬೆಳೆಗಾರರ ಬೆವರು ಕಸಿದು ಸಂಕಷ್ಟ
  • ಶುಭ ಸಮಾರಂಭದ ಕಾರ್ಯಗಳಿಲ್ಲದ ಕಾರಣಕ್ಕೆ ಜಿಲ್ಲೆಯಲ್ಲಿ ಬೆಳೆಯುವ ತರಹೇವಾರಿ ಹೂ ಕೇಳೋರು ಇಲ್ಲದೇ ರಾಶಿ ರಾಶಿ ಹೂ ತಿಪ್ಪೆಗೆ

ಚಿಕ್ಕಬಳ್ಳಾಪುರ (ಸೆ.27): ಪಿತೃಪಕ್ಷಗಳ ಮಾಸ ಜಿಲ್ಲೆಯ ಹೂ ಬೆಳೆಗಾರರ ಬೆವರು ಕಸಿದಿದ್ದು ಯಾವುದೇ ಶುಭ ಸಮಾರಂಭದ ಕಾರ್ಯಗಳಿಲ್ಲದ ಕಾರಣಕ್ಕೆ ಜಿಲ್ಲೆಯಲ್ಲಿ ಬೆಳೆಯುವ ತರಹೇವಾರಿ ಹೂ ಕೇಳೋರು ಇಲ್ಲದೇ ರಾಶಿ ರಾಶಿ ಹೂ ತಿಪ್ಪೆ ನಿತ್ಯ ಸೇರುತ್ತಿದೆ.

ಹೌದು, ಶ್ರಾವಣ ಮಾಸದಲ್ಲಿ ಸಾಲು ಸಾಲು ಬಂಪರ್‌ಗಳಿಂದ ಹೂ ಬೆಳೆಗಾರರಿಗೆ ಬೆಲೆ ಸಿಕ್ಕಿತ್ತು. ಆದರೆ ಈಗ ಪಿತೃಪಕ್ಷದ ದಿನಗಳು ಬಂದು ಕಾರಣಕ್ಕೆ ಹೂ ಮಾರಾಟಗೊಳ್ಳದೇ ಹಾಕಿದ ಬಂಡವಾಳ ಬಿಡಿ ಸಾಗಾಟದ ವೆಚ್ಚವೂ ಬೆಳೆಗಾರನ ಕೈ ಹಿಡಿಯದೇ ಆರ್ಥಿಕ ನಷ್ಟಕ್ಕೆ ಗುರಿಯಾಗುವತಂಹ ಪರಿಸ್ಥಿತಿ ನಿರ್ಮಾಣವಾಗಿದೆ.

Tap to resize

Latest Videos

ಚಿಕ್ಕಮಗಳೂರು: ಈರುಳ್ಳಿ ಧಾರಣೆ ಕುಸಿತ, ಕಂಗಾಲಾದ ರೈತ

ಹೇಳಿ ಕೇಳಿ ಚಿಕ್ಕಬಳ್ಳಾಪುರ ತಾಲೂಕಿನ ಇಡೀ ಜಿಲ್ಲೆ ಮಾತ್ರವಲ್ಲದ ಬಯಲು ಸೀಮೆ ಜಿಲ್ಲೆಗಳಲ್ಲಿ ಅಧಿಕ ಪ್ರಮಾಣದಲ್ಲಿ ಹೂ ಬೆಳೆಯುವ ಜಿಲ್ಲೆಯಾಗಿ ಹೆಗ್ಗಳಿಕೆ ಪಡೆದಿದೆ. ಇಲ್ಲಿನ ಸೇವಂತಿಗೆ, ತರಹೇವಾರಿ ಗೂಲಾಬಿಯ ಬಟನ್‌ ಹೂವುಗಳು ಕೇರಳ, ಮುಂಬೈ, ಹೈದ್ರಾಬಾದ್‌ಗೆ ದಿನ ಬೆಳೆಗಾದರೆ ಹಾರುತ್ತವೆ. ಅಷ್ಟರ ಮಟ್ಟಗೆ ಚಿಕ್ಕಬಳ್ಳಾಪುರ ಇತ್ತೀಚಿನ ದಿನಗಳಲ್ಲಿ ಪುಷ್ಪೋದ್ಯಕ್ಕೆ ಹೆಸರಾಗಿದೆ. ಆದರೆ ಕೋರೋನಾ ಸಂಕಷ್ಟದಿಂದ ಸತತ ಒಂದೂವರೆ ವರ್ಷದಿಂದ ಲಾಕ್‌ಡೌನ್‌, ಸೀಲ್ಡೌನ್‌ ಹೊಡೆತಕ್ಕೆ ನಲುಗಿದ್ದ ಹೂ ಬೆಳೆಗಾರರು ಎರಡು, ಮೂರು ತಿಂಗಳಿಂದ ಅಷ್ಟೇ ಸುಧಾರಿಸಿಕೊಳ್ಳುತ್ತಿದ್ದಾರೆ. ಆದರೆ ಪಿತೃಪಕ್ಷಗಳ ಎಂಬ ಕಾರಣಕ್ಕೆ ಜಿಲ್ಲೆಯ ಮಾರುಕಟ್ಟೆಯಲ್ಲಿ ಹೂ ದರ ಕುಸಿತ ಕಂಡಿದ್ದು ಲಕ್ಷಾಂತರ ರು, ಬಂಡವಾಳ ಹಾಕಿದ ಹೂ ಬೆಳೆಗಾರರು ವಿಧಿ ಇಲ್ಲದೇ ಕೈಗೆ ಬಂದ ಬೆಲೆಗೆ ಮಾರಾಟ ಮಾಡುವಂತಾಗಿದೆ.

ಕಲಬುರಗಿ: ನಕಲಿ ಹೆಸರು ಬೀಜದ ದಂಧೆಗೆ ರೈತ ಪರೇಶಾನ್‌..!

ಜಿಲ್ಲೆಯಲ್ಲಿ ಬೆಳೆಯುವ ಬಟನ್ಸ್‌ ಹೂ ಅಂದರೆ ಸಣ್ಣ ಗುಲಾಬಿಗೆ ಹೆಚ್ಚು ಬೇಡಿಕೆ ಇದೆ. ಚಿಕ್ಕಬಳ್ಳಾಪುರದಲ್ಲಿ ರೈತರು ಹೆಕ್ಟೇರ್‌ಗಟ್ಟಲೇ ಬರೀ ಹೂ ಬೆಳೆಯುವ ರೈತರು ಇದ್ದಾರೆ. ಆದರೆ ಇದೀಗ ಹೂನ್ನು ಕೇಳೋವರೋ ಇಲ್ಲದೇ ಮಾರುಕಟ್ಟೆಅಂಗಳದಲ್ಲಿ ರಾಶಿ ರಾಶಿ ಹೂ ಅನಾಥವಾಗಿ ಬೀಳುತ್ತಿದ್ದು ಕೆಲವು ರೈತರ ತೋಟಗಳಲ್ಲಿ ಕೀಳದೇ ಹಾಗೆ ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ದಸರಾ, ದೀಪಾವಳಿವರೆಗೂ ಕಾಯಬೇಕು

ಶ್ರಾವಣ ಮಾಸದಲ್ಲಿ ಒಂದಿಷ್ಟುಕೈ ತುಂಬ ಕಾಸು ಮಾಡಿಕೊಂಡಿದ್ದ ಹೂ ಬೆಳೆಗಾರರಿಗೆ ಈಗ ಎದುರಾಗಿರುವ ಪಿತೃಪಕ್ಷಗಳು ಶುಕ್ರದಸೆ ತಪ್ಪಿಸಿದರೂ ಇನ್ನೂ ಹೂಗೆ ಬೇಡಿಕೆ ಬಂದು ಉತ್ತರ ದರ ನಿಗಧಿಯಾಗಲು ದಸರಾ, ದೀಪಾವಳಿ ಹಬ್ಬದವರೆಗೂ ಕಾಯಬೇಕಿದೆ. ಅಲ್ಲಿಯವರೆಗೂ ಅಪಾರ ಪ್ರಮಾಣದ ಹೂ ತಿಪ್ಪೆಗೆ ಎಸೆಯಬೇಕೆಂದು ಎನ್ನುತ್ತಾರೆ ತಾಲೂಕಿನ ದೊಡ್ಡಮರಳಿ ಗ್ರಾಮದ ಹೂ ಬೆಳೆಗಾರ ಚೆನ್ನಕೃಷ್ಣಪ್ಪ.

click me!